Advertisement
ಮಂಡೆಕೋಲು: ಬ್ರಿಟಿಷರ ಆಡಳಿತ ಕಾಲದಲ್ಲಿ ಗ್ರಾಮಸ್ಥರಿಗೆ ಕಾನೂನಿನ ಅರಿವು ಮೂಡಿಸುವ ಉದ್ದೇಶದಿಂದ ಗ್ರಾಮದ ಹಿರಿಯ ರಾಮಣ್ಣ ಹೆಬ್ಟಾರ್ ಆರಂಭಿಸಿದ ಶಾಲೆ. ನಿಸರ್ಗ ಸಿರಿಯ ಮಧ್ಯೆ ತಲೆಯಿತ್ತಿ ನಿಂತಿರುವ ಮಂಡೆಕೋಲು ಸ.ಉ.ಹಿ.ಪ್ರಾ. ಶಾಲೆಗೆ ಈಗ 107ರ ಹರೆಯ.
ಶಾಲೆಯು 1.97 ಎಕ್ರೆಯಷ್ಟು ಜಾಗ ಹೊಂದಿದೆ. ಆರಂಭವಾಗಿದ್ದು 1912ರಲ್ಲಿ. ಮೂಲಸೌಕರ್ಯಗಳಿಲ್ಲದೆ ಹೊರ ಜಗತ್ತಿಗೆ ಅಪರಿಚಿತವಾಗಿದ್ದ ಮಂಡೆಕೋಲು ಪರಿಸರದಲ್ಲಿ ಶಾಲೆ ಆರಂಭಿಸುವ ಕನಸು ಹೊತ್ತು ನಡೆದವರು ರಾಮಣ್ಣ ಹೆಬ್ಟಾರ್. ಆ ಕಾಲದಲ್ಲಿ ಸುಳ್ಯ ತಾಲೂಕಿನಲ್ಲಿ ಇದ್ದುದು ಬೆರಳಣಿಕೆಯ ಶಾಲೆಗಳು. ಮಂಡೆಕೋಲು ಗ್ರಾಮಸ್ಥರು ಅಕ್ಷರ ಕಲಿತು ಸಂಸ್ಕಾರವಂತರಾಗಲಿ ಎಂಬ ಉದ್ದೇಶದಿಂದ ಗ್ರಾಮದ ಕುಂಞ ರಾಮ ಮಾಸ್ತರ್ ಹಾಗೂ ಬೆಳ್ಳಿ ಮಾಸ್ತರ್ ಜತೆಗೂಡಿ ಊರಿನವರ ಸಹಕಾರದಿಂದ 1912 ಅ. 25ರಂದು ಶಾಲೆ ಆರಂಭಿಸಿದರು. ಮೊದಲಿಗೆ ಕುಂಞ ಕಾಮ ಮಾಸ್ಟರ್ ಅವರ ಮನೆಯಲ್ಲಿ, ಬಳಿಕ ಈಗಿನ ಅಂಚೆ ಕಚೇರಿ ಸಮೀಪದ ಸೋಗೆ ಮಾಡಿನ ಕಟ್ಟಡದಲ್ಲಿ ತರಗತಿಗಳನ್ನು ನಡೆಸಲಾಯಿತು. ಹಗಲು ವರ್ಷಗಳ ಬಳಿಕ ಮಂಡೆಕೋಲು ಪೇಟೆ ಮಧ್ಯದಲ್ಲಿದ್ದ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು.
Related Articles
ಆರಂಭದಲ್ಲಿ 1ನೇ ತರಗತಿಯಿಂದ ಶುರುವಾಗಿ 5ನೇ ತರಗತಿವರೆಗೆ ದಾಖಲಾತಿ ನಡೆದು ಜಿಲ್ಲಾ ಬೋರ್ಡ್ ಎಲಿಮೆಂಟರಿ ಶಾಲೆಯಾಗಿ ನಾಮಕರಣಗೊಂಡಿತು. ಶಾಲೆಯ ಸ್ಥಾಪಕ ರಾಮಣ್ಣ ಹೆಬ್ಟಾರ್ ಅವರ ಪುತ್ರ ಶೇಷಪ್ಪ ಹೆಬ್ಟಾರ್ ಶಾಲೆಗೆ ದಾಖಲಾತಿ ಪಡೆದ ಮೊದಲ ವಿದ್ಯಾರ್ಥಿ.
