Advertisement

ಕೋವಿಡ್ ವಾರ್ಡ್ ನಲ್ಲಿ ಗಂಟೆಗಟ್ಟಲೇ ಇರಿಸಿದ ಶವ : ಸೋಂಕಿತರಲ್ಲಿ ಆತಂಕ

07:00 PM May 08, 2021 | Team Udayavani |

ಮಂಡ್ಯ: ಮಳವಳ್ಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಕೋವಿಡ್ ವಾರ್ಡ್ ನಲ್ಲಿ ಸೋಂಕಿನಿಂದ ಮೃತಪಟ್ಟವರ ಶವವನ್ನು ಗಂಟೆಗಟ್ಟಲೇ ವಾರ್ಡ್ ನಲ್ಲಿ ಇಟ್ಟಿದ್ದರಿಂದ ಇತರೆ ಸೋಂಕಿತರು ಆತಂಕಗೊಂಡ ಘಟನೆ ಶನಿವಾರ ಮುಂಜಾನೆ ನಡೆದಿದೆ.

Advertisement

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಕೋವಿಡ್ ವಾರ್ಡ್ ತುರ್ತು ಘಟಕದಲ್ಲಿ 6 ಮಂದಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಸೋಂಕಿತರು ಶುಕ್ರವಾರ ರಾತ್ರಿ ಸಾವನ್ನಪ್ಪಿದ್ದರು. ಹಲವು ಗಂಟೆಗಳ ಕಾಲ ಶವಗಳನ್ನು ವಾರ್ಡ್ ನಲ್ಲಿ ಇಡಲಾಗಿತ್ತು. ಆಸ್ಪತ್ರೆಯ ಸಿಬ್ಬಂದಿ ಶವಗಳ ಮುಂದೆಯೇ ಸೋಂಕಿತರಿಗೆ ಚಿಕಿತ್ಸೆ ನೀಡಿದ್ದಾರೆ. ಕೊರೊನಾ ಭಯದಲ್ಲಿದ್ದ ಸೋಂಕಿತರಿಗೆ ಮತ್ತಷ್ಟು ಆತಂಕ ಕಾಡಿದೆ.

ಸಾವನ್ನಪ್ಪಿರುವ ಮೃತರ ಶವಗಳನ್ನು ಕೂಡಲೇ ಬೇರೆಡೆಗೆ ಸಾಗಿಸುವಂತೆ ಕರ್ತವ್ಯದಲ್ಲಿದ್ದ ವೈದ್ಯರು ಹಾಗೂ ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದಾರೆ. ನಂತರ ಶವಗಳನ್ನು ಬೇರೆಡೆಗೆ ಸಾಗಿಸಲಾಯಿತು.

ಇದನ್ನೂ ಓದಿ :ಒಂದು ವಾರದೊಳಗೆ ಇಬ್ಬರು ಶಿಕ್ಷಣ ತಜ್ಞರು ಕೋವಿಡ್ ಗೆ ಬಲಿ

ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಮಾಧವ ನಾಯಕ್ ಮಾತನಾಡಿ, ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಶವಗಳನ್ನು ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ಪ್ಯಾಕ್ ಮಾಡಲು ಒಂದೂವರೆ ಗಂಟೆಗಳ ಸಮಯಬೇಕು. ಸಾವನ್ನಪ್ಪಿದ ತಕ್ಷಣವೇ ಶವಗಳನ್ನು ಬೇರೆಡೆ ಸಾಗಿಸಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು.

Advertisement

ತಹಶೀಲ್ದಾರ್ ಎಂ.ವಿಜಯಣ್ಣ ಪ್ರತಿಕ್ರಿಯಿಸಿ, ವೈದ್ಯರು ಕೋವಿಡ್ ಮಾರ್ಗಸೂಚಿಯಂತೆ ಮೃತರ ಶವಗಳನ್ನು ವಾರಸುದಾರರಿಗೆ ನೀಡಿದ್ದಾರೆ. ಘಟನೆಯಿಂದ ಯಾವ ಸೋಂಕಿತರು ಆತಂಕಗೊಂಡಿರಲಿಲ್ಲ. ಈ ಬಗ್ಗೆ ಕರ್ತವ್ಯದಲ್ಲಿದ್ದ ವೈದ್ಯರಿಂದ ಮಾಹಿತಿ ಪಡೆಯಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next