Advertisement

Mandya; ರೋಡ್ ರೋಮಿಯೋಗಳ ಕಿರುಕುಳ: 14 ವರ್ಷದ ವಿದ್ಯಾರ್ಥಿನಿ ಆತ್ಮಹ*ತ್ಯೆ

05:11 PM Sep 01, 2024 | Team Udayavani |

ಮಂಡ್ಯ: ರೋಡ್ ರೋಮಿಯೋಗಳ ಕಿರುಕುಳದಿಂದ ನೊಂದು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ(Syudent) ಮಾಡಿಕೊಂಡಿರುವ ಘಟನೆ ತಾಲೂಕಿನ ಹನಕೆರೆ ಗ್ರಾಮದಲ್ಲಿ ನಡೆದಿದೆ.

Advertisement

9ನೇ ತರಗತಿ ವಿದ್ಯಾರ್ಥಿನಿ ಹನಕೆರೆ ಗ್ರಾಮದ ಇಂಪನಾ(14) ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ. ನಾಲ್ವರು ಯುವಕರು ಪ್ರೀತಿಸುವಂತೆ ಕಿರುಕುಳ ನೀಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಪಕ್ಕದ ಮನೆಯ ಇಬ್ಬರು, ಕಚ್ಚಿಗೆರೆ ಹಾಗೂ ಮಲ್ಲನಕುಪ್ಪೆಯ ಇಬ್ಬರು ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ.

ಇಂಪನಾ ಮಾತನಾಡೋದನ್ನ ರೆಕಾರ್ಡ್ ಮಾಡಿಕೊಂಡು ಆಡಿಯೋ ವೈರಲ್ ಮಾಡಲಾಗಿತ್ತು . ಆ ಬಳಿಕ ತೀವ್ರ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ. ಮೃತ ಇಂಪನ ತಂದೆ ಶ್ರೀನಿವಾಸ್ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಂಡ್ಯ ಮಿಮ್ಸ್ ನಲ್ಲಿ ಮೃತ ಇಂಪನಾಳ ಶವ ಪರೀಕ್ಷೆ ನಡೆಸಿ ಪೋಷಕರಿಗೆ ನೀಡಲಾಗಿದೆ.ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next