Advertisement

ಮಂದಿರ್‌ ವಹೀ ಬನಾಯೇಂಗೆ

09:23 PM Nov 09, 2019 | Lakshmi GovindaRaju |

ಭಾರತದ ರಾಜಕೀಯ ಇತಿಹಾಸದಲ್ಲಿ ಅದೊಂದು ಮಹಾ ತಿರುವು. ಸ್ವಾತಂತ್ರ್ಯ ನಂತರದಲ್ಲಿ ಕಂಡುಬಂದ ದೊಡ್ಡ ಜನಾಂದೋಲನ. 1990ರ ಸೆಪ್ಟೆಂಬರ್‌- ಅಕ್ಟೋಬರ್‌ನಲ್ಲಿ ಗುಜರಾತ್‌ನ ಸೋಮನಾಥಪುರದಿಂದ ಹೊರಟು, ಅಯೋಧ್ಯೆಯಲ್ಲಿ ಅಂತ್ಯ ಕಂಡಿದ್ದ ಈ ರಥಯಾತ್ರೆಯ ನೇತೃತ್ವ ವಹಿಸಿದ್ದ ಆಗಿನ ಬಿಜೆಪಿ ಅಧ್ಯಕ್ಷ ಲಾಲ್‌ ಕೃಷ್ಣ ಅಡ್ವಾಣಿ. ರಥಯಾತ್ರೆಯ ಉದ್ದೇಶ ನೇರ ಹಾಗೂ ಸರಳ. 1508 ರಲ್ಲಿ ಮೊಘಲರು ಅಯೋಧ್ಯೆಯನ್ನು ವಶಪಡಿಸಿಕೊಂಡ ನಂತರ, ಅಲ್ಲಿ ಶ್ರೀರಾಮನ ಜನ್ಮಸ್ಥಳದಲ್ಲಿ ಇದ್ದಿದ್ದ ದೇಗುಲ ವನ್ನು ಧ್ವಂಸಗೊಳಿಸಿ, ಆ ಜಾಗದಲ್ಲಿ ಬಾಬ್ರಿ ಮಸೀದಿ ನಿರ್ಮಿಸಿದರು ಎಂಬ ಪ್ರತೀತಿಯಿದ್ದು, ಶತಮಾನಗಳಿಂದ ಆ ದ್ವೇಷ ಬೂದಿ ಮುಚ್ಚಿದ ಕೆಂಡದಂತಿತ್ತು. ಆ ಜಾಗದಲ್ಲಿ ಮತ್ತೆ ರಾಮನ ದೇಗುಲ ನಿರ್ಮಾಣವಾಗಬೇಕು.

Advertisement

ಆ ಮೂಲಕ, ಮರ್ಯಾದಾ ಪುರುಷೋತ್ತಮನಿಗೆ ಸಿಗಬೇಕಾದ ಧಾರ್ಮಿಕ ಪೂಜೆ, ಪುನಸ್ಕಾರ ಸಿಗಬೇಕು ಎಂಬ ಆಶಯವನ್ನು ವಿಶ್ವ ಹಿಂದೂ ಪರಿಷತ್‌ ಸೇರಿದಂತೆ ಉತ್ತರ ಭಾರತದ ಅನೇಕ ಹಿಂದೂ ಸಂಘಟನೆಗಳ ಆಶಯವಾಗಿತ್ತು. ಹಿಂದೂಗಳ ಈ ಧ್ವನಿಗೆ ರಾಜಕೀಯ ಅಭಿಯಾನದ ಸ್ಪರ್ಶ ಕೊಟ್ಟಿದ್ದು ಬಿಜೆಪಿ. ರಾಮಜನ್ಮಸ್ಥಳದಲ್ಲಿ ಪುನಃ ರಾಮಮಂದಿರ ಸ್ಥಾಪಿಸುವ ನಿಟ್ಟಿನಲ್ಲಿ ಇಡೀ ದೇಶದ ಹಿಂದೂಗಳನ್ನು ಬಡಿದೆಚ್ಚರಿಸಿ, ಬಾಬ್ರಿ ಮಸೀದಿಯನ್ನು ಕೆಡವಿ, ಅಲ್ಲಿ ರಾಮ ಮಂದಿರ ನಿರ್ಮಿಸಬೇಕು ಎಂಬುದನ್ನು ಮನಗಂಡ ಬಿಜೆಪಿ, ರಥಯಾತ್ರೆಗೆ ನಿರ್ಧರಿಸಿತು.

