Advertisement

ಆಸ್ತಿ ವಿಚಾರಕ್ಕೆ ಸಂಬಂಧಿಸಿ ತಂದೆಯಿಂದಲೇ ಮಗನ ಕೊಲೆಗೆ ಯತ್ನ

01:18 PM Dec 26, 2020 | sudhir |

ನಾಗಮಂಗಲ: ಆಸ್ತಿ ವಿಚಾರವಾಗಿ ಕಿರಿಯ ಹೆಂಡಿತಿಯ ಮಗನ ವ್ಯಾಮೋಹದಿಂದ ತನ್ನ ಹಿರಿಯ ಹೆಂಡತಿ ಮಗನನ್ನು
ತಂದೆಯೇ ಕೊಲೆಗೆ ಯತ್ನಿಸಿರುವ ಘಟನೆ ತಾಲೂಕಿನ ಅಂಚೆಭುವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಶಿವಲಿಂಗೇಗೌಡ ಎಂಬ ತಂದೆ ಮತ್ತು ಕಿರಿಯ ಹೆಂಡತಿ ಮಗ ಬಾಲಕೃಷ್ಣ ಎಂಬುವರ ಕೃತ್ಯಕ್ಕೆ ಪ್ರಸನ್ನ (27) ಎಂಬಾತನೆ ಗಾಯಗೊಂಡು ಆಸ್ಪತ್ರೆ ಸೇರಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.

Advertisement

ಗ್ರಾಮದಲ್ಲಿನ ಸ್ನೇಹಿತರ ಜತೆ ಸಮಯ ಕಳೆದ ನಂತರ ರಾತ್ರಿ ಮನೆಗೆ ಮರಳಿ ಬಾಗಿಲು ತೆಗೆಯುವಾಗ, ಕೊಲೆಗಾಗಿ ಸಂಚುಹಾಕಿ ಕಾದು ಕುಳಿತಿದ್ದ ಆರೋಪಿಗಳು, ಮಾರಕಾಸ್ತ್ರಗಳಿಂದ ಹಲ್ಲೆಗೆ ಮುಂದಾದರು. ಅಷ್ಟರಲ್ಲಿ ಗಾಯಾಳು ಪ್ರಸನ್ನನ ಚೀರಾಟ ಕೇಳಿದ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಆರೋಪಿಗಳು ತಾವು ಬಂದಿದ್ದ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.

ಗಾಯಾಳುವನ್ನು ಬಿಜಿ ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಗ್ರಾಮಸ್ಥರು ಕತ್ತಲಲ್ಲಿಯೇ
ಗಿಡ-ಗಂಟೆಗಳ ಪೊದೆಗಳಲ್ಲಿ ಹುಡುಕುತ್ತಿರುವ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಕಾರನ್ನು ಪರಿಶೀಲಿಸಿದಾಗ
ಆರೋಪಿಗಳಿಗೆ ಸಂಬಂಧಿಸಿದ ಕೆಲವು ದಾಖಲೆಗಳು ಸಿಕ್ಕಿವೆ.

ಇದನ್ನೂ ಓದಿ:ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ ಅಧಿಕಾರಿಗಳು: ಉಡುಪಿ ಜಿಲ್ಲಾಧಿಕಾರಿ ಗರಂ

ಆರೋಪಿಗಳ ಪತ್ತೆಗಾಗಿ ಪೊಲೀಸರು ವ್ಯಾಪಕ ಬಲೆ ಬೀಸಿದ್ದಾರೆ. ಪ್ರಕರಣ ಬೆಳ್ಳೂರು ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next