Advertisement
ಆದರೆ ಇದೇ ಸಂದರ್ಭದಲ್ಲಿ ಶನಿವಾರದಂದು ಪ್ಯಾರಾ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಶಿಪ್ ಕೂಟದಲ್ಲಿ ಮಾನಸಿ ಜೋಷಿ ಚಿನ್ನ ಗೆಲ್ಲುವ ಮೂಲಕ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಪಟ್ಟವನ್ನು ಅಲಂಕರಿಸಿದ್ದು ಹೆಚ್ಚು ಪ್ರಚಾರ ಪಡೆಯಲೇ ಇಲ್ಲ. ಜೋಷಿ ಅವರು ಕಂಪಾಟ್ರಿಯೋಟ್ ಪಾರುಲ್ ಪಾರ್ಮೆರ್ ಅವರನ್ನು ಫೈನಲ್ ನಲ್ಲಿ ಸೋಲಿಸುವ ಮೂಲಕ ವಿಶ್ವ ಚಾಂಪಿಯನ್ ಕೂಟದಲ್ಲಿ ತಮ್ಮ ಚೊಚ್ಚಲ ಬಂಗಾರದ ಪದಕವನ್ನು ಗೆದ್ದುಕೊಂಡರು.ಈ ಬಾರಿಯ ಪ್ಯಾರಾ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಶಿಪ್ ಕೂಟದಲ್ಲಿ ಭಾರತ ತಂಡ ಒಟ್ಟು 12 ಪದಕಗಳನ್ನು ಗೆಲ್ಲುವ ಮೂಲಕ ಅಪೂರ್ವ ಸಾಧನೆ ಮಾಡಿದೆ. ಆದರೆ ಇವರ ಸಾಧನೆ ಎಲ್ಲಿಯೂ ಪ್ರಾಮುಖ್ಯತೆ ಗಳಿಸಿಕೊಳ್ಳಲೇ ಇಲ್ಲ.
ಪ್ಯಾರಾ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಶಿಪ್ ಕೂಟದಲ್ಲಿ ಕಂಚಿನ ಪದಕ ತನ್ನದಾಗಿಸಿಕೊಂಡಿರುವ ಸುಕಾಂತ್ ಕದಮ್ ಅವರು ಮಾತ್ರ ಈ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮಾಡುವ ಮೂಲಕ ಅವರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಸಿಂಧು ಅವರ ಸಾಧನೆಯನ್ನು ಅಭಿನಂದಿಸಿ ಪ್ರಧಾನಿ ಮೋದಿ ಅವರು ಮಾಡಿರುವ ಟ್ವೀಟ್ ಅನ್ನು ರಿಪೋಸ್ಟ್ ಮಾಡಿ ಸುಕಾಂತ್ ಅವರು ತಮ್ಮ ತಂಡದ ಸಾಧನೆಯನ್ನು ಪ್ರಧಾನಿ ಅವರ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದಾರೆ.
We still are waiting for @narendramodi sir response. I missed the opportunity after Asian Para Games as I was went to Denmark tournament. I won Denmark tournament but missed chance to meet you. #ParaBadminton #TeamIndia@PramodBhagat83 @PMOIndia @Media_SAI https://t.co/8f1DXee2EM
‘ಗೌರವಾನ್ವಿತ ನರೇಂದ್ರ ಮೋದಿಯವರಿಗೆ,
ಪ್ಯಾರಾ ಬ್ಯಾಂಡ್ಮಿಂಟನ್ ಆಟಗಾರರಾದ ನಾವೂ ಸಹ ಪ್ಯಾರಾ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಶಿಪ್ ಕೂಟದಲ್ಲಿ 12 ಪದಕಗಳನ್ನು ಗೆದ್ದುಕೊಂಡಿದ್ದೇವೆ ಮತ್ತು ನಮಗೆ ನಿಮ್ಮ ಆಶೀರ್ವಾದದ ಅಗತ್ಯವಿದೆ. ಏಷ್ಯನ್ ಗೇಮ್ಸ್ ಬಳಿಕ ನಮಗೆ ನಿಮ್ಮನ್ನು ಭೇಟಿಯಾಗುವ ಅವಕಾಶ ಸಿಕ್ಕಿಲ್ಲ, ಈಗ ನಮಗೆ ಅವಕಾಶವನ್ನು ಒದಗಿಸಿಕೊಡಬೇಕೆಂದು ನಾನು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ’ ಎಂದು ಸುಶಾಂತ್ ಅವರು ತಮ್ಮ ಈ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ. ಇನ್ನು ಸಿಂಧು ಅವರ ಐತಿಹಾಸಿಕ ಗೆಲುವಿನ ಬೆನ್ನಲ್ಲೇ ಮಾನಸಿ ಜೋಷಿ ಅವರೂ ಸಹ ಟ್ವೀಟ್ ಮಾಡಿದ್ದಾರೆ.