ಯಾತ್ರೆಯ ರೂಪುರೇಷೆ: ಪಶ್ಚಿಮದಲ್ಲಿ ಸೋಮನಾಥಪುರ, ಪೂರ್ವದಲ್ಲಿ ಅಯೋಧ್ಯೆ- ಇವೆರಡೂ ಹಿಂದೂಗಳ ಧಾರ್ಮಿಕ ಸ್ಥಳಗಳ ಮೇಲೆ ಅತಿ ತೀವ್ರವಾಗಿ ಆದ ಮುಸ್ಲಿಮರ ದಾಳಿ ಅಥವಾ ಅವರ ದುರಾಡಳಿತದ ಸಂಕೇತಗಳೆಂದು ಹಿಂದೂವಾದಿಗಳು ಪ್ರತಿಪಾದಿಸುತ್ತಾರೆ. ಹಾಗಾಗಿ, ರಥಯಾತ್ರೆಯನ್ನು ಈ ಎರಡೂ ಸ್ಥಳಗಳ ಮಧ್ಯೆಯೇ ಆಯೋಜಿಸಲಾಯಿತು. ಅಂದರೆ, ಸೋಮನಾಥಪುರದ ಜ್ಯೋತಿರ್ಲಿಂಗ ದೇಗುಲದಿಂದ ಶುರುವಾಗಿ, ಅಯೋಧ್ಯೆಯಲ್ಲಿ ಮುಕ್ತಾಯವಾಗುವಂತೆ ಆಯೋಜಿಸಲಾಯಿತು.

ದಿನಕ್ಕೆ ಸರಾಸರಿ 300 ಕಿ.ಮೀ. ಸಾಗುತ್ತಿತ್ತು ರಥಯಾತ್ರೆ. ಆ ದೈನಂದಿನ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪ್ರಮುಖ ಪಟ್ಟಣಗಳಲ್ಲಿ ಅಡ್ವಾಣಿಯವರು ಬಹಿರಂಗ ಸಮಾವೇಶ ನಡೆಸುತ್ತಿದ್ದರು. ಒಂದೇ ದಿನದಲ್ಲಿ ಆರೇಳು ಬಹಿರಂಗ ಸಭೆಗಳನ್ನು ಉದ್ದೇಶಿಸಿ ಅಡ್ವಾಣಿ ಮಾತನಾಡುತ್ತಿದ್ದುದು ದಣಿವಿಲ್ಲದ ಅವರ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ ಎನ್ನುವಂತಿತ್ತು.

ಎಲ್ಲಿಂದ ಎಲ್ಲಿಗೆ?: ಸೋಮನಾಥಪುರದಿಂದ ಹೊರಟಿದ್ದ ಯಾತ್ರೆ, ರಾಜ್‌ಕೋಟ್‌, ಅಹ್ಮದಾಬಾದ್‌, ವಡೋದರಾ, ಸೂರತ್‌, ಮಹಾರಾಷ್ಟ್ರದ ಥಾಣೆ, ಮುಂಬೈ, ಪುಣೆ, ಸೋಲಾಪುರ, ಅವಿಭಜಿತ ಆಂಧ್ರಪ್ರದೇಶದ ಹೈದರಾಬಾದ್‌, ಮಧ್ಯಪ್ರದೇಶದ ನಾಗ್ಪುರ, ಭೋಪಾಲ್‌, ಇಂದೋರ್‌, ಮಂಡಸೋರ್‌, ರಾಜಸ್ಥಾನದ ಉದಯ್‌ಪುರ್‌, ಬೀವಾರ್‌, ಖೇತ್ರಿ, ಹರ್ಯಾಣದ ರೋಹrಕ್‌ ಮೂಲಕ ಸಾಗಿ ದೆಹಲಿಗೆ (ಅ. 19) ಆಗಮಿಸಿ, ಕೆಲ ದಿನಗಳ ಕಾಲ ತಟಸ್ಥವಾಯಿತು. ನಂತರ, ಆಗಿನ ಅವಿಭಜಿತ ಬಿಹಾರದ ಧನ್‌ಬಾದ್‌ಗೆ 1990ರ ಅ. 20ರಂದು ಶುರುವಾಗಿ, ರಾಂಚಿ, ರಾಮಗಢ, ಗಯಾ, ಸಮಷ್ಟಿ ಪುರ, ಮುಜಫ‌ರ್‌ಪುರ, ದೇವರ್ಜಾ ಮೂಲಕ ಉತ್ತರ ಪ್ರದೇಶವನ್ನು ಪ್ರವೇಶಿಸಿತು. ಆನಂತರ, ವಾರಾಣಸಿ, ಅಲಹಾಬಾದ್‌, ಕಾನ್ಪುರ, ಲಖೊ°à, ಫೈಜಾಬಾದ್‌ ತಲುಪಿ ಆನಂತರ ಅಯೋಧ್ಯೆಗೆ ಸೇರಿತು.

