Advertisement

ಮನರೂಪ ಮುಕ್ತಾಯ; ಹೊಸಬರ ಸೈಕಲಾಜಿಕಲ್‌ ಥ್ರಿಲ್ಲರ್‌

09:45 AM Feb 14, 2019 | Team Udayavani |

ಸೈಕಲಾಜಿಕಲ್‌ ಥ್ರಿಲ್ಲರ್‌ ಅಂಶಗಳಿರುವ “ಮನರೂಪ’ ಚಿತ್ರದ ಬಗ್ಗೆ ಈ ಹಿಂದೆ ಇದೇ ಬಾಲ್ಕನಿಯಲ್ಲಿ ಹೇಳಲಾಗಿತ್ತು. ಇದೀಗ ಆ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದೆ. ಕಿರಣ್‌ ಹೆಗಡೆ ನಿರ್ದೇಶನದ ಈ ಚಿತ್ರವನ್ನು ಸಿಎಂಸಿಆರ್‌ ಮೂವೀಸ್‌ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಲಾಗಿದೆ. 1980 ಹಾಗು 2000 ರ ನಡುವಿನ ವರ್ಷಗಳ ಅವಧಿಯಲ್ಲಿ ಜನಿಸಿದವರ ಅಪರೂಪದ ಕಥೆ ಇಲ್ಲಿದ್ದು, ಕಾಡಿನಲ್ಲೆ ಚಿತ್ರದ ಕಥೆ ಅನಾವರಣಗೊಳ್ಳಲಿದೆ.

Advertisement

ಹೊಸಬರೇ ಸೇರಿ ಮಾಡಿರುವ ಈ ಚಿತ್ರದಲ್ಲಿ ಪರಸ್ಪರ ಪ್ರೀತಿ ವಿಶ್ವಾಸದಿಂದ ಕುಟುಂಬದಲ್ಲಿ ಇರಲಾಗದ, ಹೊಂದಿಕೊಂಡು ಜೀವಿಸಲಾಗದ, ಒಂಟಿಯಾಗೇ ಉಳಿಯಲು ಇಚ್ಚಿಸುವ, ಆದರೆ ತಮ್ಮನ್ನೇ ಗಮನಿಸಬೇಕು ಎನ್ನುವ ಮನೋಭಾವದ ಯುವ ಮನಸ್ಸಿನ ಅಂಶಗಳು ಹೈಲೈಟ್‌. ಈಗಾಗಲೇ ಚಿತ್ರದ ಟೈಟಲ್‌ ಪೋಸ್ಟರ್‌ ಒಂದಷ್ಟು ಗಮನಸೆಳೆದಿತ್ತು. ಸದ್ಯದಲ್ಲೇ ಟೈಟಲ್‌ ಮೋಷನ್‌ ಪೋಸ್ಟರ್‌ ಬಿಡುಗಡೆ ಮಾಡುವ ತಯಾರಿ ಮಾಡಿಕೊಂಡಿದ್ದಾರೆ ನಿರ್ದೇಶಕ ಕಿರಣ್‌ ಹೆಗಡೆ.

ಈ ಚಿತ್ರದ ಶುರುವಿಗೆ ಮುನ್ನ, ಸುಮಾರು ಹದಿನೈದು ದಿನಗಳ ಕಾಲ ವರ್ಕ್‌ಶಾಪ್‌ ನಡೆಸಲಾಗಿದೆ. ಉತ್ತರಕನ್ನಡದ ಶಿರಸಿ, ಸಿದ್ಧಾಪುರ ಸೇರಿದಂತೆ ಇತರೆ ಸ್ಥಳಗಳಲ್ಲಿ ಚಿತ್ರೀಕರಣ ನಡೆದಿದ್ದು, ಚಿತ್ರದಲ್ಲಿ ದಿಲೀಪ್‌ ಕುಮಾರ್‌, ಅನುಷಾ ರಾವ್‌, ನಿಶಾ ಬಿ.ಆರ್‌., ಆರ್ಯನ್‌, ಶಿವಪ್ರಸಾದ್‌ ಸೇರಿದಂತೆ ಇತರರು ಕಾಣಿಸಿಕೊಂಡಿದ್ದಾರೆ. ಇನ್ನು, ಈ ಹೊಸಬರ “ಮನರೂಪ’ ಹಲವು ಕಾರಣಗಳಿಂದ ಗಮನ ಸೆಳೆಯಲಿದೆ ಎಂಬ ವಿಶ್ವಾಸ ನಿರ್ದೇಶಕರಿಗಿದೆ. ಕಾರಣ, ಇಲ್ಲಿ, ಪ್ರೀತಿ, ಗೆಳೆತನ, ವಿಚ್ಛೇದನ ಸೇರಿದಂತೆ ಮನುಷ್ಯನ ಇತರೆ ಸ್ವಾಭಾವಿಕ ಗುಣಗಳ ಬಗ್ಗೆ ಹೇಳಲಾಗಿದೆಯಂತೆ. ಗೋವಿಂದರಾಜ್‌ ಛಾಯಾಗ್ರಹಣವಿದೆ. ಸೂರಿ-ಲೋಕಿ ಸಂಕಲನ ಮಾಡಿದರೆ, ಸರವಣ ಅವರ ಸಂಗೀತವಿದೆ. ಮಹಾಬಲ ಸೀತಾಳಭಾವಿ ಅವರ ಸಂಭಾಷಣೆ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next