Advertisement

ಟೈಮ್‌ ಮುಖಪುಟದಲ್ಲಿ ಅಪ್ಪಟ ಭಾರತೀಯ ಪ್ರತಿಭೆ ಮಾನಸಿ ಜೋಷಿ

12:35 PM Oct 11, 2020 | keerthan |

ಅಮೆರಿಕದ ಖ್ಯಾತ ನಿಯತಕಾಲಿಕೆ ಟೈಮ್‌, ಅಪ್ಪಟ ಭಾರತೀಯ ಪ್ರತಿಭೆ, ಸ್ಫೂರ್ತಿಯ ಚಿಲುಮೆ ಮಾನಸಿ ಜೋಷಿಯವರನ್ನು ಭವಿಷ್ಯದ ಪೀಳಿಗೆಯ ನಾಯಕಿ ಎಂದು ಗುರ್ತಿಸಿ, ತನ್ನ ಮುಖಪುಟದಲ್ಲಿ ಅವರ ಚಿತ್ರ ಪ್ರಕಟಿಸಿದೆ.

Advertisement

ಕಳೆದ ವರ್ಷ ದಿವ್ಯಾಂಗರ ಸಿಂಗಲ್ಸ್ ‌ವಿಭಾಗದಲ್ಲಿ ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ ಶಿಪ್‌ ಗೆದ್ದಿರುವ ಮಾನಸಿ, ಒಂದು ಕಾಲದಲ್ಲಿ ಭಾರತದ ಇನ್ನೊಂದು ಶ್ರೇಷ್ಠ ಪ್ರತಿಭೆ ಪಿ.ವಿ.ಸಿಂಧು ಪ್ರಭೆಯಡಿ ಮಸುಕಾಗಿದ್ದರು.

2011ರವರೆಗೆ ಎಲ್ಲರಂತೆಯೇ ಮಾಮೂಲಿಯಾಗಿಯೇ ಇದ್ದ ಮಾನಸಿ, ಆ ವರ್ಷ ನಡೆದ ಅಪಘಾತದಲ್ಲಿ ತನ್ನ ಎಡಗಾಲು ಕಳೆದುಕೊಂಡರು.

ಇದನ್ನೂ ಓದಿ:ಪಂಜಾಬ್‌ನ ಈ ಸೋಲಿಗೆ ಕ್ಷಮೆಯಿಲ್ಲ!

ಆ ಘಟನೆಯ ನಂತರ ಅವರು ಕುಸಿಯದೇ ಮೇಲೆದ್ದರು. ಪರಿಣಾಮ ಮಾನಸಿ ಇವತ್ತು ವಿಶ್ವಕೂಟ ಗೆದ್ದಿದ್ದಾರೆ, ಮಾತ್ರವಲ್ಲ ಲಕ್ಷಾಂತರ ಮಂದಿಗೆ ಪ್ರೇರಣೆಯಾಗಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next