Advertisement

ವಿಮಾನ ಮಾದರಿ ಬೋಗಿ!

09:02 AM Oct 29, 2018 | |

ಹೊಸದಿಲ್ಲಿ: ವಿಮಾನಗಳು ಹಾರಾಡುವ ಎತ್ತರದಲ್ಲಿ ಆಮ್ಲಜನಕ ಕಡಿಮೆಇರುವುದರಿಂದಾಗಿ ಪ್ರತ್ಯೇಕ ಗಾಳಿ ಒತ್ತಡ ವ್ಯವಸ್ಥೆಯನ್ನು ರೂಪಿಸಲಾಗಿರುತ್ತದೆ. ಇದೇ ವ್ಯವಸ್ಥೆಯನ್ನು ಈಗ ಬಿಲಾಸ್‌ಪುರ-ಮನಾಲಿ-ಲೇಹ್‌ ರೈಲು ಮಾರ್ಗದಲ್ಲಿ ಸಂಚರಿಸುವ ಬೋಗಿಗಳಿಗೆ ಅಳವಡಿಸಲಾಗುತ್ತಿದೆ. ಈ ರೈಲು ಮಾರ್ಗವು ವಿಶ್ವದಲ್ಲೇ ಅತಿ ಎತ್ತರದ ರೈಲು ಮಾರ್ಗವಾಗಿದ್ದು, ಸಂಚರಿಸುವ ಪ್ರಯಾಣಿಕರಿಗೆ ಉಸಿರಾಟದ ತೊಂದರೆ ಕಾಣಿಸಿಕೊಳ್ಳದಿರಲು ಈ ವ್ಯವಸ್ಥೆ ಮಾಡಲಾಗಿದೆ.

Advertisement

ಸಮುದ್ರ ಮಟ್ಟದಿಂದ 5,360 ಮೀಟರ್‌ ಎತ್ತರದಲ್ಲಿ ಈ ರೈಲು ಸಂಚರಿಸಲಿದೆ. 83,360 ಕೋಟಿ ರೂ. ವೆಚ್ಚದಲ್ಲಿ 465 ಕಿ.ಮೀ ಉದ್ದದ ರೈಲು ಮಾರ್ಗವನ್ನು ನಿರ್ಮಿಸಲಾಗುತ್ತಿದೆ. ಈ ರೀತಿಯ ಬೋಗಿಗಳನ್ನು ಚೀನಾದ ಕ್ವಿಂಘೆ- ಟಿಬೆಟ್‌ ರೈಲು ಮಾರ್ಗದಲ್ಲಿ ಸಂಚರಿಸುವ ಬೋಗಿಗಳಿಗೂ ಅಳವಡಿಸಲಾಗಿದೆ. ವಿಮಾನಗಳನ್ನು ತಯಾರಿಸುವ ಕೆನಡಾದ ಬೊಂಬಾರ್ಡಿಯರ್‌ ಕಂಪೆನಿ ಚೀನಗೆ ಬೋಗಿಗಳನ್ನು ನಿರ್ಮಿಸುತ್ತಿದೆ.

ಆದರೆ ಭಾರತದಲ್ಲಿ ಈ ಬೋಗಿಗಳನ್ನು ತಯಾರಿಸಲಾಗುತ್ತದೆಯೇ ಅಥವಾ ವಿದೇಶದಿಂದ ಖರೀದಿಸಲಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೂಲಗಳ ಪ್ರಕಾರ, ಇಂಟಗ್ರೇಟೆಡ್‌ ಕೋಚ್‌ ಫ್ಯಾಕ್ಟರಿಯಲ್ಲೇ ಈ ಕೋಚ್‌ಗಳನ್ನು ತಯಾರಿಸುವ ಸಾಧ್ಯತೆಯಿದೆ. ಸದ್ಯ ಬುಲೆಟ್‌ ಟ್ರೇನ್‌ಗಳ ಕೋಚ್‌ಗಳನ್ನು ಇಲ್ಲಿ ತಯಾರಿಸಲು ನಿರ್ಧರಿಸಲಾಗಿದೆ. ಈ ಮಾರ್ಗದ ಅಂತಿಮ ಸಮೀಕ್ಷೆ ಕಾರ್ಯ ಚಾಲ್ತಿಯಲ್ಲಿದ್ದು, ರೈಲು ಓಡಾಟ ಆರಂಭಿಸಿದ ನಂತರದಲ್ಲಿ ಲೇಹ್‌ನಿಂದ ಬಿಲಾಸ್‌ಪುರದವರೆಗಿನ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸಲಿದೆ. 74 ಸೇತುವೆಗಳು, 124 ಪ್ರಮುಖ ಸೇತುವೆಗಳು ಹಾಗೂ 396 ಸಣ್ಣ ಸೇತುವೆಗಳನ್ನು ಈ ಮಾರ್ಗಕ್ಕಾಗಿ ನಿರ್ಮಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next