Advertisement
ಭಾರತದ ವನಿತೆಯರು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಕ್ಲೀನ್ ಸ್ವೀಪ್ ಯೋಜನೆಯೊಂದಿಗೆ ಆಡಲಿಳಿದರು. ನಾಯಕಿ ಸ್ಮೃತಿ ಮಂಧಾನ ಕೇವಲ 70 ಎಸೆತಗಳಲ್ಲಿ ಶತಕ ಪೂರ್ಣಗೊಳಿಸುವ ಮೂಲಕ ಮಹಿಳಾ ಕ್ರಿಕೆಟ್‌ನಲ್ಲಿ ಭಾರತದ ವೇಗದ ಏಕದಿನ ಅಂತಾರಾಷ್ಟ್ರೀಯ ಶತಕ ಸಿಡಿಸಿದ ದಾಖಲೆ ಬರೆದರು. 80 ಎಸೆತಗಳಲ್ಲಿ 135 ರನ್ ಬಾರಿಸಿ ಅಬ್ಬರಿಸಿ ಔಟಾದರು.12ಬೌಂಡರಿ ಮತ್ತು 7 ಸಿಕ್ಸರ್ ಸಿಡಿಸಿದರು.
Related Articles
Advertisement
ಕಳೆದ ವರ್ಷ ಬೆಂಗಳೂರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹರ್ಮನ್ ಪ್ರೀತ್ ಕೌರ್ 87 ಎಸೆತಗಳಲ್ಲಿ ಶತಕ ಸಿಡಿಸಿದ್ದರು.ಆ ದಾಖಲೆಯನ್ನು ಸ್ಮೃತಿ ಮುರಿದರು. ತನ್ನ 10 ನೇ ಏಕದಿನ ಶತಕದೊಂದಿಗೆ, ಮಂಧಾನಾ ಇಂಗ್ಲೆಂಡ್‌ನ ಟಮ್ಮಿ ಬ್ಯೂಮಾಂಟ್ ಜತೆಗೆ ಮಹಿಳಾ ಏಕದಿನ ಅತಿ ಹೆಚ್ಚು ಶತಕಗಳ ಸಾರ್ವಕಾಲಿಕ ಪಟ್ಟಿಯಲ್ಲಿ ಜಂಟಿ ಮೂರನೇ ಸ್ಥಾನಕ್ಕೆ ಏರಿದರು. ಪಟ್ಟಿಯಲ್ಲಿ ಆಸ್ಟ್ರೇಲಿಯದ ಮಾಜಿ ನಾಯಕಿ ಮೆಗ್ ಲ್ಯಾನಿಂಗ್ (15) ಆಗ್ರ ಸ್ಥಾನದಲ್ಲಿದ್ದಾರೆ.
ಇದುವರೆಗಿನ ಏಕದಿನ ದಾಖಲೆ ಮೊತ್ತಗಳು491/4 – ನ್ಯೂಜಿಲ್ಯಾಂಡ vs ಐರ್ಲೆಂಡ್ 2018
455/5 – ನ್ಯೂಜಿಲ್ಯಾಂಡ್ vs ಪಾಕಿಸ್ಥಾನ, 1997
440/3 – ನ್ಯೂಜಿಲ್ಯಾಂಡ್ vs ಐರ್ಲೆಂಡ್, 2018
435/5 – ಭಾರತ vs ಐರ್ಲೆಂಡ್, ಇಂದು
418 – ನ್ಯೂಜಿಲ್ಯಾಂಡ್ vs ಐರ್ಲೆಂಡ್, 2018 ವನಿತಾ ಏಕದಿನದಲ್ಲಿ ಭಾರತದ ಅತಿ ಹೆಚ್ಚು ವೈಯಕ್ತಿಕ ಸ್ಕೋರ್
188 – ದೀಪ್ತಿ ಶರ್ಮ vs ಐರ್ಲೆಂಡ್ , ಪಾಚೆಫ್‌ಸ್ಟ್ರೂಮ್, 2017
171* – ಹರ್ಮನ್‌ಪ್ರೀತ್ ಕೌರ್ vs ಆಸ್ಟ್ರೇಲಿಯ ಡರ್ಬಿ, 2017
154 – ಪ್ರತೀಕಾ ರಾವಲ್ vs ಐರ್ಲೆಂಡ್, ರಾಜ್‌ಕೋಟ್, 2025
143* – ಹರ್ಮನ್‌ಪ್ರೀತ್ ಕೌರ್ vs ಇಂಗ್ಲೆಂಡ್- ಕ್ಯಾಂಟರ್ಬರಿ, 2022
138* – ಜಯ ಶರ್ಮ vs ಪಾಕಿಸ್ಥಾನ, ಕರಾಚಿ, 2005