Advertisement

ಕಾಂಗ್ರೆಸ್‌ ನಿಂದ ಮ್ಯಾಂಚೆಸ್ಟರ್‌ ಖ್ಯಾತಿಗೆ ಕುತ್ತು

04:35 PM May 05, 2018 | |

ದಾವಣಗೆರೆ: ದಾವಣಗೆರೆ ನಗರ ಕರ್ನಾಟಕದ ಮ್ಯಾಂಚೆಸ್ಟರ್‌ ಖ್ಯಾತಿಗೆ ಕುತ್ತು ಬರಲು 50 ವರ್ಷ ಆಳ್ವಿಕೆ ನಡೆಸಿರುವ ಕಾಂಗ್ರೆಸ್‌ ಸರ್ಕಾರ ಕಾರಣ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಆರೋಪಿಸಿದ್ದಾರೆ. ಶುಕ್ರವಾರ, ನಗರದ ಕಾಯಿಪೇಟೆ ಶ್ರೀ ಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಹಮ್ಮಿಕೊಂಡ ಮಾಯಕೊಂಡ, ದಾವಣಗೆರೆ ದಕ್ಷಿಣ, ಉತ್ತರ
ವಿಧಾನಸಭಾ ಬಿಜೆಪಿ ಅಭ್ಯರ್ಥಿಗಳ ಮತ ಪ್ರಚಾರ ಸಭೆ ಉದ್ಘಾಟಿಸಿ, ಮಾತನಾಡಿದ ಅವರು, ನಾನು ತಿಳಿದಂತೆ ದಾವಣಗೆರೆ ಕರ್ನಾಟಕದ ಮ್ಯಾಂಚೆಸ್ಟರ್‌ ಎಂಬುದಾಗಿ ಹೆಸರುವಾಸಿಯಾಗಿತ್ತು. ಆದರೆ, ಇಂದು ಆ ಖ್ಯಾತಿ ಇಲ್ಲವಾಗಿದೆ. ಇದಕ್ಕೆ ಕಾರಣ 50 ವರ್ಷ
ಆಡಳಿತ ನಡೆಸಿದ ಕಾಂಗ್ರೆಸ್‌ ಎಂದರು.

Advertisement

ಇಲ್ಲಿನ ಜನ ಜೀವನಕ್ಕಾಗಿ ಬೇರೆಡೆ ವಲಸೆ ಹೋಗುತ್ತಿದ್ದಾರೆ. ಯುವಕರು ಹತಾಶರಾಗಿದ್ದಾರೆ. ರೈತರ ಕಣ್ಣಲ್ಲಿ ರಕ್ತ ಕಣೀ¡ರು ಸುರಿಯುವಂತ ಭೀಕರ ಸ್ಥಿತಿ ಇದೆ. ಇದಕ್ಕೆಲ್ಲಾ ಕಾರಣ ಕಾಂಗ್ರೆಸ್‌ ಪಕ್ಷದ ದುರಾಡಳಿತ. ಇಂತಹ ಪಕ್ಷವನ್ನು ಆಡಳಿತದಿಂದ
ದೂರ ಇಡಲು ಮತದಾರರು ಮುಂದಾಗಬೇಕು. ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿ, ಯಡಿಯೂರಪ್ಪ ಮುಖ್ಯಮಂತ್ರಿ ಆಗುವಂತೆ ಮಾಡಬೇಕು ಎಂದು ಅವರು ಮನವಿ ಮಾಡಿದರು.

ಉತ್ತರ ಪ್ರದೇಶ, ಕರ್ನಾಟಕಕ್ಕೆ ಅವಿನಾಭಾವ ಸಂಬಂಧ ಇದೆ. ಉತ್ತರ ಪ್ರದೇಶದಲ್ಲಿ ಹುಟ್ಟಿದ ರಾಮನಿಗೆ ಜೋಡಿಯಾಗಿ ಸಿಕ್ಕ ಆಂಜನೇಯ ಹುಟ್ಟಿದ್ದು ಕರ್ನಾಟಕದಲ್ಲಿ. ಇಲ್ಲಿ ರಾಮರಾಜ್ಯ ನಿರ್ಮಾಣ ಆಗಬೇಕು. ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಇದೆ. ಇಲ್ಲೂ ಸಹ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ರಾಮರಾಜ್ಯ ನಿರ್ಮಾಣ ಸಾಧ್ಯ ಎಂದು ಅವರು ಹೇಳಿದರು.

