Advertisement

ರಾಜ್ಯಕ್ಕೆಸೂಪರ್‌ ಓವರ್‌ ಸೋಲು

03:05 PM Jan 22, 2018 | |

ಕೋಲ್ಕತಾ: ವಿನಯ್‌ ಕುಮಾರ್‌ ನೇತೃತ್ವದ ಕರ್ನಾಟಕ ತಂಡ ಸೈಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಯ ಸೂಪರ್‌ ಲೀಗ್‌ನ ಮೊದಲ ಪಂದ್ಯದಲ್ಲಿ ಪಂಜಾಬ್‌ ವಿರುದ್ಧ “ಸೂಪರ್‌ ಓವರ್‌’ ಸೋಲುಂಡಿದೆ. ನಿಗದಿತ 20 ಓವರ್‌ಗಳ ಪಂದ್ಯದಲ್ಲಿ ಉಭಯ ತಂಡಗಳು 158 ರನ್‌ ಬಾರಿಸಿ ಟೈ ಸಾಧಿಸಿದ್ದವು. ಹೀಗಾಗಿ ಪಂದ್ಯ ಫ‌ಲಿತಾಂಶ ನಿರ್ಧಾರಕ್ಕೆ ಸೂಪರ್‌ ಓವರ್‌ (ಹೆಚ್ಚುವರಿ 1 ಓವರ್‌) ಮೊರೆ ಹೋಗಲಾಯಿತು.

Advertisement

ಭಾನುವಾರ ಇಲ್ಲಿ ನಡೆದ “ಎ’ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕರ್ನಾಟಕ 7 ವಿಕೆಟ್‌ಗೆ 158 ರನ್‌ ಬಾರಿಸಿತ್ತು. ಇದಕ್ಕೆ ಉತ್ತರವಾಗಿ ಪಂಜಾಬ್‌ ಕೂಡ 9 ವಿಕೆಟ್‌ಗೆ 158 ರನ್‌ ಬಾರಿಸಿತ್ತು. ಸೂಪರ್‌ ಓವರ್‌ನಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್‌ 15 ರನ್‌ ಬಾರಿಸಿದರೆ, ಕರ್ನಾಟಕ 11 ರನ್‌ ಬಾರಿಸಿ ಸೋಲುಂಡಿದೆ. 

ಮನ್‌ದೀಪ್‌ ಸ್ಫೋಟಕ ಆಟ: 159 ರನ್‌ ಗುರಿ ಬೆನ್ನುಹತ್ತಿದ ಪಂಜಾಬ್‌ ತಂಡಕ್ಕೆ ಆರಂಭಿಕ ಬ್ಯಾಟ್‌ ಮನ್‌ ಮನ್‌ದೀಪ್‌ ಸ್ಫೋಟ ಬ್ಯಾಟಿಂಗ್‌ ಪ್ರದರ್ಶಿಸುವ ಮೂಲಕ ತಂಡಕ್ಕೆ ನೆರವಾದರು. ಮನ್‌ ದೀಪ್‌ 29 ಎಸೆತದಲ್ಲಿ 45 ರನ್‌ ಬಾರಿಸಿ ವಿಕೆಟ್‌ ಕಳೆದುಕೊಂಡರು. ಅವರ ಆಟದಲ್ಲಿ 7 ಬೌಂಡರಿ, 1 ಸಿಕ್ಸರ್‌ ಸೇರಿತ್ತು. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಹರ್ಭಜನ್‌ ಸಿಂಗ್‌ 19 ಎಸೆತದಲ್ಲಿ 5 ಬೌಂಡರಿ, 1 ಸಿಕ್ಸರ್‌ ಸೇರಿದಂತೆ 33 ರನ್‌ ಬಾರಿಸಿ ವಿಕೆಟ್‌ ಕಳೆದುಕೊಂಡರು. ಈ ಜೋಡಿ 2ನೇ ವಿಕೆಟ್‌ಗೆ 8.1
ಓವರ್‌ಗೆ 82 ರನ್‌ಗೆ ತೆದುಕೊಂಡು ಹೋದರು. ನಂತರ ಒಂದರ ನಂತರ ಒಂದರಂತೆ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿದರೂ ಅಂತಿಮವಾಗಿ 158 ರನ್‌ ಬಾರಿಸಿ ಟೈ ಸಾಧಿಸುವಲ್ಲಿ ಯಶಸ್ವಿಯಾಯಿತು. ಕರ್ನಾಟಕದ ಪರ ಎಸ್‌.ಅರವಿಂದ್‌ 4 ವಿಕೆಟ್‌
ಪಡೆದು ಮಿಂಚಿದರು.