Advertisement
ಲೇಬರ್ ಸ್ಕೂಲ್ ಸ್ಥಾಪನೆಮಂಡೆಕೋಲು ಗ್ರಾ.ಪಂ. ಕಟ್ಟಡದ ಸಮೀಪ ದಾಮೋದರ ಮಾಸ್ಟರ್ ಗೇಟಿನ ಬಳಿ ಕಟ್ಟಡದಲ್ಲಿ ಲೇಬರ್ ಸ್ಕೂಲ್ ಆರಂಭಿಸಲಾಯಿತು. ಇದೇ ಸಂದರ್ಭದಲ್ಲಿ ಶಾಲೆ ಮಂಡೆಕೋಲು ಒಡ್ಡಿಂಚಾಲು ಸೇತುವೆಯ ಇನ್ನೊಂದು ಬದಿಯಲ್ಲಿದ್ದ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. 1963ರಲ್ಲಿ 6ನೇ ತರಗತಿ ಆರಂಭ
ಹಲವು ವರ್ಷಗಳ ಬಳಿಕ ಸರಕಾರಿ ಜಾಗವನ್ನು ಶಾಲೆಗೆ ವರ್ಗಾಯಿಸುವ ಚಿಂತನೆ ನಡೆಯಿತು. ಹೊಸ ಕಟ್ಟಡಕ್ಕೆ ಶಾಲೆಯನ್ನು ಸ್ಥಳಾಂತರವಾಯಿತು. ಮೊದಲಿಗೆ ಸಭಾಂಗಣ ಮಾದರಿಯ ಕಟ್ಟಡ ಮತ್ತು ಶಿಕ್ಷಕರ ಕೊಠಡಿ ಮಾತ್ರ ಇದ್ದವು. ಕಾಲ ಕ್ರಮೇಣ ಶಾಲೆಯ ಸೌಲಭ್ಯಗಳು ಹೆಚ್ಚಿದವು. ದೇಶಕ್ಕೆ ಸ್ವಾತಂತ್ರÂ ಲಭಿಸಿದ ಬಳಿಕ ಕಟ್ಟಡ ವಿಸ್ತರಣೆಗೊಂಡಿತು. ಮೇಲ್ಭಾಗದಲ್ಲಿ ಮೈದಾನಕ್ಕೆ ಹೊಂದಿಕೊಂಡು ಶಾಲಾ ಕಟ್ಟಡ ಹಾಗೂ ರಂಗಮಂದಿರ ನಿರ್ಮಿಸಲಾಯಿತು. 1963ರಲ್ಲಿ 6ನೇ ತರಗತಿ ಹಾಗೂ 1977ರಲ್ಲಿ ಸ.ಹಿ.ಪ್ರಾ. ಶಾಲೆ ಪ್ರಾರಂಭವಾದವು. 1979ರಲ್ಲಿ ಬಾಲವಾಡಿ ಮತ್ತು 2007ರಲ್ಲಿ 8ನೇ ತರಗತಿಗಳನ್ನು ಆರಂಭಿಸಲಾಯಿತು. ಸುಂದರ ಕೈತೋಟ
ಶಾಲಾ ವಠಾರದಲ್ಲಿ ಸುಂದರ ಕೈತೋಟ ನಿರ್ಮಿಸಲಾಗಿದೆ. ಮಕ್ಕಳು ಮತ್ತು ಹೆತ್ತವರು ಬಾಳೆ, ಅಲಸಂಡೆ, ಗೆಣಸು, ತೊಂಡೆ ಬೆಳಸಿದ್ದಾರೆ. 10ರಿಂದ 15 ತೆಂಗಿನ ಮರಗಳಿವೆ. ಶಾಲೆಯಲ್ಲಿ 2012ರಲ್ಲಿ ಶತಮಾನೋತ್ಸವ ನಡೆಯಿತು. ಆ ವರ್ಷ 63 ಬಾಲಕಿಯರು, 64 ಬಾಲಕರು ಸೇರಿ 127 ಮಕ್ಕಳಿದ್ದರು. ಮೂಲ ಸೌಕರ್ಯ
