Advertisement

ಐಸಿಸಿ ವರ್ಷದ ಮಹಿಳಾ ಕ್ರಿಕೆಟಿಗ ಪ್ರಶಸ್ತಿಗೆ ಸ್ಮೃತಿ ಮಂಧನಾ ನಾಮ ನಿರ್ದೇಶನ

07:59 PM Dec 31, 2021 | Team Udayavani |

ಮುಂಬಯಿ : ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧನಾ ಅವರು ಎಲ್ಲಾ ಸ್ವರೂಪಗಳಲ್ಲಿ ಅದ್ಭುತ ಪ್ರದರ್ಶನಕ್ಕಾಗಿ ಐಸಿಸಿ ವರ್ಷದ ಮಹಿಳಾ ಕ್ರಿಕೆಟಿಗ ಪ್ರಶಸ್ತಿಗೆ ಶುಕ್ರವಾರ ನಾಮನಿರ್ದೇಶನಗೊಂಡಿದ್ದಾರೆ.

Advertisement

ಮಂಧನಾ ಅವರು ಗುರುವಾರ ಮಹಿಳಾ ಟಿ20 ವರ್ಷದ ಆಟಗಾರ್ತಿಯಾಗಿ ನಾಮನಿರ್ದೇಶನಗೊಂಡಿದ್ದರು. ಇಂಗ್ಲೆಂಡ್‌ನ ಟಮ್ಮಿ ಬ್ಯೂಮಾಂಟ್, ದಕ್ಷಿಣ ಆಫ್ರಿಕಾದ ಲಿಜೆಲ್ ಲೀ ಮತ್ತು ಐರ್ಲೆಂಡ್‌ನ ಗೇಬಿ ಲೂಯಿಸ್ ಅವರೊಂದಿಗೆ ಮಂಧಾನಾ ಅವರು ಅಗ್ರ ಪ್ರಶಸ್ತಿಗೆ ಶಾರ್ಟ್ ಲಿಸ್ಟ್ ಆಗಿದ್ದಾರೆ.

2021 ರ ಅವಧಿಯಲ್ಲಿ ಮಹಿಳಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ (ಟೆಸ್ಟ್‌ಗಳು, ODIಗಳು ಮತ್ತು ಟಿ 20I ಅಂತಾರಾಷ್ಟ್ರೀಯ ) ಅತ್ಯುತ್ತಮ ಪ್ರದರ್ಶನ ನೀಡುವವರಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ. ವಿಜೇತರನ್ನು ಜನವರಿ 23 ರಂದು ಘೋಷಿಸಲಾಗುತ್ತದೆ.

25 ರ ಹರೆಯದ ಬಲಗೈ ಆರಂಭಿಕ ಬ್ಯಾಟರ್ ಮಂಧನಾ ಪ್ರಸಕ್ತ ವರ್ಷದಲ್ಲಿ 22 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 38.86 ಸರಾಸರಿಯಲ್ಲಿ ಒಂದು ಶತಕ ಮತ್ತು ಐದು ಅರ್ಧ ಶತಕಗಳೊಂದಿಗೆ 855 ರನ್ ಗಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next