ಜೋಶಿ ಸ್ಫೋಟ, ಗೌತಮ್‌ ತಾಳ್ಮೆಯ ಆಟ: ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಕರ್ನಾಟಕ ಆರಂಭದಲ್ಲಿಯೇ ಮಾಯಾಂಕ್‌ ಅಗರ್ವಾಲ್‌, ಕರುಣ್‌ ನಾಯರ್‌, ಕೆ.ಗೌತಮ್‌ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ನಂತರ ಜತೆಯಾದ ಆರ್‌.ಸಮಥ್‌
ì(31 ರನ್‌) ಮತ್ತು ಸಿ.ಎಮ್‌.ಗೌತಮ್‌ (36 ರನ್‌) ತಂಡಕ್ಕೆ ಚೇತರಿಕೆ ನೀಡಿದರು. ಈ ಜೋಡಿ ಕಳಚಿಕೊಂಡಾಗ ಕ್ರೀಸ್‌ಗೆ ಬಂದ ಅನಿರುದ್ಧ್ ಜೋಶಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿದರು. 19 ಎಸೆತದಲ್ಲಿ 6 ಬೌಂಡರಿ, 1 ಸಿಕ್ಸರ್‌ ಸೇರಿದಂತೆ ಅಜೇಯ 40 ರನ್‌
ಬಾರಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ 20 ಓವರ್‌ಗೆ 158/7 (ಅನಿರುದ್ಧ್ ಜೋಶಿ 40, ಸಿ.ಎಂ.ಗೌತಮ್‌ 36, ಬೆಲೆ¤àಜ್‌ ಸಿಂಗ್‌ 21ಕ್ಕೆ 3), ಪಂಜಾಬ್‌ 20 ಓವರ್‌ಗೆ 158/9 (ಮನ್‌ದೀಪ್‌ ಸಿಂಗ್‌ 45, ಹರ್ಭಜನ್‌
ಸಿಂಗ್‌ 33, ಎಸ್‌.ಅರವಿಂದ್‌ 32ಕ್ಕೆ 4) 

ಸೂಪರ್‌ ಓವರ್‌ನಲ್ಲಿ ಎಡವಿದ ರಾಜ್ಯ
ಉಭಯ ತಂಡಗಳು ತಲಾ 158 ರನ್‌ ಬಾರಿಸಿ ಟೈ ಮಾಡಿಕೊಂಡಿರುವುದರಿಂದ ಪಂದ್ಯದ ಫ‌ಲಿತಾಂಶಕ್ಕಾಗಿ ಸೂಪರ್‌ ಓವರ್‌ ಮೊರೆ
ಹೋಗಲಾಯಿತು. ಈ ಸಂದರ್ಭದಲ್ಲಿ ಪಂಜಾಬ್‌ ಪರ ಬ್ಯಾಟಿಂಗ್‌ಗೆ ಬಂದ ಯುವರಾಜ್‌ ಸಿಂಗ್‌ (5 ರನ್‌), ಮನ್‌ದೀಪ್‌ಸಿಂಗ್‌ (10 ರನ್‌) ಕೆ.ಗೌತಮ್‌ ಓವರ್‌ನಲ್ಲಿ 15 ರನ್‌ ಬಾರಿಸಿದರು. ನಂತರ ಕರ್ನಾಟಕದ ಪರ ಕ್ರೀಸ್‌ಗೆ ಬಂದ ಕರುಣ್‌ ನಾಯರ್‌ (8 ರನ್‌),
ಅನಿರುದ್ಧ್ ಜೋಶಿ (2 ರನ್‌), 1 ಇತರೆ ರನ್‌ ಸೇರಿದಂತೆ ಒಟ್ಟು 11 ರನ್‌ ಬಂತು. ಪಂಜಾಬ್‌ ಪರ ಸಿದ್ಧಾರ್ಥ ಕೌರ್‌ ಸೂಪರ್‌ ಓವರ್‌ನಲ್ಲಿ ಬಿಗುವಿನ ದಾಳಿ ನಡೆಸಿ ಪಂಜಾಬ್‌ ಗೆಲುವಿಗೆ ಕಾರಣರಾದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next