ಕೊಡಗಿನ ಪ್ರಾಕೃತಿಕ ಚೆಲುವಿನ ತಾಣವು, ನಿಸರ್ಗ ಪ್ರೇಮಿಗಳನ್ನು ಇಂದಿಗೂ ಸೂಜಿಗಲ್ಲಿನಂತೆ ಸೆಳೆಯುವ ಸ್ಥಳ ಮಡಿಕೇರಿ ಸಮೀಪದ ಮಾಂದಲಪಟ್ಟ. ಇದನ್ನು ಕೊಡವ ಭಾಷೆಯಲ್ಲಿ ಮಾಂದಲ್ ಪಟ್ಟಿ ಎನ್ನುತ್ತಾರೆ. ಮಾಂದಲ್ ಪಟ್ಟಿ ಎಂದರೆ, ಎತ್ತರದ ಜಾಗ ಎಂದರ್ಥ. ಈ ಸ್ಥಳವು ಸಮುದ್ರ ಮಟ್ಟದಿಂದ 4 ಸಾವಿರ ಅಡಿ ಎತ್ತರದಲ್ಲಿದ್ದು. ಬೆಟ್ಟದ ತುತ್ತ ತುದಿ (ವ್ಯೂ ಪಾಯಿಂಟ್) ತಲುಪಿದಾಗ ಸೂರ್ಯ ಕೈಗೆ ಎಟುಕುತ್ತದೆಯೇನೋ ಎಂಬಂತೆ ಭಾಸವಾಗುತ್ತದೆ.
ಪುಷ್ಪಗಿರಿ ಹಾಗೂ ಕೋಟೆ ಬೆಟ್ಟದ ಸುತ್ತಲೂ ಹರಡಿ ನಿಂತ ಪರ್ವತ ಶ್ರೇಣಿಗಳು. ಅಲೆ ಅಲೆಯಾಗಿ ತೇಲಿ ಬರುವ ಮಂಜು..ಸುಂದರ ನಿಸರ್ಗ ಸೌಂದರ್ಯ… ಇಲ್ಲಿ, ನಡು ಬೇಸಗೆಯಲ್ಲೂ ತಂಪು ಹವೆ…ಮುಂಜಾನೆ ಇಬ್ಬನಿಯ ಸಿಂಚನ…ಈ ಎಲ್ಲ ಎತ್ತರದ ಸ್ಥಳವನ್ನು ಹೆಚ್ಚಿನ ಜನರು ಮುಗಿಲು ಪೇಟೆ ಎಂದೇ ಕರೆಯುತ್ತಾರೆ.ಒಂದು ಕಾಲದಲ್ಲಿ ಇತ್ತ ಸುಳಿಯುವವರೇ ಇರಲಿಲ್ಲ.
ಆದರೀಗ,ಇದೊಂದು ಪ್ರವಾಸಿ ತಾಣವಾಗಿ ಆಕರ್ಷಿಸುತ್ತದೆ. ಹೀಗಾಗಿ, ಈ ತಾಣವನ್ನು ನೋಡಲೆಂದೇ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದ್ದು , ಇದರ ಸುತ್ತಲೂ ಜನರ ವ್ಯಾಪಾರ , ವಹಿವಾಟುಗಳು ಹುಟ್ಟಿಕೊಂಡಿದೆ.ಮಾಂದಲಪಟ್ಟಿ , ಇದು ಮಡಿಕೇರಿಗೆ ಸುಮಾರು ಇಪ್ಪತ್ತು ಕಿ.ಮೀ. ದೂರದಲ್ಲಿದ್ದು, ಪುಷ್ಪಗಿರಿ ವನ್ಯಧಾಮಕ್ಕೆ ಸೇರಿದೆ. ಮಡಿಕೇರಿಯಿಂದ ಅಬ್ಬಿಫಾಲ್ಸ್ ರಸ್ತೆಯಲ್ಲಿ ಸಾಗಬೇಕು.
ಹೀಗೆ ಸಾಗುವಾಗ ಸುತ್ತ ಮುತ್ತ ಕಾಣಸಿಗುವ ನಿಸರ್ಗದ ನೋಟ ನೋಡುಗರ ಮನಸ್ಸಿಗೆ ಮುದನೀಡುತ್ತದೆ. ಅದೇ ಪ್ರಕೃತಿಯ ಮಡಿಲ ಹಾದಿಯಲ್ಲಿ ಮುನ್ನಡೆಯುತ್ತಾ ಹೋದರೆ ಬೆಟ್ಟಗುಡ್ಡಗಳ ಹಸುರ ನೋಟವೇ ಮಾಂದಾಲಪಟ್ಟಿಯತ್ತ ಎಳೆದೊಯ್ದು ಬಿಡುತ್ತದೆ.ಇಂದಿಗೂ ಹೆಚ್ಚಿನ ಜನರು ಈ ಸ್ಥಳವನ್ನು ಮುಗಿಲಪೇಟೆ ಎಂದೇ ಕರೆಯುತ್ತಾರೆ. ಒಂದು ಕಾಲದಲ್ಲಿ ಇತ್ತ ಸುಳಿಯುವವರೇ ಇರಲಿಲ್ಲ. ಆದರೀಗ ಇದೊಂದು ಪ್ರವಾಸಿ ತಾಣವಾಗಿ ಆಕರ್ಷಿಸುತ್ತದೆ. ಹೀಗಾಗಿ ಈ ತಾಣವನ್ನು ನೋಡಲೆಂದೇ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದ್ದು, ಇದರ ಸುತ್ತಲೂ ವ್ಯಾಪಾರ ವಹಿವಾಟುಗಳು ಹುಟ್ಟಿಕೊಂಡಿವೆ.