Tournament update: Wonderful few days at the BWF Para-badminton World Championships. Stoked to have won the Gold with exactly #1YearToGo for #Tokyo2020 Paralympics.
Related Articles
‘ಟೊಕಿಯೋ ಒಲಂಪಿಕ್ಸ್ ಕೂಟಕ್ಕೆ ಒಂದೇ ವರ್ಷ ಬಾಕಿ ಇರುವಂತೆ ಬಿ.ಡಬ್ಲ್ಯು.ಎಫ್. ಪ್ಯಾರಾ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆದ್ದದ್ದು ಖುಷಿ ಕೊಟ್ಟಿದೆ. ಹಾಗೆಯೇ ಸಿಂಧು ಅವರಿಗೆ ಅಭಿನಂದನೆಗಳು, ನೀವು ಸರ್ವಕಾಲೀನ ಶ್ರೇಷ್ಠ ಆಟಗಾರ್ತಿಯಾಗಿದ್ದೀರಿ’ ಎಂದು ಮಾನಸಿ ಟ್ವೀಟ್ ಮಾಡಿದ್ದಾರೆ.
Advertisement
ಒಟ್ಟಿನಲ್ಲಿ ಒಂದೇ ಕ್ರೀಡಾ ಪ್ರಕಾರದ ಭಿನ್ನ ವಿಭಾಗಗಳಲ್ಲಿ ಕ್ರೀಡಾಪಟುಗಳ ಸಾಧನೆಯನ್ನು ನಮ್ಮ ವ್ಯವಸ್ಥೆ ನೋಡುವ ದೃಷ್ಟಿಕೋನ ಮಾತ್ರ ಬೇರೆ ಬೇರೆಯಾಗಿರುವುದು ಒಂದು ದುರಂತವೇ ಸರಿ. ಭಿನ್ನ ಸಾಮರ್ಥ್ಯದ ಕ್ರೀಡಾಪಟುಗಳ ಸಾಧನೆಗೆ ಕನಿಷ್ಟ ಮನ್ನಣೆ ಏಕೆ ಎಂಬುದಕ್ಕೆ ಬ್ಯಾಡ್ಮಿಂಟನ್ ಮಂಡಳಿಯ ಅಧಿಕಾರಿಗಳೇ ಉತ್ತರಿಸಬೇಕಾಗಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಕೇಂದ್ರ ಕ್ರೀಡಾ ಸಚಿವರಾಗಿರುವ ಕಿರೆಣ್ ರಿಜೆಜು ಅವರು ಬಿ.ಡಬ್ಲ್ಯು.ಎಫ್. ಪ್ಯಾರಾ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಶಿಪ್ ಪದಕ ವಿಜೇತ ಎಲ್ಲಾ ಹನ್ನೆರಡು ಜನ ಆಟಗಾರರಿಗೆ ನಗದು ಬಹುಮಾನ ಘೋಷಿಸಿದ್ದಾರೆ. ಮತ್ತು ಈ ಹನ್ನೆರಡು ಆಟಗಾರನ್ನು ಭೇಟಿಯಾಗಿ ಅವರನ್ನು ಅಭಿನಂದಿಸಿದ್ದಾರೆ.