Advertisement

ಬಾಗಲಕೋಟೆ:ಸಮರ್ಪಕವಾಗಿ ತೊಗರಿ ಬೆಳೆ ನಿರ್ವಹಣೆ ಮಾಡಿ

06:09 PM Dec 17, 2022 | Team Udayavani |

ಬಾಗಲಕೋಟೆ: ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಪ್ರಸಕ್ತ ಸಾಲಿಗೆ ಅನುಷ್ಟಾನಗೊಳಿಸಿರುವ ಗುತ್ಛ ಮುಂಚೂಣಿ ಪ್ರಾತಕ್ಷಿಕೆಯಡಿ ಜಿಲ್ಲೆಯ ಇಳಕಲ್ಲ ತಾಲೂಕಿನ
ಬೂದಿಹಾಳ ಎಸ್‌.ಕೆ ಗ್ರಾಮದಲ್ಲಿ ಕೃಷಿ ವಿಜ್ಞಾನ ಕೇಂದ್ರದಿಂದ ತೊಗರಿ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮ ಜರುಗಿತು.

Advertisement

ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ| ಮೌನೇಶ್ವರಿ ಕಮ್ಮಾರ ಅವರು ಕೃಷಿ ವಿಜ್ಞಾನ ಕೇಂದ್ರದಿಂದ ರೈತರಿಗೆ ಸಿಗುವ ಸೌಲಭ್ಯಗಳಿವೆ. ತೊಗರಿ ಬೆಳೆಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ಅನುಸರಿಸಬೇಕಾದ ಸಮಗ್ರ ತೊಗರಿ ಬೆಳೆಯ ನಿರ್ವಹಣೆ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

ಕೃಷಿ ವಿಜ್ಞಾನ ಕೇಂದ್ರದ ಹಿರಿಯ ತಾಂತ್ರಿಕ ಅ ಧಿಕಾರಿಗಳಾದ ಡಾ|ಸಿದ್ಧಪ್ಪ ಅಂಗಡಿ ಮಾತನಾಡಿ, ತೊಗರಿ ಸಮೇತ ವಿವಿಧ ಬೆಳೆಗಳಲ್ಲಿ ಹೆಚ್ಚಿನ ಇಳುವರಿ ಪಡೆಯಲು ಮಣ್ಣು ಮತ್ತು ನೀರು ಪರೀಕ್ಷೆಯ ಮಹತ್ವವನ್ನು ಸವಿವರವಾಗಿ ತಿಳಿಸಿದರು. ನಂತರದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ತಜ್ಞರಾದ ಬಸವರಾಜ ನಾಗಲೀಕರ್‌ ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರದ ಜಿಲ್ಲಾ ಕೃಷಿ ಹವಾಮಾನ ಘಟಕದಲ್ಲಿ ನೆಡೆಯುತ್ತಿರುವ ಗ್ರಾಮೀಣ ಕೃಷಿ ಮೌಸಮ್‌ ಸೇವಾ ಯೋಜನೆಯ
ಕಾರ್ಯದ ಬಗ್ಗೆ ತಿಳಿಸಿದರು.

ಭಾರತ ಹವಾಮಾನ ಇಲಾಖೆಯು ಬಿಡುಗಡೆ ಮಾಡಿದ ಮೇಘದೂತ ಹಾಗೂ ದಾಮಿನಿ ಮೊಬೈಲ್‌ ಆ್ಯಪ್‌ ಗಳ ಬಗ್ಗೆ ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ರೈತರಾದ ದೇವೇಂದ್ರಗೌಡ ಗೌಡ್ರ ಮಾತನಾಡಿ, ಅತಿಯಾದ ಮುಂಗಾರು ಮಳೆಯ ನಡುವೆಯೂ ಕೃಷಿ ತಾಂತ್ರಿಕತೆಗಳಾದ ಅಧಿಕ ಇಳುವರಿ ನೀಡುವ, ಗೊಡ್ಡು ನಿರೋಧಕ ತಳಿ ಹಾಗೂ ಯಾಂತ್ರಿಕೃತ ಕಟಾವಿಗೆ ಹೊಂದಿಕೊಳ್ಳುವ ತೊಗರಿ ತಳಿಗಳು ಲಾಭದಾಯಕವಾಗಿವೆ ಎಂದು ಪ್ರಾತ್ಯಕ್ಷಿಕೆಯ ಬಗ್ಗೆ ಅನುಭವ ಹಂಚಿಕೊಂಡರು.

ಕೃಷಿ ವಿಜ್ಞಾನ ಕೇಂದ್ರದ ಹಿರಿಯ ತಾಂತ್ರಿಕ ಅಧಿಕಾರಿಗಳಾದ ಡಾ| ಸಿದ್ಧಪ್ಪ ಅಂಗಡಿ ನೇತೃತ್ವ ವಹಿಸಿಕೊಂಡಿದ್ದರು. ರಾಚಮ್ಮ ಪಲ್ಲೇದ ಅವರ ಹೊಲದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸದರಿ ಕಾರ್ಯಕ್ರದಲ್ಲಿ 35 ರೈತರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next