Advertisement
ಮದ್ದೂರು ತಾಲ್ಲೂಕಿನ 60 ಹಾಗೂ 80 ವರ್ಷದ ವೃದ್ಧರಿಬ್ಬರಿಗೆ ಕೋವಿಡ್, ಮಧುಮೇಹ, ತೀವ್ರ ಉಸಿರಾಟ ಹಾಗೂ ಇತರೆ ಆರೋಗ್ಯ ಸಮಸ್ಯೆಗಳಿಂದ ಬಳಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮಂಡ್ಯ 28, ಮದ್ದೂರು 26, ಮಳವಳ್ಳಿ 7, ಪಾಂಡವಪುರ 27, ಶ್ರೀರಂಗಪಟ್ಟಣ 28, ಕೆ.ಆರ್.ಪೇಟೆ 29, ನಾಗಮಂಗಲ 20 ಮಂದಿಗೆ ಹೊಸದಾಗಿ ಸೋಂಕು ಆವರಿಸಿದೆ. ಹೊರ ಜಿಲ್ಲೆಯ ಒಬ್ಬ ಮಂಡ್ಯ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಿಂದ ಸೋಂಕಿತರ ಸಂಖ್ಯೆ 14096ಕ್ಕೇರಿದೆ. 172 ಚೇತರಿಕೆ:
ಮಂಡ್ಯ 54, ಮದ್ದೂರು 8, ಮಳವಳ್ಳಿ 1, ಪಾಂಡವಪುರ 3, ಶ್ರೀರಂಗಪಟ್ಟಣ 21, ಕೆ.ಆರ್.ಪೇಟೆ 67, ನಾಗಮಂಗಲ 18 ಮಂದಿ ಚೇತರಿಸಿಕೊಂಡಿದ್ದಾರೆ. ಇದುವರೆಗೂ ಜಿಲ್ಲೆಯಲ್ಲಿ 12104 ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ.
Related Articles
ಜಿಲ್ಲೆಯಲ್ಲಿ 1865 ಸಕ್ರಿಯ ಪ್ರಕರಣಗಳಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ 499, ಖಾಸಗಿ ಆಸ್ಪತ್ರೆಗಳಲ್ಲಿ 119, ಕೋವಿಡ್ ಕೇರ್ ಸೆಂಟರ್‌ನಲ್ಲಿ 250 ಹಾಗೂ ಮನೆಗಳಲ್ಲಿ 997 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಟಿ.ಎನ್.ಧನಂಜಯ ತಿಳಿಸಿದ್ದಾರೆ.
Advertisement