Advertisement
ಕಾಲೋನಿಯ ನಿವಾಸಿ ರೂಪ(30) ಮೃತಪಟ್ಟ ಮಹಿಳೆಯಾಗಿದ್ದಾಳೆ. ಈಕೆಯ ತಾಯಿ ನಾಗಮ್ಮ ಮಗಳ ಸಾವಿನ ವಿಚಾರ ಯಾರಿಗೂ ತಿಳಿಸದೆ ಶವದ ಜೊತೆಯೇ ನಾಲ್ಕು ದಿನ ಕಳೆದಿದ್ದಾರೆ.ನಾಲ್ಕು ದಿನಗಳಿಂದ ಮನೆಯಲ್ಲೇ ಇದ್ದ ಮೃತದೇಹ ಕೊಳೆತು ದುರ್ವಾಸನೆ ಬರಲು ಆರಂಭಿಸಿದೆ. ಆರಂಭದಲ್ಲಿ ಇಲಿ, ಹೆಗ್ಗಣ ಸತ್ತಿರಬಹುದು ಎಂದುಕೊಂಡು ಅಕ್ಕಪಕ್ಕದವರು ಸುಮ್ಮನಿದ್ದರು. ಆದರೆ ದುರ್ವಾಸನೆ ಹೆಚ್ಚಾದ ಪರಿಣಾಮ ಹುಡುಕಾಡಿದ ಜನರಿಗೆ ನಾಗಮ್ಮ ಮತ್ತು ರೂಪ ಮನೆಯಿಂದ ವಾಸನೆ ಬರುತ್ತಿರುವುದನ್ನು ಗಮನಿಸಿದ್ದಾರೆ. ಅಲ್ಲದೆ, ನಾಲ್ಕು ದಿನಗಳಿಂದ ತಾಯಿ-ಮಗಳು ಮನೆಯಿಂದ ಹೊರಬರದೆ ಇದ್ದದ್ದನ್ನು ಗಮನಿಸಿ ಅನುಮಾನಗೊಂಡಿದ್ದಾರೆ.
Related Articles
Advertisement
ಇನ್ನೂ ಕೆಲ ದಿನಗಳಿಂದ ಕುಡಿತದ ಚಟಕ್ಕೆ ತಾಯಿ ಮಗಳಿಬ್ಬರು ಒಳಗಾಗಿದ್ದರಂತೆ. ಪ್ರತಿನಿತ್ಯ ಒಂದಲ್ಲ ಒಂದು ಕಾರಣಕ್ಕೆ ಇಬ್ಬರ ಮಧ್ಯೆ ಜಗಳವಾಗುತ್ತಿತ್ತು ಎಂದು ಸ್ಥಳೀಯರು ಹೇಳುತ್ತಾರೆ. ಆದರೆ ಕಳೆದ ನಾಲ್ಕು ದಿನಗಳಿಂದ ಯಾವುದೇ ಮಾತುಕತೆ ಇಲ್ಲದೇ ಇಬ್ಬರೂ ಸಹ ಮನೆಯಿಂದ ಹೊರಬಾರದೆ ಇದ್ದಾಗ ಅಕ್ಕಪಕ್ಕದವರು ಅನುಮಾನಗೊಂಡಿದ್ದಾರೆ. ತಾಯಿ ನಾಗಮ್ಮ ಸ್ವಲ್ಪ ಮಾನಸಿಕ ಅಸ್ವಸ್ಥೆಯಿಂದ ಬಳಲುತ್ತಿದ್ದರು. ನಾಲ್ಕು ದಿನಗಳಿಂದ ಮಗಳು ರೂಪ ಎಲ್ಲಿಗೋ ಹೋಗಿರಬಹುದು ಎಂದು ಸ್ಥಳೀಯರು ತಿಳಿದುಕೊಂಡಿದ್ದರು.
ಆದರೆ ಮನೆಯಿಂದ ಸೋಮವಾರ ಸಂಜೆ ದುರ್ವಾಸನೆ ಬರುತ್ತಿದ್ದರಿಂದ ಅನುಮಾನಗೊಂಡು ಮನೆ ಬಾಗಿಲು ಹೊಡೆದಾಗ ಘಟನೆ ಬೆಳಕಿಗೆ ಬಂದಿದೆ. ಮೃತ ರೂಪಾ ಸಾವಿಗೆ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಇನ್ನು ರೂಪಾ ಲೋಬಿಪಿ ಅಥವಾ ಹೃದಯಾಘಾತದಿಂದ ಸಾವಾಗಿರಬಹುದೆಂದು ನಗರದ ಪೂರ್ವ ಠಾಣೆಯಲ್ಲಿ ಮಂಗಳವಾರ ದೂರು ದಾಖಲಾಗಿದೆ. ಅದರನ್ವಯ ಪೊಲೀಸರು ಸ್ಥಳ ಮಹಜರು ಮಾಡಿ, ತನಿಖೆ ಆರಂಭಿಸಿದ್ದಾರೆ. ಜೊತೆಗೆ ಆಕೆಯ ಯೂರಿಯಾವನ್ನು ದಾಖಲು ಮಾಡಿಕೊಂಡಿದ್ದಾರೆ. ಶವಾಗಾರಕ್ಕೆ ಮೃತದೇಹ ರವಾನೆ ಮಾಡಲಾಗಿದ್ದು, ಶವ ಪರೀಕ್ಷೆ ಬಳಿಕ ಸಹಜ ಸಾವೋ ಇಲ್ಲವೋ ಎಂಬ ಸತ್ಯ ಹೊರಬರಲಿದೆ.
ಎಲ್ಲ ಆಯಾಮದಲ್ಲೂ ವಿಚಾರಣೆ: ಎಸ್ಪಿಇನ್ನು ರೂಪಾ ಸಾವನ್ನಪ್ಪಿ ಮರ‍್ನಾಲ್ಕು ದಿನ ಕಳೆದಿದ್ದರೂ ಆಕೆಯ ತಾಯಿ ನಾಗಮ್ಮ ಮಾತ್ರ ಮನೆಯಿಂದ ಹೊರ ಬಂದಿಲ್ಲ ಎಂಬುದು ಅಕ್ಕಪಕ್ಕದ ಮನೆಯವರ ವಿಚಾರಣೆಯಿಂದ ಬೆಳಕಿಗೆ ಬಂದಿದ್ದು, ಇನ್ನು ರೂಪಾಳ ತಾಯಿ ಮಾನಸಿಕ ಅಸ್ವಸ್ಥೆ ಬಗ್ಗೆ ನಮಗೆ ಮಾಹಿತಿ ಇಲ್ಲ. ರೂಪಾ ಮತ್ತು ಆಕೆಯ ತಾಯಿ ದುರಭ್ಯಾಸದ ಬಗ್ಗೆ ಮಾಹಿತಿ ಪಡೆದುಕೊಂಡು ರೂಪಾಳ ತಾಯಿಯನ್ನು ವಿಚಾರಣೆಗೆ ಒಳಪಡಿಸಲಾಗುವುದು. ಅಲ್ಲದೆ, ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುವುದು ಎಂದು ಎಸ್ಪಿ ಎನ್.ಯತೀಶ್ ಹೇಳಿದರು.