ಮಂಡ್ಯ: ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ಇಬ್ಬರು ಅಪ್ರಾಪ್ತ ಬಾಲಕರು ಸೇರಿದಂತೆ ಒಟ್ಟು 10 ಮಂದಿ ದುಷ್ಕರ್ಮಿಗಳನ್ನು ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಸಾಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹುಲಿಕೆರೆ, ಕೆ.ಆರ್.ಸಾಗರ, ಹೊಂಗಳ್ಳಿ ಗ್ರಾಮದವರಾದ ಯಶವಂತ, ಶಶಾಂಕ್, ಕಿಶೋರ್, ಪ್ರೀತಂ, ನಿಶ್ಚಿತ್, ಆಕಾಶ್, ಸಚಿನ್, ಶಿವು, ಚಲುವರಾಜು, ನಂದೀಶ್‌ಗೌಡ ಬಂಧಿತರು. ಇವರಲ್ಲಿ ಇಬ್ಬರು ಅಪ್ರಾಪ್ತ ಬಾಲಕರಿದ್ದು, ಒಬ್ಬ ಕಾಲೇಜು ವಿದ್ಯಾರ್ಥಿ ಇದ್ದಾನೆ. ಇವರ ಬಳಿ ಕೃತ್ಯಕ್ಕೆ ಬಳಸಲು ತಂದಿದ್ದ ಮಚ್ಚು, ಲಾಂಗ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗುರುವಾರ ಮುಂಜಾನೆ 3.15ರ ಸಮಯದಲ್ಲಿ ಕೆ.ಆರ್.ಸಾಗರ-ಇಲವಾಲ ರಸ್ತೆಯ ಡಿ-ಪೋಲ್ ಇಂಟರ್ ನ್ಯಾಷನಲ್ ಸ್ಕೂಲ್ ಬಳಿ ರಸ್ತೆ ಬದಿಯಲ್ಲಿ ಕುಳಿತು ದರೋಡೆ ಮಾಡಲು ಹೊಂಚು ಹಾಕುತ್ತಿದ್ದರು. ಆಗ ಗಸ್ತಿನಲ್ಲಿದ್ದ ಕೆ.ಆರ್.ಸಾಗರ ಪೊಲೀಸರು ಬಂಧಿಸಿ ತನಿಖೆ ನಡೆಸಿದಾಗ ದರೋಡೆ ಸಂಚು ಬೆಳಕಿಗೆ ಬಂದಿದೆ.
ಇದನ್ನೂ ಓದಿ: 70ರ ಅಜ್ಜಿಗೆ ಪೊಂಗಲ್ ಗಿಫ್ಟ್ ಕೊಡಿಸಿದ ಅವಳಿ ಸಹೋದರರು! ಬಾಲಕರ ಕಾರ್ಯಕ್ಕೆ ಶ್ಲಾಘನೆ
ಬoಧಿತರನ್ನು ಶ್ರೀರಂಗಪಟ್ಟಣ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದ್ದು, ನ್ಯಾಯಾಧೀಶರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: BSY ಭ್ರಷ್ಟಾಚಾರದ CD ಮಾತ್ರವಲ್ಲ; ಸಭ್ಯರು ನೋಡಲಾಗದ ಸಿ.ಡಿ ಕೂಡ ಇವೆ!: ಯತ್ನಾಳ್ ಹೊಸ ಬಾಂಬ್