ಒಡಿಶಾದ “ಮಂಡ ಎಮ್ಮೆ’ಗೆ ಸ್ವದೇಶಿ ತಳಿ ಎಂಬ ಹೆಗ್ಗಳಿಕೆ ಲಭ್ಯವಾಗಿದೆ. ಮಲ್ಕನ್‌ಗಿರಿ ಮತ್ತು ನಬರಂಗ್ಪುರ ಪ್ರದೇಶದಲ್ಲಿ ಕಾಣಿಸಿಕೊಳ್ಳುವ ಈ ಎಮ್ಮೆಗಳನ್ನು ನ್ಯಾಶನಲ್ ಬ್ಯೂರೋ ಆಫ್ ಅನಿಮಲ್ ಜೆನೆಟಿಕ್ ರಿಸೋರ್ಸಸ್(ಎನ್‌ಬಿಎಜಿಆರ್) ಸ್ಥಳೀಯ ತಳಿ ಎಂದು ಘೋಷಿಸಿದೆ.
ಒಡಿಶಾದ ಪ್ರಾಣಿ ಸಂಪನ್ಮೂಲಗಳ ಅಭಿವೃದ್ಧಿ ಇಲಾಖೆಯು ಒಡಿಶಾ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ 2019 ರಲ್ಲಿ ವಿವರವಾದ ಸಮೀಕ್ಷೆಯನ್ನು ನಡೆಸಿತ್ತು. ಒಡಿಶಾದ ಪ್ರಾಣಿ ಸಂಪನ್ಮೂಲಗಳ ಅಭಿವೃದ್ಧಿ ಇಲಾಖೆಯು ಒಡಿಶಾ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ 2019 ರಲ್ಲಿ ವಿವರವಾದ ಸಮೀಕ್ಷೆಯನ್ನು ನಡೆಸಿದೆ.
ಇದನ್ನೂ ಓದಿ:ಬೆಂಜ್ ಕಾರು ಖರೀದಿಗೆ ಡ್ರೀಮ್‌ಫೆಸ್ಟ್
ಮಂಡಾ ಸಣ್ಣ, ಗಟ್ಟಿಮುಟ್ಟಾದ ಎಮ್ಮೆಗಳಾಗಿದ್ದು, ಗಂಡು ಮತ್ತು ಹೆಣ್ಣು ಎರಡನ್ನೂ ಉಳುಮೆಗಾಗಿ ಮತ್ತು ಕೋರಾಪುಟ್, ಮಲ್ಕಂಗಿರಿ ಮತ್ತು ನಬರಂಗಪುರ ಜಿಲ್ಲೆಗಳಲ್ಲಿ ಕೃಷಿ ಕಾರ್ಯಾಚರಣೆಯಲ್ಲಿ ಬಳಸಲಾಗುತ್ತದೆ.
ಈ ಮೂಲಕ ದೇಶದಲ್ಲಿ ಮಾನ್ಯತೆ ಪಡೆದ ತಳಿಗಳ ಸಂಖ್ಯೆ 202ಕ್ಕೆ ಏರಿದೆ. ಅದರಲ್ಲಿ 19 ತಳಿಗಳು ಎಮ್ಮೆಗೆ ಸೇರಿದ ತಳಿಗಳಾಗಿವೆ. ಇತ್ತೀಚೆಗೆ ಕರ್ನಾಟಕದ ಧಾರವಾಡ ಎಮ್ಮೆಗೂ “ತಳಿ ಮಾನ್ಯತೆ’ ದೊರೆತಿತು