Advertisement

ಸವಾಲು, ಅಡೆತಡೆಗಳನ್ನು ದಾಟಿ ಸಾಗಿತು…: ಅಡ್ವಾಣಿಯವರು ರಥಯಾತ್ರೆಯನ್ನು ಶುರುಮಾಡುವ ಸುದ್ದಿ ಹೊರಬೀಳುತ್ತಲೇ ಎಡಪಕ್ಷಗಳ ನಾಯಕರ ಕಣ್ಣುಗಳು ಕೆಂಪಾಗಿದ್ದವು. ಹಾಗಾಗಿ, ಸೋಮನಾಥಪುರದಿಂದ ದೆಹಲಿಗೆ ಆಗಮಿಸುವ ಮಾರ್ಗ ಮಧ್ಯೆ ಆಯಾ ರಾಜ್ಯಗಳಲ್ಲಿ ರಥಯಾತ್ರೆ ವಿರುದ್ಧ ಪ್ರತಿಭಟನೆಗಳು, ಅಲ್ಲಲ್ಲಿ ಹಿಂಸಾಚಾರಗಳು ನಡೆದವು. ಇದರ ಆಧಾರದಲ್ಲಿ, ರಥಾಯಾತ್ರೆ ದೆಹಲಿಗೆ ಆಗಮಿಸುತ್ತಲೇ ಅಡ್ವಾಣಿಯವರನ್ನು ಪೊಲೀಸರು ವಶಕ್ಕೆ ಪಡೆಯುವಂತೆ ಮಾಡಿ, ರಥಯಾತ್ರೆಗೆ ಬ್ರೇಕ್‌ ಹಾಕಲು ಆಗಿನ ಪ್ರಧಾನಿ ವಿ.ಪಿ. ಸಿಂಗ್‌ ನೇತೃತ್ವದ ಸರ್ಕಾರ ಮನಸ್ಸು ಮಾಡಿತ್ತು. ಸರ್ಕಾರದ ಇಚ್ಛೆಯನ್ನು ತಿಳಿದ ಅಡ್ವಾಣಿ, ರಥಯಾತ್ರೆ ದೆಹಲಿಗೆ ಬರುತ್ತಲೇ ಕೆಲ ದಿನಗಳ ಕಾಲ ಅದನ್ನು ಸ್ಥಗಿತಗೊಳಿಸಿಬಿಟ್ಟರು. ಪರಿಣಾಮ, ದೆಹಲಿಯಲ್ಲಿ ರಥಯಾತ್ರೆ ವಿರುದ್ಧ ನಡೆಯಬೇಕಿದ್ದ ಹರತಾಳ, ಪ್ರತಿಭಟನೆಗಳು ಗರಿಗೆದರಲಿಲ್ಲ. ಅದರಿಂದ, ಅಡ್ವಾಣಿಯವರ ಬಂಧನವೂ ಆಗಲಿಲ್ಲ!

