ಏನೇನು ಕೃಷಿ : ಅಡಿಕೆ, ತೆಂಗು, ಗೇರು, ಹಲವು ವಾಣಿಜ್ಯ ಬೆಳೆಗಳು, ಭತ್ತ, ಹೈನುಗಾರಿಕೆ
ಎಷ್ಟು ವರ್ಷ: ಸುಮಾರು 38 ವರ್ಷಗಳಿಂದ
ಕೃಷಿ ಪ್ರದೇಶ: ಸುಮಾರು 14 ಎಕ್ರೆ
ಸಂಪರ್ಕ: 9844299930
Advertisement
ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.
Related Articles
ರಾಯರ ತೋಟದಲ್ಲಿ ವಿಭಿನ್ನ ಬೆಳೆಗಳಿವೆ. ಕಸಿ ಹಲಸು, ಮಾವು, ಬಾಳೆ, ಕೋಕಂ, ಲಿಂಬು, ರಂಬೂಟನ್, ಮಾಗುವಾನಿ, ಸಾಗುವಾನಿ, ನಕ್ಷತ್ರ ಹಣ್ಣು, ಅನಾನಸು, ಸೀತಾಫಲ, ಲಕ್ಷ್ಮಣ ಫಲ, ತರಕಾರಿ, ಹಸಿರು ಮೇವು, ಜೇನು ಕುಟುಂಬ ಎಲ್ಲವೂ ಇದೆ. ಮುಂದಿನ ದಿನಗಳಲ್ಲಿ ವೆನಿಲ್ಲಾ, ಫ್ಯಾಷನ್ ಫ್ರುಟ್, ಶ್ರೀಗಂಧ, ಬೆಣ್ಣೆ ಹಣ್ಣು, ಡ್ರಾಗನ್ ಫ್ರುಟ್, ಮಲ್ಲಿಗೆ ನಾಟಿ ಮಾಡುವ ಯೋಜನೆ ಹೊಂದಿದ್ದಾರೆ.
Advertisement
ನೀರು ಸಂಗ್ರಹಣೆಗೆ ಪ್ರಾಮುಖ್ಯತೆಕೃಷಿಗೆ ನೀರೇ ಜೀವಾಳ ಎನ್ನುವುದನ್ನು ಅರಿತು ಅಂತರ್ಜಲ ವೃದ್ಧಿಯಲ್ಲಿ ಬಹಳ ವರ್ಷಗಳಿಂದ ಕಾರ್ಯನಿರತರಾಗಿದ್ದಾರೆ. ಎತ್ತರದ ಗೇರು ತೋಟದಲ್ಲಿ ಚಿಕ್ಕ ಚಿಕ್ಕ 600 ಇಂಗುಗುಂಡಿಗಳನ್ನು, ಒಂದು ಬೃಹತ್ ಮದಗವನ್ನು ನಿರ್ಮಿಸಿದ್ದಾರೆ. ಮಳೆ ನೀರು ಕೊಯ್ಲು, ಕೊಳವೆ ಬಾವಿ ಜಲ ಮರುಪೂರಣ ನಡೆಸಿದ್ದಾರೆ.
ಕೃಷಿ ಎನ್ನುವುದು ಇಂದು ನಾಳೆಯ ಯೋಚನೆ ಯಾಗಬಾರದು. ಭವಿಷ್ಯದ ಯೋಜನೆಯಾಗಬೇಕು. ಈ ನಿಟ್ಟಿನಲ್ಲಿ ಸಾವಯವ ವಿಧಾನ, ಲಘು ಪೋಷಕಾಂಶ ಬಳಕೆ, ಮಣ್ಣು ಪರೀಕ್ಷೆ, ಬೀಜೋತ್ಪಾದನೆ, ಸಸ್ಯ ಸಂರಕ್ಷಣೆ, ಗೋಬರ್ ಗ್ಯಾಸ್, ಬಯೋ ಡೈಜೆಸ್ಟರ್, ಜೀವಾಣು ಹಾಗೂ ಹಸಿರೆಲೆ ಗೊಬ್ಬರ ಬಳಕೆ, ಪರ್ಯಾಯ ಬೆಳೆ ಅನುಸರಿಸುತ್ತಿದ್ದಾರೆ. ಪುನರ್‌ಪುಳಿ, ಗೇರು ಜ್ಯೂಸ್ ತಯಾರಿಸಿ ಮಾರುಕಟ್ಟೆ ಮಾಡುತ್ತಿದ್ದಾರೆ. ಹಲಸಿನ ಉತ್ಪನ್ನಗಳನ್ನು ತಯಾರಿಸುತ್ತಾರೆ. ಟಿಲ್ಲರ್, ಬಯೋಮಾಸ್ ಡ್ರೈಯರ್, ಪವರ್ ಸ್ಪ್ರೆಯರ್, ಜೀಪ್, ಹುಲ್ಲು ಕತ್ತರಿಸುವ, ಕಳೆ ಕೊಚ್ಚುವ ಯಂತ್ರಗಳನ್ನು ಹೊಂದಿದ್ದಾರೆ. ಪ್ರಶಸ್ತಿ ಪುರಸ್ಕಾರ
