Advertisement
ಬುಧವಾರ ತಾ.ಪಂ. ಸಭಾಂಗಣದಲ್ಲಿ ಮಾಸಿಕ ಕೆಡಿಪಿ ಸಭೆ ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಿಬಂದಿ ದುರ್ವರ್ತನೆ ತೋರಿದ್ದಾರೆ. ಹುಡುಗರ ಜತೆ ಪ್ರವಾಸ ಹೋಗಿದ್ದಾರೆ ಎಂದು ಆರೋಪ ಇದೆ. ಈ ಕಾರಣದಿಂದ ಕರ್ತವ್ಯದಿಂದ ವಜಾ ಮಾಡಬೇಕು ಎಂದು ಅಧ್ಯಕ್ಷರು ಸೂಚಿಸಿದರು.
94 ಸಿ ಹಕ್ಕು ಪತ್ರ ಪಡೆದುಕೊಳ್ಳಲು ಜನತೆಗೆ ಮನೆ ತೆರಿಗೆ ರಸೀದಿ ಅಗತ್ಯವಿದ್ದು, ಆದರೆ ಮನೆ ನಿರ್ಮಾಣ ಆಗಿರುವುದು ಸರಕಾರಿ ಸ್ಥಳವಾದ್ದರಿಂದ ಮನೆ ತೆರಿಗೆ ಪಾವತಿಗೆ ಅವಕಾಶವಿಲ್ಲ. ಅಂತಹ ಹಲವಾರು ಅರ್ಜಿಗಳನ್ನು ಉಪವಿಭಾಗಾಧಿಕಾರಿ ಸ್ಥಗಿತಗೊಳಿಸಿದ್ದಾರೆ. ಇದರಿಂದ ಬಡಜನತೆಗೆ ತೊಂದರೆಯಾಗುತ್ತಿದೆ. ಈ ಯೋಜನೆಯ ಮೂಲ ಉದ್ದೇಶಕ್ಕೆ ಧಕ್ಕೆಯಾಗುತ್ತಿದೆ. ಹಾಗಾಗಿ ಕಂದಾಯ ಇಲಾಖೆ ಸ್ಥಳ ಮಹಜರು ನಡೆಸಿ ಅವರಿಗೆ ದಾಖಲೆ ನೀಡುವಂತೆ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಕಂದಾಯ ಇಲಾಖಾಧಿಕಾರಿಗಳಿಗೆ ಸೂಚಿಸಿದರು. ವಾಸ್ತವ್ಯವಿರುವ ಮನೆ ಮಂದಿಯಲ್ಲಿ ಪಡಿತರ ಚೀಟಿ, ಗುರುತು ಪತ್ರದಂತಹ ದಾಖಲೆ ಇದ್ದರೆ ಅಂಥವರಿಗೆ ಮಹಜರು ನಡೆಸಿ ದಾಖಲೆ ನೀಡುವುದಾಗಿ ಅಧಿಕಾರಿಗಳು ತಿಳಿಸಿದರು.
Related Articles
ಕೊಂಬೆಟ್ಟು ತಾಲೂಕು ಕ್ರೀಡಾಂಗಣ ಅಭಿವೃದ್ಧಿಗೆ 10 ಲಕ್ಷ ರೂ. ಅನುದಾನ ಮಂಜೂರುಗೊಂಡಿದೆ. ಗ್ಯಾಲರಿಗೆ ಶೀಟ್ ಅಳವಡಿಕೆ, ಕಟ್ಟಡಗಳಿಗೆ ಸುಣ್ಣ ಬಣ್ಣ ಮತ್ತು ಟ್ರ್ಯಾಕ್ ಅಭಿವೃದ್ಧಿ ನಡೆಸಲು ಸರ್ಕಾರದಿಂದ 8 ಲಕ್ಷ ರೂ. ಅನುದಾನ ಮಂಜೂರುಗೊಂಡಿದೆ. ಹೆಚ್ಚುವರಿಯಾಗಿ ಮತ್ತೆ 2 ಲಕ್ಷ ರೂ. ಅನುದಾನವೂ ಮಂಜೂರಾಗಿದೆ. ಈ ಅನುದಾನದಲ್ಲಿ ತತ್‌ಕ್ಷಣ ಅಭಿವೃದ್ಧಿ ಕೆಲಸ ಆರಂಭವಾಗಲಿದೆ ಎಂದು ಸಭೆಗೆ ತಾಲೂಕು ಯುವಜನ ಕ್ರೀಡಾಧಿಕಾರಿ ಜಯರಾಮ ಗೌಡ ಮಾಹಿತಿ ನೀಡಿದರು.