ಮತ್ತೆ ಯಾತ್ರೆ, ಮತ್ತೆ ಗಲಾಟೆ: ರಥಯಾತ್ರೆಯು ಬಿಜೆಪಿಯೇ ಅಧಿಕಾರದಲ್ಲಿದ್ದ ಉತ್ತರ ಪ್ರದೇಶಕ್ಕೆ ಲಗ್ಗೆಯಿಟ್ಟಿತು. ಅಲ್ಲಿ ಆಗ ಬಿಜೆಪಿಯ ಕಲ್ಯಾಣ್‌ಸಿಂಗ್‌ ಸರ್ಕಾರವಿತ್ತಾ ದರೂ, ಕಿಡಿಗೇಡಿಗಳಿಂದಾಗಿ ರಥಯಾತ್ರೆಗೆ ಭಾರೀ ತೊಂದರೆ ಉಂಟಾಯಿತು. ರಥಯಾತ್ರೆ ಹೋದ ಕಡೆಯಲ್ಲೆಲ್ಲಾ ಸಾವಿರಾರು ಸಂಖ್ಯೆ ಯಲ್ಲಿ ಜನರು ಅಡ್ವಾಣಿಯವರನ್ನು ಸ್ವಾಗತಿಸುತ್ತಿ ದ್ದುದನ್ನು ನೋಡಿ ಒಳಗೊಳಗೆ ಉರಿದುಕೊಂಡ ಜನರು, ದೇಶದ ಅಲ್ಲಲ್ಲಿ ಮತೀಯ ಗಲಭೆಗ ಳನ್ನು ಸೃಷ್ಟಿಸಿದರು. ಜೈಪುರ, ಜೋಧಪುರ, ಅಹ್ಮದಾಬಾದ್‌, ಬರೋಡಾ, ಹೈದರಾಬಾದ್‌ನಲ್ಲಿ ಗಲಭೆಗಳು ನಡೆದವು. ಆ ಘಟನೆಗಳಲ್ಲಿ ನೂರಾರು ಹಿಂದೂಗಳು, ಮುಸಲ್ಮಾನರು ಸಾವನ್ನಪ್ಪಬೇಕಾಯಿತು. ಹೆಚ್ಚಿನ ಗಲಭೆಗಳು ಅಯೋಧ್ಯೆಯಿರುವ ಉತ್ತರ ಪ್ರದೇಶದಲ್ಲೇ ನಡೆದವು. ಅಲ್ಲಿಯೇ 224 ಜನರು ಸಾವಿಗೀಡಾಗಿದ್ದರು. ಆದರೆ, ಇದ್ಯಾವುದೂ ರಥಯಾತ್ರೆಯ ಧ್ಯೇಯಕ್ಕೆ ತೊಂದರೆಯುಂಟು ಮಾಡಲಿಲ್ಲ. ರಥಯಾತ್ರೆ ಅಯೋಧ್ಯೆಯವರೆಗೆ ಸುಗಮವಾಗಿ ಸಾಗಿತು.

ವಿದೇಶಗಳಲ್ಲಿ ಶಿಲಾಪೂಜೆ: 1989ರ ಆಗಸ್ಟ್‌ನಲ್ಲಿ ಯುರೋಪಿನ ಹಿಂದೂಗಳ ಬೃಹತ್‌ ಸಮ್ಮೇಳನವು ಲಂಡನ್ನಿನಲ್ಲಿ ನಡೆಯಿತು. ಸ್ವಾಮಿ ಚಿನ್ಮಯಾನಂದರ ನೇತೃತ್ವದಲ್ಲಿ 300 ಪ್ರತಿನಿಧಿಗಳು ಭಾರತದಿಂದ ಹೋಗಿ ಅದರಲ್ಲಿ ಭಾಗವಹಿಸಿದ್ದರು. ಲಂಡನ್‌ ಮೇಯರ್‌ ಉಪಸ್ಥಿತರಿದ್ದರು. 39 ದೇಶಗಳ ಪೂಜಿತ ಶಿಲೆಗಳು ಅಲ್ಲಿಗೆ ಬಂದಿದ್ದವು. ಇವುಗಳಲ್ಲಿ ಬ್ರಿಟನ್‌, ಅಮೆರಿಕ, ಕೆನಡಾ, ಡೆನ್ಮಾರ್ಕ್‌, ಸ್ವೀಡನ್‌, ಹಾಲೆಂಡ್‌, ಸ್ಪೇನ್‌, ಜರ್ಮನಿ, ಬೆಲ್ಜಿಯಂ, ಪೋರ್ಚುಗಲ್‌, ಇಸ್ರೇಲ್‌, ಶ್ರೀಲಂಕಾ, ಬಾಂಗ್ಲಾದೇಶ, ಚೀನಾ, ಥಾಯ್ಲೆಂಡ್‌, ಸಿಂಗಾಪುರ, ಮಲೇಷ್ಯಾ, ಹಾಂಕಾಂಗ್‌, ಆಸ್ಟ್ರೇಲಿಯ, ಸುರಿನಾಂ, ದಕ್ಷಿಣ ಆಫ್ರಿಕಾ, ಬೋಟ್‌ ವಾನ್‌, ಮಾರಿಷಸ್‌, ಕೀನ್ಯಾ, ನೇಪಾಳ ಮುಂತಾದ ದೇಶಗಳ ವಿವಿಧ ಲೋಹಗಳ ಶಿಲೆಗಳು ಬಂದವು. ಚೀನಾದಿಂದ ಬಂದಿದ್ದ ವಶಿರ ಮಣಿ ಶಿಲೆಯು ಅವುಗಳಲ್ಲಿ ಅತ್ಯಂತ ಬೆಲೆ ಬಾಳುವುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next