Advertisement
ಹೌದು ಅರಣ್ಯ ಸಚಿವಾಲಯದ ಅನುಮೋದನೆ ಪಡೆದ ಕೂಡಲೇ ರೋಹ್ಟಾಗ್ ರೋಪ್‌ವೇ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದ್ದು, ಖಾಸಗಿ ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ) ಮಾದರಿ ಬಳಸಿಕೊಂಡು 9 ಕಿ.ಮೀ. ಉದ್ದದ ರೋಪ್‌ವೇಯನ್ನು ನಿರ್ಮಾಣ ಮಾಡಲಾಗುತ್ತಿದೆ.
ಭಾರತದ ಬೃಹತ್ ರೂಪ್‌ವೇ ಆಗಿರುವ ಇದನ್ನು ಸುಮಾರು 450 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸುತ್ತಿದ್ದು, ಮೂರು ಹಂತಗಳಲ್ಲಿ ಪೂರ್ಣಗೊಳಲಿದೆ. ಈ ಮಹತ್ವಾಕಾಂಕ್ಷೆಯ ರೋಪ್‌ವೇ ನಿರ್ಮಾಣಕ್ಕೆ ರಾಜ್ಯ ಸರಕಾರವು ಬಹುತೇಕ ಎಲ್ಲ ವಿಧಾನಗಳನ್ನು ಪೂರ್ಣಗೊಳಿಸಿದೆ. ಪ್ರವಾಸೋದ್ಯಮದ ಬೆಳವಣಿಗೆ ಸಹಕಾರಿ
ಪ್ರಾರಂಭಿಕವಾಗಿ ಈ ಪ್ರವಾಸಿ ತಾಣವು ಹಿಮಾಚಲ ಪ್ರದೇಶದ ಕೋತಿ ಗ್ರಾಮದಿಂದ ಆರಂಭಗೊಂಡು ಅಲ್ಲಿಂದ ಮೊದಲು ಗುಲಾಬಾ ಮತ್ತು ಅನಂತರ ಗುಲಾಬ್‌ನಿಂದ ಮಾಹಿರ್ ತನಕ ನಿರ್ಮಿಸಲಾಗುತ್ತದೆ. 9 ಕಿ.ಮೀ. ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಈ ರೋಪ್‌ವೇ ಮಾಹಿರ್‌ನಿಂದ ರೋಹ್ಟಾಗ್ ಪಾಸ್‌ಗೆ ಸಂಪರ್ಕ ಕಲ್ಪಿಸಿ ಕೊಡಲಿದ್ದು, ಈ ಹೊಸ ಯೋಜನೆಯು ಕುಲ್ಲು ಮನಾಲಿಯ ಪ್ರವಾಸೋದ್ಯಮದ ಬೆಳವಣಿಗೆಗೆ ಸಹಕಾರಿಯಾಗಲಿದೆ. ಈ ರೋಪ್‌ವೇ ಭಾರತೀಯ ಮತ್ತು ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ಕೇಂದ್ರವಾಗಲಿದೆ ಎಂದು ಊಹಿಸಲಾಗಿದೆ.
Related Articles
ರೋಹ್ಟಾಗ್ ಪಾಸ್ ಪ್ರತಿ ವರ್ಷ ಚಳಿಗಾಲದಲ್ಲಿ ಸುಮಾರು 20ರಿಂದ 25 ಅಡಿ ಹಿಮಪಾತ ಬಿಳುತ್ತದೆ. ಇದು ಸಾಮಾನ್ಯ ಸಂಚಾರಕ್ಕೆ ಅಡ್ಡಿಪಡಿಸುತ್ತದೆ. ಈ ಮಾರ್ಗ ನಾಲ್ಕು ತಿಂಗಳವರೆಗೆ ಮುಚ್ಚಲ್ಪಡುತ್ತದೆ. ರೋಹ್ಟಾಗ್ ಪಾಸ್‌ನಲ್ಲಿ ಡಿಸೆಂಬರ್‌ನಿಂದ ಮಾರ್ಚ್ ವರೆಗೆ ಪ್ರವಾಸೋದ್ಯಮಕ್ಕೆ ಅಡಚಣೆಯಾಗಿದೆ. ಆದರೆ ಈಗ ಈ ರೋಪ್‌ವೇ ಪ್ರವಾಸಿಗರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲಿದ್ದು, ಪ್ರವಾಸೋದ್ಯಮ ವ್ಯವಹಾರವು ವೇಗಗೊಳಿಸಲಿದೆ. ಜತೆಗೆ ರೋಪ್‌ವೇ ನಿರ್ಮಾಣದೊಂದಿಗೆ ರೋಹ್ಟಾಗ್ ಮತ್ತು ಮನಾಲಿ ನಡುವಿನ 50 ಕಿ.ಮೀ ದೂರವನ್ನು 45 ನಿಮಿಷಗಳಲ್ಲಿ ತಲುಪಬಹುದಾಗಿದೆ.
Advertisement