ಶಾಲೆಯಲ್ಲಿ ಉತ್ತಮ ಬಾಲವನವಿದೆ. ಮಕ್ಕಳಿಗೆ ಆಡಲು ಉಯ್ನಾಲೆ, ಜಾರುಬಂಡಿಯಂಥ ಸಲಕರಣಗಳಿವೆ. ದೊಡ್ಡದಾದ ಆಟದ ಮೈದಾನವಿದೆ. ಇಲ್ಲಿನ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಹಾಗೂ ಸ್ಮಾರ್ಟ್ ಕಾರ್ಡ್ ಕೊರತೆ ನೀಗಬೇಕಿದೆ. ಶಾಲಾ ಆವರಣ ಗೋಡೆ ಕೆಲಸ ಪ್ರಗತಿಯಲ್ಲಿದೆ. ಈ ಶಾಲೆಯ ಅಡುಗೆ ಕೋಣೆಯು ಚಿಕ್ಕದಾಗಿದ್ದು, ಸ್ಥಳದ ಕೊರತೆ ಇಲ್ಲಿದೆ. ಹೊಸ ಶೌಚಾಲಯದ ಬೇಡಿಕೆಯನ್ನೂ ಶಿಕ್ಷಕ ವೃಂದ ಮುಂದಿಟ್ಟಿದೆ. ಈ ಶಾಲೆಯ ಹಳೆ ವಿದ್ಯಾರ್ಥಿಯಾದ ಪಶ್ವಿಜಾ ಕೆ.ಎಸ್. 2017ರಲ್ಲಿ ಹೊಸದಿಲ್ಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಪೆರೇಡ್‌ನಲ್ಲಿ ಭಾಗವಹಿಸಿದ್ದಾರೆ. ಶಾಲೆಯಲ್ಲಿ ಕಲಿತ ಸಾಧಕರು
ಈ ಶಾಲೆಯಲ್ಲಿ ಕಲಿತ ಡಾಣ ಸುಂದರ್ ಕೇನಾಜೆ ಖ್ಯಾತ ಜನಪದ ಅಧ್ಯಯನಕಾರರು. ಪ್ರೊಣ ಬಾಲಚಂದ್ರ ಗೌಡ ಸುಳ್ಯ ಎನ್‌ಎಂಸಿ ಪ್ರಾಂಶುಪಾಲರು. ಪ್ರೊಣ ಎಂ. ರಾಮಚಂದ್ರ ಕಾರ್ಕಳ ಭುವನೇಂದ್ರ ಕಾಲೇಜಿಲ್ಲಿ ಕನ್ನಡ ಸಾಹಿತ್ಯ ಪರಿಚಾರಕರು. ಡಾಣ ಶ್ರೀನಿವಾಸ ಎಂ.ಬಿ. ಆಯುರ್ವೇದದಲ್ಲಿ ಎಂ.ಡಿ. ಪದವೀಧರರು. ಭವ್ಯಶ್ರೀ ಮಂಡೆಕೋಲು ಯಕ್ಷಗಾನ ಭಾಗವತೆಯಾಗಿದ್ದಾರೆ. ಮಂಡೆಕೋಲು ಗ್ರಾಮದಲ್ಲಿ ಈಗ 10 ಶಾಲೆಗಳಿವೆ. ಮಂಡೆಕೋಲು ಸ.ಉ.ಹಿ.ಪ್ರಾ. ಶಾಲೆಯಲ್ಲಿ ಪ್ರಸ್ತುತ 5 ದೀರ್ಘಾವಧಿ ಗುರುಗಳಿದ್ದಾರೆ. 98 ಮಕ್ಕಳಿದ್ದಾರೆ. ಪಿಯುಸಿಯವರೆಗೆ ವಿದ್ಯಾಭ್ಯಾಸ ಇಲ್ಲಿಯೇ ಸಿಗುವಂತಾದರೆ ಒಳ್ಳೆಯದು ಎಂದು ಡಾಣ ಸುಂದರ್ ಕೇನಾಜೆ ಅಭಿಪ್ರಾಯಪಟ್ಟಿದ್ದಾರೆ. “ಉದಯವಾಣಿ’
ಪತ್ರಿಕೆಯಲ್ಲಿ ಉಲ್ಲೇಖ
