Advertisement

Mandya: ಸಿಗದ ಜನರ ಬೆಂಬಲ; ನೀರಸ ಬಂದ್

12:10 PM Feb 09, 2024 | Team Udayavani |

ಮಂಡ್ಯ: ಕೆರಗೋಡು ಹನುಮ ಧ್ವಜ ವಿವಾದ ಹಿನ್ನಲೆಯಲ್ಲಿ ಹಿಂದೂಪರ ಸಂಘಟನೆಗಳು ಕರೆ ನೀಡಿದ್ದ ಮಂಡ್ಯ ನಗರ ಬಂದ್ ಗೆ ವ್ಯಕ್ತವಾಗದ ಜನರ ಬೆಂಬಲ ಮಂಡ್ಯ ನಗರ ಬಂದ್ ಸಂಪೂರ್ಣ ನೀರಸವಾಗಿದ್ದು, ಎಂದಿನಂತೆ ಜನ ಜೀವನ ಇದ್ದು, ಸಹಜ ಸ್ಥಿತಿಯಲ್ಲಿರುವ ಮಂಡ್ಯ ನಗರ ಎಂದಿನಂತೆ ಅಂಗಡಿ ಮುಗಟ್ಟುಗಳು ತೆರೆದಿರುವ ವರ್ತಕರು, ಬಸ್, ಆಟೋ ಸೇರಿದಂತೆ ವಾಹನಗಳ ಸಂಚಾರ ಎಂದಿನಂತಿದೆ. ವರ್ತಕರು ಎಂದಿನಂತೆ ವಹಿವಾಟು ನಡೆಸುತ್ತಿದ್ದು, ಜನರ ಸಂಚಾರ ಮಾಮೂಲಿಯಂತಿದೆ.

Advertisement

ಇದರ ನಡುವೆ ವಿವಾದಿತ ಕೇಂದ್ರ ಸ್ಥಳ ಕೆರಗೋಡು ಗ್ರಾಮದಲ್ಲಿ ಬಂದ್ ಗೆ ಬೆಂಬಲ ವ್ಯಕ್ತವಾಗಿದೆ. ಬಹುತೇಕ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬೆಂಬಲ ನೀಡಿದ್ದಾರೆ.

ವಿಎಚ್ ಪಿ, ಭಜರಂಗದಳ, ಶ್ರೀರಾಮ ಭಜನಾ ಮಂಡಳಿಯಿಂದ ಕೆರಗೋಡು ಗ್ರಾಮದಿಂದ ಬೈಕ್ ರ್ಯಾಲಿ ಆರಂಭವಾಗಿದೆ.

ನಗರದ ಸಿಲ್ವರ್ ಜ್ಯುಬಿಲಿ ಪಾಕ್೯ನಲ್ಲಿ ಜಮಾವಣೆಗೊಂಡು, ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಿ ನಂತರ ಜಿಲ್ಲಾಧಿಕಾರಿ ಕಚೇರಿವರೆಗೆ ಮೌನ ಮೆರವಣಿಗೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೆರವಣಿಗೆಯಲ್ಲಿ ಜೆಡಿಎಸ್, ಬಿಜೆಪಿ ಭಾಗವಹಿಸಲಿದ್ದು, ಬಂದ್ ನಿಂದ ದೂರ ಉಳಿದಿವೆ.

Advertisement

Udayavani is now on Telegram. Click here to join our channel and stay updated with the latest news.

Next