Advertisement

ಮಾಣಾ ಗ್ರಾಮ ಈಗ ಭಾರತ‌ದ ಪ್ರಥಮ ಹಳ್ಳಿ!

12:22 AM Apr 26, 2023 | Team Udayavani |

ಡೆಹ್ರಾಡೂನ್‌: ಚೀನ ಗಡಿಭಾಗದಲ್ಲಿ ಬರುವ ಮಾಣಾ ಹಳ್ಳಿ ಇನ್ನು ಮುಂದೆ “ಭಾರತದ ಪ್ರಥಮ ಹಳ್ಳಿ” ಎಂದೇ ಕರೆಸಿ ಕೊಳ್ಳಲಿದೆ. ಇಂತಹದ್ದೊಂದು ದೊಡ್ಡ ಫ‌ಲಕವನ್ನು ಮಾಣಾದ ಪ್ರವೇಶದ್ವಾರದಲ್ಲಿ ಬಿಆರ್‌ಎಸ್‌ (ಭಾರತ ಗಡಿರಸ್ತೆ ಸಂಸ್ಥೆ) ಹಾಕಿದೆ.

Advertisement

ಉತ್ತರಾಖಂಡದ ಚಮೋಲಿ ಜಿಲ್ಲೆಯ ಮಾಣಾ ಹಳ್ಳಿಯನ್ನು ಇದುವರೆಗೆ ಭಾರತದ ಕೊನೆಯ ಹಳ್ಳಿ ಎಂದು ಕರೆಯಲಾಗುತ್ತಿತ್ತು. ಆದರೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇಲ್ಲಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಗಡಿಭಾಗದಲ್ಲಿರುವ ಭಾರತದ ಹಳ್ಳಿಗಳನ್ನು ಇನ್ನು ಮುಂದೆ ದೇಶದ ಮೊದಲ ಹಳ್ಳಿಗಳೆಂದು ಕರೆಯಬೇಕೆಂದು ಕರೆ ನೀಡಿದ್ದರು. ಅದರ ಪರಿಣಾಮವಾಗಿ ಈ ಬದಲಾವಣೆ ಮಾಡಲಾಗಿದೆ.

ಚೀನ ಇತ್ತೀಚೆಗೆ ನೈಜ ನಿಯಂತ್ರಣ ರೇಖೆಯ ಬಳಿ ತಕರಾರು ಜಾಸ್ತಿ ಮಾಡಿದೆ. ಅರುಣಾಚಲಪ್ರದೇಶದ ಹೆಸರುಗಳನ್ನು ತಾನೇ ಬದಲಾಯಿಸಿ, ಈ ರಾಜ್ಯ ತನ್ನದು ಎಂದು ಹೇಳಿಕೊಳ್ಳುತ್ತಿದೆ. ಅದಕ್ಕೆ ಪ್ರತಿಯಾಗಿ ಮೋದಿ ಸರಕಾರ ಈ ಭಾಗದ ಜನತೆಗೆ ವಿಶ್ವಾಸ ತುಂಬುವ ಕಾರ್ಯ ಮಾಡುತ್ತಿದೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಈ ಬಗ್ಗೆ ಟ್ವೀಟ್‌ ಮಾಡಿ, ಇನ್ನು ಮುಂದೆ ಮಾಣಾ ದೇಶದ ಪ್ರಥಮ ಹಳ್ಳಿಯೆಂದು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next