Advertisement

ಇಂದಿನಿಂದ ಚಿನ್ನಕ್ಕೆ ಹಾಲ್ ಮಾರ್ಕ್ ಕಡ್ಡಾಯ..!

07:00 PM Jun 15, 2021 | |

ನವ ದೆಹಲಿ : ಇಂದಿನಿಂದ (ಮಂಗಳವಾರ, ಜೂನ್ 15) ಮಾರಾಟ ಮಾಡಲಾಗುವ ಎಲ್ಲಾ ಚಿನ್ನಾಭರಣಗಳಿಗೆ ಹಾಲ್‌ ಮಾರ್ಕ್ ಕಡ್ಡಾಯಗೊಳಿಸಿದೆ. 2021 ಜನವರಿ 15ರಿಂದ ಚಿನ್ನದ ಆಭರಣಗಳಿಗೆ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್(ಬಿಐಎಸ್) ಹಾಲ್‌ ಮಾರ್ಕ್‌ ಕಡ್ಡಾಯಗೊಳಿಸಿ ಆದೇಶಿಸಿದೆ.

Advertisement

ಹೌದು, ಕೇಂದ್ರ ಸರ್ಕಾರವು ಚಿನ್ನಾಭರಣಗಳ ಮಾರಾಟದಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದ ಕಾರಣ ಆ ವಂಚನೆ ಪ್ರಕರಣಗಳನ್ನು ನಿಯಂತ್ರ ಮಾಡುವ ನಿಟ್ಟಿನಲ್ಲಿ ಈ ಹಾಲ್ ಮಾರ್ಕ್ ಕಡ್ಡಾಯಗೊಳಿಸಿ ಆದೇಶಿಸಿದೆ. ಚಿನ್ನಾಭರಣ ಮಾರಾಟಗಾರರು ಮತ್ತು ಚಿಲ್ಲರೆ ವ್ಯಾಪಾರಿಗಳು ಭಾರತೀಯ ಮಾನದಂಡ ಅಡಿಯಲ್ಲಿ (ಬಿಐಎಎಸ್) ನೋಂದಾಯಿಸಿಕೊಳ್ಳಬೇಕು.

ಇದನ್ನೂ ಓದಿ : ಗದ್ದೆಗಿಳಿದು ಭತ್ತ ನಾಟಿ ಪ್ರಾತ್ಯಕ್ಷಿಕೆಗೆ ಚಾಲನೆ ನೀಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಈ ಹಾಲ್ ಮಾರ್ಕ್ ಕಡ್ಡಾಯಕ್ಕೆ ಈ ಮೊದಲು ಗಡುವು ಜೂನ್ 1 ಆಗಿತ್ತು,  ಕೋವಿಡ್ -19 ಸೋಂಕಿನ ಕಾರಣದಿಂದಾಗಿ ಹದಿನೈದು ದಿನಗಳವರೆಗೆ ವಿಸ್ತರಿಸಲಾಗಿದ್ದು, ಇಂದಿನಿಂದ ಚಿನ್ನಾಭರಣ ಮಾರಾಟದಲ್ಲಿ ಹಾಲ್‌ ಮಾರ್ಕ್ ಕಡ್ಡಾಯಗೊಳಿಸಿದೆ.

ಚಿನ್ನದ ಹಾಲ್‌ ಮಾರ್ಕ್‌ ಎನ್ನುವುದು ಹಳದಿ ಲೋಹದ ಶುದ್ಧತೆಯ ಪ್ರಮಾಣೀಕರಣವಾಗಿದೆ. 2016ರ ಬಿಐಎಸ್ ಕಾಯ್ದೆ ಪ್ರಕಾರ ಆಭರಣ ಮಾರಾಟಗಾರರು 14 ಕ್ಯಾರೆಟ್, 18 ಕ್ಯಾರೆಟ್ ಮತ್ತು 22 ಕ್ಯಾರೆಟ್  ಗಳಲ್ಲಿ ಚಿನ್ನವನ್ನು ಗುರುತಿಸಬೇಕಾಗಿದೆ. ಕ್ಯಾರೆಟ್ ಎನ್ನುವುದು ಚಿನ್ನದ ಪ್ರಮಾಣವನ್ನು 24 ಭಾಗಗಳಲ್ಲಿ ಮಿಶ್ರಲೋಹದಲ್ಲಿ ಸೂಚಿಸುವ ಅಳತೆಯಾಗಿದೆ.

Advertisement

ಗ್ರಾಹಕರು ಮೋಸ ಹೋಗದಂತೆ ನೋಡಿಕೊಳ್ಳುವುದು ಚಿನ್ನವನ್ನು ಕಡ್ಡಾಯವಾಗಿ ಹಾಲ್‌ ಮಾರ್ಕಿಂಗ್ ಮಾಡುವ ಉದ್ದೇಶವಾಗಿದೆ ಎಂದು ಸರ್ಕಾರ ತಿಳಿಸಿದೆ. ಇನ್ನು, ನೋಂದಣಿ ಪ್ರಕ್ರಿಯೆಯನ್ನು ಆನ್‌ ಲೈನ್ ಮತ್ತು ಆಫ್ ಲೈನ್ ಮೂಲಕವೂ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ : ಈಗಾಗಲೇ ಸೋಂಕಿಗೆ ಒಳಗಾದವರಿಗೆ ಕೋವಿಡ್ ಲಸಿಕೆಯ ಎರಡನೇ ಡೋಸ್ ಅಗತ್ಯವಿಲ್ಲ : ಅಧ್ಯಯನ ವರದಿ

Advertisement

Udayavani is now on Telegram. Click here to join our channel and stay updated with the latest news.

Next