Advertisement

ಆ್ಯಶಸ್‌: ಇಂಗ್ಲೆಂಡ್‌ ನೆರವಿಗೆ ರೋರಿ ಬರ್ನ್ಸ್, ಜೋ ರೂಟ್‌

12:35 AM Sep 07, 2019 | Sriram |

ಮ್ಯಾಂಚೆಸ್ಟರ್‌: ಆ್ಯಶಸ್‌ ಸರಣಿಯ ಮ್ಯಾಂಚೆಸ್ಟರ್‌ ಟೆಸ್ಟ್‌ ಪಂದ್ಯದಲ್ಲಿ ಆರಂಭಿಕ ಕುಸಿತಕ್ಕೊಳಗಾದ ಇಂಗ್ಲೆಂಡಿಗೆ ಆರಂಭಕಾರ ರೋರಿ ಬರ್ನ್ಸ್ ಮತ್ತು ನಾಯಕ ಜೋ ರೂಟ್‌ ಆಸರೆಯಾಗಿ ನಿಂತಿದ್ದಾರೆ. ಶುಕ್ರವಾರದ ಚಹಾ ವಿರಾಮದ ವೇಳೆ 2 ವಿಕೆಟಿಗೆ 125 ರನ್‌ ಗಳಿಸಿದೆ. ಆಸ್ಟ್ರೇಲಿಯ 8 ವಿಕೆಟಿಗೆ 497 ರನ್‌ ಪೇರಿಸಿ ತನ್ನ ಮೊದಲ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿತ್ತು.

Advertisement

ಜೋ ಡೆನ್ಲಿ (4) ಮತ್ತು ಕ್ರೆಗ್‌ ಓವರ್ಟನ್‌ (6) ಅವರನ್ನು ಇಂಗ್ಲೆಂಡ್‌ 25 ರನ್‌ ಆಗುವಷ್ಟರಲ್ಲಿ ಕಳೆದುಕೊಂಡು ಆತಂಕಕ್ಕೆ ಸಿಲುಕಿತು. ಆದರೆ 3ನೇ ವಿಕೆಟಿಗೆ ಜತೆಗೂಡಿದ ಬರ್ನ್ಸ್-ರೂಟ್‌ ಸರಿಯಾಗಿ 100 ರನ್‌ ಪೇರಿಸಿ ಕುಸಿತಕ್ಕೆ ತಡೆಯೊಡ್ಡಿದರು. ಬರ್ನ್ಸ್ 62, ರೂಟ್‌ 47 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಸ್ಟೀವನ್‌ ಸ್ಮಿತ್‌ ಅಮೋಘ 211 ರನ್‌ ಬಾರಿಸಿದ್ದು ಆಸ್ಟ್ರೇಲಿಯ ಸರದಿಯ ಆಕರ್ಷಣೆಯಾಗಿತ್ತು. ಕೊನೆಯಲ್ಲಿ ಮಿಚೆಲ್‌ ಸ್ಟಾರ್ಕ್‌ (ಅಜೇಯ 54) ಮತ್ತು ನಥನ್‌ ಲಿಯೋನ್‌ (ಅಜೇಯ 26) ಕೂಡ ಇಂಗ್ಲೆಂಡ್‌ ಬೌಲರ್‌ಗಳನ್ನು ಕಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next