Advertisement
ಸದ್ಯ ರಾಜ್ಯದಲ್ಲಿರುವ ಸರಕಾರಿ ಶಾಲೆಗಳ ಪೈಕಿ ಕೇವಲ 47 ಪ್ರೌಢಶಾಲೆ ಮತ್ತು 62 ಕಾಲೇಜುಗಳಲ್ಲಿ ಮಾತ್ರ ಎನ್‌ಸಿಸಿ ಘಟಕ ಉಳಿದುಕೊಂಡಿದೆ. ಎನ್‌ಸಿಸಿ ತರಬೇತಿ ಪಡೆದು ಮಕ್ಕಳಿಗೆ ಸನ್ನಡತೆ ಕಲಿಸುವ “ಎ’ ವಲಯದಲ್ಲಿ 10 ವರ್ಷ ಸೇವೆ ಸಲ್ಲಿಸಿದ ಶಿಕ್ಷಕರನ್ನು ಕಡ್ಡಾಯವಾಗಿ ವರ್ಗಾವಣೆ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ.
Related Articles
Advertisement
ಆಯುಕ್ತರಲ್ಲಿ ಈ ಬಗ್ಗೆ ಪ್ರಶ್ನಿಸಿದರೆ ಕೌನ್ಸೆಲಿಂಗ್ ಸಮಯದಲ್ಲಿ ಶಿಕ್ಷಕರು ಆಯ್ಕೆ ಮಾಡಿದ ಶಾಲೆಗೆ ವರ್ಗಾಯಿಸುತ್ತೇವೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ. ಹಾಗಾದಲ್ಲಿ ಹಾಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಪಾಡೇನು ಎಂಬುದು ಪ್ರಶ್ನೆ. ಇನ್ನೊಂದೆಡೆ, ಸರಕಾರವು ಶಿಕ್ಷಕರಿಗೆ ಎನ್‌ಸಿಸಿ ತರಬೇತಿಗಾಗಿ ತಲಾ 60 ಸಾವಿರ ರೂ. ವಿನಿಯೋಗಿಸಿದ್ದು, ಸರಕಾರದ ಬೊಕ್ಕಸಕ್ಕಾಗುವ ನಷ್ಟ ಭರಿಸುವವರಾರು ಎಂಬ ಪ್ರಶ್ನೆಯೂ ಇದೆ. ಹೊಸ ಶಿಕ್ಷಕರನ್ನು ತರಬೇತಿಗೆ ಕಳುಹಿಸಿದರೂ ಸರಕಾರಕ್ಕೆ ಅನಗತ್ಯ ಆರ್ಥಿಕ ಹೊರೆಯಾಗಲಿದೆ.
ಈ ಹಿಂದೆ ವಿಧಾನ ಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿ ಮತ್ತು 15 ಮಂದಿ ವಿಧಾನ ಪರಿಷತ್ ಸದಸ್ಯರು ಹಾಗೂ ಶಿಕ್ಷಣ ಇಲಾಖೆಯ ವರಿಷ್ಠರ ಸಮ್ಮುಖ ಕೈಗೊಂಡ ಸಭಾ ನಡವಳಿಯಲ್ಲಿ ಪ್ರಧಾನ ಕಾರ್ಯದರ್ಶಿಗಳು ಎನ್‌ಸಿಸಿ ಶಿಕ್ಷಕರನ್ನು ಎನ್‌ಸಿಸಿ ಘಟಕ ಇರುವ ಶಾಲೆಗಳಿಗೆ ವರ್ಗಾವಣೆ ಮಾಡುತ್ತೇವೆ ಎಂದು ಒಪ್ಪಿಗೆ ಸೂಚಿಸಿದ್ದರು. ಆದರೂ ತತ್ಸಂಬಂಧಿ ಆದೇಶ ಹೊರಬಿದ್ದಿಲ್ಲ.
ಸಿಎಂ ಆದೇಶ ಕಡೆಗಣನೆ: ವಿಧಾನ ಪರಿಷತ್ ಸದಸ್ಯ ಭೋಜೇ ಗೌಡ ಅವರ ಮನವಿ ಮೇರೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಶಿಕ್ಷಕರ ಮನವಿಯನ್ನು ಪರಿಗಣಿಸಿ ಎಂದು ನಮೂದಿಸಿ ಪ್ರಧಾನ ಕಾರ್ಯದರ್ಶಿಗೆ ಕಳುಹಿಸಿದ್ದರು. ಆದರೆ, ಅದನ್ನು ಕಡೆಗಣಿಸಿರುವುದು ಸರಕಾರಿ ಶಾಲೆಗಳಲ್ಲಿ ಎನ್‌ಸಿಸಿ ಮುಚ್ಚಲು ಪರೋಕ್ಷವಾಗಿ ಇಲಾಖೆ ಅಥವಾ ಕಾಣದ ಕೈಗಳು ಕೆಲಸ ಮಾಡುತ್ತಿವೆಯೇ ಎಂಬ ಅನುಮಾನ ಹುಟ್ಟಿಸುತ್ತಿದೆ.
ಕಾನೂನಿನಲ್ಲಿ ಯಾವ ರೀತಿ ಅವಕಾಶಗಳಿವೆ ಎಂಬುದನ್ನು ಪರಿಗಣಿಸಿ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗುವುದು. ಶಿಕ್ಷಕರ ಕೌನ್ಸೆಲಿಂಗ್ ಸಂದರ್ಭ ಅವರು ಬಯಸಿದ ಶಾಲೆಗಳಿಗೆ ವರ್ಗಾವಣೆ ಮಾಡಲು ಅವಕಾಶ ಕಲ್ಪಿಸಲಾಗುವುದು.-ಪಿ.ಸಿ.ಜಾಫರ್, ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ * ಚೈತ್ರೇಶ್ ಇಳಂತಿಲ