Advertisement

ಮಾಂಡ್‌ಸೋರ್‌ : ಬೋಟ್‌ ಮುಳುಗಿ ಇಬ್ಬರು ಮಹಿಳೆಯರ ಸಾವು

04:58 PM Apr 21, 2017 | udayavani editorial |

ಮಾಂಡ್‌ಸೋರ್‌, ಮಧ್ಯಪ್ರದೇಶ : ಮಾಂಡ್‌ಸೋರ್‌ ಜಿಲ್ಲೆಯ ಶ್ಯಾಮಗಢ ಸಮೀಪದ ಗಾಂಧಿ ಸಾಗರ್‌ ಡ್ಯಾಮ್‌ನಲ್ಲಿ ಬೋಟ್‌ ಮುಳುಗಿದ ದುರಂತದಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. 

Advertisement

ಬೋಟ್‌ನಲ್ಲಿದ್ದ ಇತರ ನಾಲ್ವರು ಮಹಿಳೆಯರಿಗೆ ಈಜು ಗೊತ್ತಿದ್ದು ಅವರು ಕಷ್ಟಪಟ್ಟು ಈಜಾಡಿ ದಡವನ್ನು ತಲುಪಿದ್ದಾರೆ.

ಮೃತ ಮಹಿಳೆಯರನ್ನು ಪ್ರೇಮಾ ಬಾಯಿ (30) ಮತ್ತು ಸಾನಿಬಾಯಿ (60) ಎಂದು ಗುರುತಿಸಲಾಗಿದೆ. ಚಂಬಲ್‌ ನದಿಗೆ ಅಡ್ಡವಾಗಿ ಕಟ್ಟಲಾಗಿರುವ ಗಾಂಧಿ ಸಾಗರ್‌ ಡ್ಯಾಮ್‌ನಲ್ಲಿ ಇವರುಗಳಿದ್ದ ಬೋಟು ಸಾಗುತ್ತಿದ್ದಾಗ ಬಲವಾದ ಗಾಳಿ ಬೀಸಿ ಬೋಟು ಮಗುಚಿಕೊಂಡಿತು ಎಂದು ಹೆಚ್ಚುವರಿ ಜಿಲ್ಲಾ ಕಲೆಕ್ಟರ್‌ ಅರ್ಪಿತ್‌ ವರ್ಮಾ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next