ಮಾಂದಲಪಟ್ಟಿ, ಇದು ಮಡಿಕೇರಿಗೆ ಸುಮಾರು ಇಪ್ಪತ್ತು ಕಿ.ಮೀ. ದೂರದಲ್ಲಿದ್ದು, ಪುಷ್ಪಗಿರಿ ವನ್ಯಧಾಮಕ್ಕೆ ಸೇರಿದೆ. ಮಡಿಕೇರಿಯಿಂದ ಅಬ್ಬಿಫಾಲ್ಸ್ ರಸ್ತೆಯಲ್ಲಿ ಸಾಗಬೇಕು. ಹೀಗೆ ಸಾಗುವಾಗ ಸುತ್ತ ಮುತ್ತ ಕಾಣಸಿಗುವ ನಿಸರ್ಗದ ನೋಟ ನೋಡುಗರ ಮನಸ್ಸಿಗೆ ಮುದನೀಡುತ್ತದೆ. ಅದೇ ಪ್ರಕೃತಿಯ ಮಡಿಲ ಹಾದಿಯಲ್ಲಿ ಮುನ್ನಡೆಯುತ್ತಾ ಹೋದರೆ ಬೆಟ್ಟಗುಡ್ಡಗಳ ಹಸುರ ನೋಟವೇ ಮಾಂದಾಲಪಟ್ಟಿಯತ್ತ ಎಳೆದೊಯ್ದು ಬಿಡುತ್ತದೆ. ಮೂರರಿಂದ ನಾಲ್ಕು ದಶಕಗಳ ಹಿಂದೆ ಮಾಂದಲಪಟ್ಟಿಗೆ ದನಗಳನ್ನು ಮೇಯಿಸಲು ಅಥವಾ ಶಿಕಾರಿಗೆ ಗ್ರಾಮಸ್ಥರು ಹೋಗುತ್ತಿದ್ದರು.
ಅಂದು, ಅಲ್ಲಿಗೆ ಯಾವುದೇ ರಸ್ತೆಗಳಿರಲಿಲ್ಲ. ಸಾಹಸಿಗಳು ಮಾತ್ರ ಗುಡ್ಡವನ್ನೇರುತ್ತಾ ಬೆಟ್ಟದ ತುತ್ತ ತುದಿಯೇರಿ ಅಲ್ಲಿಂದ ಕಾಣಸಿಗುವ ಸೌಂದರ್ಯವನ್ನು ನೋಡಿ ಕುಣಿದು ಕುಪ್ಪಳಿಸುತ್ತಿದ್ದರು. ಆದರೆ ಇತ್ತೀಚೆಗಿನ ದಿನಗಳಲ್ಲಿ ಮಾಂದಲಪಟ್ಟಿ ಕೂಡ ಜಿಲ್ಲೆಯಲ್ಲಿರುವ ಇತರೆ ಪ್ರವಾಸಿ ತಾಣಗಳಂತೆ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಹಾಗಾಗಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ರಸ್ತೆಗಳನ್ನು ಕೂಡ ನಿರ್ಮಿಸಲಾಗಿದೆ.
ಹಿಂದೆ, ನೀರವ ಮೌನ ನೆಲೆಸಿದ್ದ ತಾಣದಲ್ಲಿ, ಈಗ ಪ್ರವಾಸಿಗರು ಲಗ್ಗೆ ಹೆಚ್ಚಾಗುತ್ತಿದೆ. ಇಲ್ಲಿನ, ಕಣ್ತುಂಬುವ ನಿಸರ್ಗ ಸೌಂದರ್ಯದ ರುಚಿಯೂ ಮಾಂದಲಪಟ್ಟಿ ಪ್ರವಾಸಿಗರಿಗೆ ಸ್ವರ್ಗವೇ ಧರೆಗಿಳಿದಂತೆ ಭಾಸವಾಗುವಂತೆ ಮಾಡಿದೆ. ಬೆಟ್ಟದ ತುತ್ತ ತುದಿ (ವ್ಯೂವ್‌ಪಾಯಿಂಟ್) ತಲುಪಿದಾಗ ಕೈಗೆ ಎಟುಕುತ್ತದೆಯೇನೋ ಎಂಬಂತೆ ಭಾಸವಾಗುವ ಮುಗಿಲು… ಪುಷ್ಪಗಿರಿ ಹಾಗೂ ಕೋಟೆಬೆಟ್ಟದ ಸುತ್ತಲೂ ಹರಡಿ ನಿಂತ ಪರ್ವತ ಶ್ರೇಣಿಗಳು… ಅಲೆಅಲೆಯಾಗಿ ತೇಲಿ ಬರುವ ಮಂಜು… ಸುಂದರ ನಿಸರ್ಗ ಸೌಂದರ್ಯ ಪ್ರವಾಸಿಗರ ಆಯಾಸವನ್ನೆಲ್ಲಾ ಮಾಯ ಮಾಡಿಬಿಡುತ್ತದೆ. ನಡುಬೇಸಗೆಯಲ್ಲೂ ತಂಪು ಹವೆ… ಮುಂಜಾನೆ ಇಬ್ಬನಿಯ ಸಿಂಚನ… ಸಂಜೆ ಮಂಜು ಮುಸುಕಿನಲ್ಲಿ ರಕ್ತದ ಚೆಂಡಿನಂತೆ ಹೊಳೆವ ಸೂರ್ಯ ಬೆಟ್ಟಗಳ ನಡುವೆ ಲೀನವಾಗುವ ದೃಶ್ಯ ಕಣ್ಮನ ಸೆಳೆಯುವಂತಿದೆ.
ವೀಕ್ಷಿತಾ ವಿ.
ಆಳ್ವಾಸ್ ಕಾಲೇಜು, ಮೂಡುಬಿದಿರೆ