ಬೆಂಗಳೂರು ಕೃಷಿ ವಿ.ವಿ.ಯ ಕಾರ್ಪ್ ರೈತ ರಾಜ್ಯಪ್ರಶಸ್ತಿ, ಕರ್ನಾಟಕ ಸರಕಾರದ ಕೃಷಿ ಪಂಡಿತ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ, ಕೊಚ್ಚಿಯ ಗೇರು ಮತ್ತು ಕೊಕ್ಕೊ ನಿರ್ದೇಶನಾಲಯದ ಉತ್ತಮ ಬೆಳೆಗಾರ, ಆತ್ಮ ಯೋಜನೆಯಡಿ ತಾಲೂಕು ಉತ್ತಮ ರೈತ, ಕೃಷಿ ವಿವಿಯ ಅಲುಮ್ನಿ, ಗುಜರಾತ್‌ನಲ್ಲಿ ನಡೆದ ವಿಶ್ವ ಕೃಷಿ ಸಮ್ಮೇಳನದಲ್ಲಿ ಉತ್ತಮ ಕೃಷಿಕ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ. ಅಧ್ಯಯನಕ್ಕಾಗಿ ಚೀನ ಸೇರಿದಂತೆ ಪಂಜಾಬ್, ಬೆಂಗಳೂರು, ಶಿವಮೊಗ್ಗ, ಕಾಸರಗೋಡು, ವಿಟ್ಲ ಮೊದಲಾದ ಕಡೆಗಳಿಗೆ ಪ್ರವಾಸ ಮಾಡಿದ್ದಾರೆ. ಕೃಷಿಯಿಂದ ಆರೋಗ್ಯ, ನೆಮ್ಮದಿ
ಕೃಷಿಯಿಂದ ಸ್ವತಂತ್ರ, ಸ್ವಾವಲಂಬಿ ಜೀವನ ಸಾಧ್ಯ. ಶುದ್ಧ ಗಾಳಿ, ನೀರು, ವಾತಾವರಣದಿಂದ ಉತ್ತಮ ಆರೋಗ್ಯ ಹೊಂದಬಹುದು. ಆದರೆ ಬೆವರು ಸುರಿಸಿ ದುಡಿಯುವ ಛಲ ಬೇಕು. ಕಠಿನ ಶ್ರಮ ಅಗತ್ಯ. ಬೇರೆ ಉದ್ಯೋಗಕ್ಕಿಂತ ಯಾವುದೇ ರೀತಿಯಲ್ಲಿ ಕಡಿಮೆ ಇಲ್ಲದಂತೆ ಆದಾಯ, ಜೀವನ ಸಾಧ್ಯ. ಔಷಧೀಯ ಹಾಗೂ ಅರಣ್ಯ ಬೆಳೆಗಳಿಗೆ ಭವಿಷ್ಯವಿದೆ. ಸರಕಾರ ನ್ಯಾಯಯುತ, ವೈಜ್ಞಾನಿಕ ದರ ನಿಗದಿಗೊಳಿಸಿದರೆ ಯಾವ ಸಬ್ಸಿಡಿಯೂ ಅಗತ್ಯವಿಲ್ಲ. ಕಾಡು ಪ್ರಾಣಿಗಳ ನಿಯಂತ್ರಣ ಸೇರಿದಂತೆ ಹಲವು ವಿಚಾರಗಳಲ್ಲಿ ಸರಕಾರದ ಧೋರಣೆ ಬದಲಾಗಬೇಕು. ಮುಂದಿನ ದಿನಗಳಲ್ಲಿ ಕೃಷಿ ಆಶಾದಾಯಕ ಹಾಗೂ ಅನಿವಾರ್ಯವಾಗಲಿದೆ.
-ಕೆ. ಶಂಭುಶಂಕರ ರಾವ್, ಪ್ರಗತಿಪರ ಕೃಷಿಕ ಪ್ರವೀಣ್ ಮುದ್ದೂರು