ಕರ್ನಾಟಕದ ಅಭಿವೃದ್ಧಿ ಇಂದು ಕುಂಠಿತವಾಗಿದೆ. ರಾಜ್ಯದಲ್ಲಿನ ರಾಷ್ಟ್ರವಾದಿಗಳ ಸರಣಿ ಕೊಲೆಯಾಗುತ್ತಿದೆ. ಜಿಹಾದಿಗಳು ಅಟ್ಟಹಾಸದಿಂದ ಮೆರೆಯುತ್ತಿದ್ದಾರೆ. ಅವರನ್ನು ನಿಯಂತ್ರಿಸುವ ಬದಲು ಸಿದ್ದರಾಮಯ್ಯ ಕುಮ್ಮಕ್ಕು ನೀಡುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಜನರ ಭಾವನೆಗಳ ಜೊತೆ ಆಟವಾಡುತ್ತಿದ್ದಾರೆ. ಸಿದ್ದರಾಮಯ್ಯಗೆ ಜನರ ಭಾವನೆ ಜೊತೆಗೆ ಆಟವಾಡುವ ಅಧಿಕಾರ ಯಾರೂ ಕೊಟ್ಟಿಲ್ಲ. ಇಂತಹ ಜನವಿರೋಧಿ, ಯುವ ವಿರೋಧಿ, ರೈತ ವಿರೋಧಿ ಸರ್ಕಾರ ಕಿತ್ತೂಗೆಯಲು ನೀವೆಲ್ಲಾ ಬಿಜೆಪಿ ಜೊತೆ ಕೈ ಜೋಡಿಸಿ ಎಂದು ಅವರು ಕೋರಿದರು.

ಕೇಂದ್ರದಲ್ಲಿನ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಇಂದು ಸಾಕಷ್ಟು ಜನಪರ ಯೋಜನೆ ಜಾರಿಮಾಡಿದೆ. ರೈತರಿಗೆ ಫಸಲು
ಬೀಮಾ ಯೋಜನೆ, ಕೃಷಿ ಸಿಂಚನ, ಯುವಜನರಿಗೆ ಮುದ್ರಾ ಬ್ಯಾಂಕ್‌, ಮಹಿಳೆಯರಿಗಾಗಿ ಹಲವು ಯೋಜನೆ ಅನುಷ್ಠಾನಗೊಳಿಸಲಾಗಿದೆ. ಇಂತಹ ಜನಪರ ಯೋಜನೆ ನಿಜವಾದ ಫಲಾನುಭವಿಗಳಿಗೆ ತಲುಪಬೇಕಾದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರುವುದು ಅನಿವಾರ್ಯ ಎಂದು ಅವರು ತಿಳಿಸಿದರು.

Advertisement

ದಾವಣಗೆರೆ ಉತ್ತರ ಕ್ಷೇತ್ರದ ಅಭ್ಯರ್ಥಿ ಎಸ್‌ .ಎ. ರವೀಂದ್ರನಾಥ್‌, ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಯಶವಂತರಾವ್‌ ಜಾಧವ್‌, ಮಾಯಕೊಂಡ ಅಭ್ಯರ್ಥಿ ಪ್ರೊ| ಲಿಂಗಣ್ಣ, ಮುಖಂಡರಾದ ಎನ್‌. ರಾಜಶೇಖರ್‌, ಜಯಪ್ರಕಾಶ್‌ ಅಂಬರ್‌ಕರ್‌, ರುದ್ರಮುನಿಸ್ವಾಮಿ, ರಾಜನಹಳ್ಳಿ ಶಿವಕುಮಾರ ವೇದಿಕೆಯಲ್ಲಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next