1985ರಲ್ಲಿ “ಉದಯವಾಣಿ’ ಪತ್ರಿಕೆಯ ಅಭಿಯಾನದಲ್ಲಿ ಮಂಡೆಕೋಲು ಹಾಗೂ ಮರ್ಕಂಜ ಗ್ರಾಮಗಳನ್ನು ಮೂಲಸೌಕರ್ಯಗಳಿಲ್ಲದ ಕುಗ್ರಾಮಗಳೆಂದು ಗುರುತಿಸಲಾಗಿತ್ತು. ಇಲ್ಲಿದ್ದುದು ನೀರು, ಗಡಿ ಹಾಗೂ ಕಾಡುಗಳು ಮಾತ್ರ. ಇಂತಹ ಗ್ರಾಮದಲ್ಲಿ ಈ ಶಾಲೆ ಸ್ಥಾಪನೆಯಾಗಿದ್ದು ಜನರ ಪ್ರಾಥಮಿಕ ಅಕ್ಷರ ಜ್ಞಾನದ ಕೊರತೆಯನ್ನು ನೀಗಿಸಿತ್ತು. ಮಂಡೆಕೋಲು ಸರಕಾರಿ ಉ.ಹಿ. ಪ್ರಾಥಮಿಕ ಶಾಲೆ ಆರಂಭವಾದ ಕಾಲದಲ್ಲಿ ಆಸುಪಾಸಿನ ಊರುಗಳಿಗೆ ಈ ಶಾಲೆಯೇ ಆಧಾರವಾಗಿತ್ತು. ಅಕ್ಕಪ್ಪಾಡಿ, ಕನ್ಯಾನ, ಕಲ್ಲಡ್ಕ, ಪೆರಜ, ಪೇರಾಲು, ಮುಡೂರು, ಪಂಜಿಕಲ್ಲು, ಪುತ್ಯ, ಕೇನಾಜೆ, ಬೊಳುಗಲ್ಲು, ಚಾಕೋಟೆ ಮಾವಂಜಿ, ಮಂಡೆಕೋಲು ಬೈಲು, ಮೈತಡ್ಕ ಭಾಗಗಳಿಂದ ವಿದ್ಯಾರ್ಥಿಗಳು ಈ ಶಾಲೆಗೆ ಬರುತ್ತಿದ್ದರು. 2012ರಲ್ಲಿ ಶತಮಾನೋತ್ಸವ ಆಚರಿಸಿರುವ ಈ ಶಾಲೆಯಲ್ಲಿ 3 ವರ್ಷಗಳಿಂದ ಮುಖ್ಯ ಶಿಕ್ಷಕಿಯಾಗಿ ದುಡಿಯುತ್ತಿರುವುದು ನನ್ನ ಸುಯೋಗ. ಪ್ರಕೃತಿಯ ಮಡಿಲಲ್ಲಿ ಈ ಶಾಲೆಯಿದೆ. ಶಾಲೆಗೆ ಕಂಪ್ಯೂಟರ್ ಶಿಕ್ಷಣ, ವಿಸ್ತಾರವಾದ ಅಡುಗೆ ಕೋಣೆ ಹಾಗೂ ಸುಸಜ್ಜಿತ ಶೌಚಾಲಯದ ಆವಶ್ಯಕತೆಯಿದೆ.
-ವನಜಾಕ್ಷಿ ಎ., ಮುಖ್ಯ ಶಿಕ್ಷಕಿ 1912ರಲ್ಲಿ ಆರಂಭವಾಗಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿರುವುದು ಗ್ರಾಮೀಣ ಪ್ರದೇಶ ಶಾಲೆಯ ದೊಡ್ಡ ಸಾಧನೆ. ಇಲ್ಲಿ ಕಲಿತವರು ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅದುವೇ ಹೆಮ್ಮೆ.
-ಶ್ರೀಧರ್ ಕಣೆಮರಡ್ಕ
ಎಸ್‌ಡಿಎಂಸಿ ಅಧ್ಯಕ್ಷರು -ಶಿವಪ್ರಸಾದ್ ಮಣಿಯೂರು