Advertisement
ರಾಮಾನುಜರ ತಿರುತ್ತಂಬಿ ಎಂದೇ ಹೆಸರಾದ ಕಾಂಚೀಪುರಂ ಜಿಲ್ಲೆಯ ಮದುರಮಂಗಲಮ್‌ನ ಅರುಲ್‌ಮಿಗು ಶ್ರೀವೈಕುಂಠ ಪೆರುಮಾಳ್, ಎಂಬಾರ್ ದೇವಾಲಯದಿಂದ ಎರಡನೇ ವರ್ಷದ ಪರಂಪರೆಯ ಸಮ್ಮಿಲನದ ಉದ್ದೇಶದಿಂದ ಕಾಂಚೀಪುರಂ ಜಿಲ್ಲೆಯ ಪ್ರವಾಸೋದ್ಯಮ ಮತ್ತು ಮುಜರಾಯಿ ಇಲಾಖೆ ಜಂಟಿ ಆಯುಕ್ತೆ ಆರ್.ವಾಗ್ಮತಿ ನೇತೃತ್ವದ ಅಧಿ ಕಾರಿಗಳ ತಂಡದೊಂದಿಗೆ ಆಗಮಿಸಿ ವಿಶೇಷವಾಗಿ ತಂದಿದ್ದ ರೇಷ್ಮೆ ವಸ್ತ್ರಗಳನ್ನು ಮೇಲುಕೋಟೆಯಲ್ಲಿ ಛತ್ರಿಚಾಮರದೀವಟಿಗೆಗಳೊಂದಿಗೆ ದೇವಾಲಯದ ಸುತ್ತ ಮೆರವಣಿಗೆ ಮಾಡಿ ಚೆಲುವನಾರಾಯಣಸ್ವಾಮಿ ಮತ್ತು ರಾಮಾನುಜಚಾರ್ಯರಿಗೆ ಸಮರ್ಪಿಸಿದರು.
Related Articles
Advertisement
ಮೇಲುಕೋಟೆಯ ಕಲ್ಯಾಣಿ ಸಮುಚ್ಛ ಯ, ಯೋಗ ನರಸಿಂಹಸ್ವಾಮಿಬೆಟ್ಟ, ಇಲ್ಲಿನ ಭವ್ಯ ಸ್ಮಾರಕಗಳು ಭಾರತೀಯ ಸಂಸ್ಕೃತಿಯನ್ನು ಶ್ರೀಮಂತಗೊಳಿಸಲು ತಮ್ಮದೇ ಕೊಡುಗೆ ನೀಡಿವೆ. ಇಂತಹ ಶ್ರೀಮಂತಿಕೆಯ ಮಹತ್ವವನ್ನು ಮುಂದಿನ ತಲೆಮಾರಿಗೂ ಕೊಂಡೊಯ್ಯಬೇಕಾದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕಿದೆ ಎಂದರು.
ಶ್ರೀಪೆರಂಬೂದೂರಿನ ಚಕ್ರಪಾಣಿಯವರ ಸಂಘಟನೆಯಲ್ಲಿ ನಡೆದ ಅರ್ಥಪೂರ್ಣ ಕಾರ್ಯಕ್ರಮದ ವಸ್ತ್ರ ಸಮರ್ಪಣೆಯಮೆರವಣಿಗೆಯಲ್ಲಿ ಮೇಲುಕೋಟೆ ದೇವಾಲಯದ ಸಿಇಒ ಮಹೇಶ್, ಪಾರುಪತ್ತೇಗಾರರಾದ ಸ್ಥಾನೀಕಂ ಶ್ರೀನಿವಾಸ ನರಸಿಂಹನ್ ಗುರೂಜಿ, ಪರಿಚಾರಕ ಎಂ.ಎನ್.ಪಾರ್ಥಸಾರಥಿ, ಶ್ರೀಪೆರಂಬೂದೂರು ವೈಕುಂಠ ಪೆರುಮಾಳ್ ಎಂಬಾರ್ ದೇವಾಲಯದ ಇಒ ರಾಜಾ ಎಸ್.ಇರುಂಪೆರುವಳದಿ, ಟ್ರಸ್ಟಿ ಪಿ.ನರಸಿಂಹನ್, ಲಕ್ಷ್ಮಣರಾವ್, ವೆಂಕಟೇಶನ್, ಕಾಂಚೀಪುರಂ ವರದರಾಜಸ್ವಾಮಿ ದೇವಾಲಯದ ಸಿಇಒಗಳಾದ ಎಸ್. ಶ್ರೀನಿವಾಸನ್, ಮುತ್ತುಲಕ್ಷ್ಮೀ, ಎಚ್‌ಆರ್‌ಎಂಸಿ ಇನ್ಸ್‌ಪೆಕ್ಟರ್ ಜೆ.ಸುರೇಶಕುಮಾರ್ ಮತ್ತಿತರರಿದ್ದರು.