Advertisement
ಹೊಸ ನಿವೇಶನಕ್ಕೆ ಸ್ಪಂದನೆ ಇಲ್ಲತೆಂಕಿಲಗುಡ್ಡ ಕುಸಿತದಿಂದ ಅಪಾಯ ಸಂಭವಿಸ ಬಹುದು ಎಂಬ ಹಿನ್ನೆಲೆಯಲ್ಲಿ ಇಲ್ಲಿ ವಾಸ್ತವ್ಯವಿದ್ದ 11 ಕುಟುಂಬಗಳಿಗೆ ಬನ್ನೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಹೊಸದಾಗಿ ಮನೆ ನಿವೇಶನ ನೀಡಲಾಗಿದೆ. ಈ ಬಗ್ಗೆ ನಗರಸಭೆಯಿಂದ ಈ ಕುಟುಂಬಗಳಿಗೆ ನೋಟಿಸ್ ನೀಡಲಾಗಿದೆ. ಆದರೆ ಆ ಕುಟುಂಬಗಳಿಂದ ಯಾವುದೇ ಸ್ಪಂದನೆ ಇಲ್ಲ. ನೋಟಿಸ್ ಕೂಡ ಪಡೆದುಕೊಳ್ಳುತ್ತಿಲ್ಲ. ಈ ಕುಟುಂಬಗಳ ಖಾತೆಗೆ ಸರಕಾರದಿಂದ ಬಂದಿರುವ ತಲಾ 1 ಲಕ್ಷ ರೂ. ಹಣ ಜಮೆಯಾಗಿದೆ ಎಂದು ನಗರಸಭೆಯ ಅಧಿಕಾರಿ ತಿಳಿಸಿದರು. ತಾ.ಪಂ. ಉಪಾಧ್ಯಕ್ಷೆ ಲಲಿತಾ ಈಶ್ವರ್, ಸ್ಥಾಯೀ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ತಾ.ಪಂ. ಇಒ ನವೀನ್ ಭಂಡಾರಿ, ಕಡಬ ತಹಶೀಲ್ದಾರ್ ಜಾನ್‌ಪ್ರಕಾಶ್ ಉಪಸ್ಥಿತರಿದ್ದರು. ವಿಶೇಷ ತರಗತಿ
ಎಸೆಸೆಲ್ಸಿ ಓದುತ್ತಿರುವ ಮಕ್ಕಳಲ್ಲಿ ಪೂರ್ವ ತಯಾರಿ ಪರೀಕ್ಷೆಗಳಲ್ಲಿ ಕಡಿಮೆ ಅಂಕ ಪಡೆಯುತ್ತಿರುವ ಮಕ್ಕಳಿಗೆ ವಿಶೇಷ ತರಗತಿ ನಡೆಸಲಾಗುತ್ತಿದೆ. 1ರಿಂದ 14 ಅಂಕ ಪಡೆದ ಮಕ್ಕಳಿಗೆ ತಂಡಗಳಲ್ಲಿ ಈ ವಿಶೇಷ ತರಗತಿ ನಡೆಸಲಾಗುತ್ತಿದೆ. ಶಾಸಕರು, ತಾ.ಪಂ. ಅಧ್ಯಕ್ಷರೂ ಸಹಿತ ಜನಪ್ರತಿನಿಧಿಗಳು, ಅಧಿಕಾರಿಗಳು ಶಾಲೆಗಳಿಗೆ ನಿರಂತರ ಭೇಟಿ ನೀಡಿ ಮಕ್ಕಳಲ್ಲಿ ಚೈತನ್ಯ ತುಂಬುವ ಕೆಲಸ ನಡೆಸುತ್ತಿದ್ದಾರೆ. ಎಸ್‌ಸಿ, ಎಸ್‌ಟಿ, ಅಲ್ಪಸಂಖ್ಯಾಕ ವರ್ಗದ ಮಕ್ಕಳು ಕಲಿಯು ವಿಕೆಯಲ್ಲಿ ಸ್ವಲ್ಪ ಹಿಂದೆ ಉಳಿದಿದ್ದು, ಅಂತವರಿಗೆ ಆದ್ಯತೆ ನೀಡಿ ಇಂಗ್ಲಿಷ್, ಸಮಾಜ ವಿಜ್ಞಾನ ಹಾಗೂ ಗಣಿತ ಪಠ್ಯಗಳ ಕುರಿತು ಹೆಚ್ಚಿನ ಆಸ್ಥೆಯಿಂದ ತರಗತಿ ನಡೆಸಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಭೆಗೆ ಮಾಹಿತಿ ನೀಡಿದರು. ವಿದ್ಯುತ್ ನೀಡಲು ಸೂಚನೆ
ಕುಂಬ್ರ ಭಾಗ ಸಹಿತ ತಾಲೂಕಿನ ಎಲ್ಲ ಕಡೆಗಳಲ್ಲಿ ಮೆಸ್ಕಾಂ ಅನಿಯಮಿತವಾಗಿ ವಿದ್ಯುತ್ ನಿಲುಗಡೆ ಮಾಡುತ್ತಿದೆ. ಮಕ್ಕಳಿಗೆ ಎಸೆಸೆಲ್ಸಿ ಪರೀಕ್ಷೆ ಆರಂಭವಾಗುವ ಹಿನ್ನೆಲೆಯಲ್ಲಿ ಓದಿಗೆ ತೊಂದರೆಯಾಗುತ್ತಿದೆ. ಎಸೆಸೆಲ್ಸಿ ಪರೀಕ್ಷೆ ಮುಗಿಯುವ ವರೆಗೆ ಸಂಜೆ 7ರಿಂದ ರಾತ್ರಿ 10 ಗಂಟೆ ತನಕ ಅನಿಯಮಿತ ವಿದ್ಯುತ್ ನಿಲುಗಡೆ ಮಾಡಬೇಡಿ ಎಂದು ಮೆಸ್ಕಾಂ ಅಧಿಕಾರಿಗಳಿಗೆ ಅಧ್ಯಕ್ಷರು ಸೂಚನೆ ನೀಡಿದರು.