Advertisement

ಮನಸೆಳೆದ ವಿಜ್ಞಾನ ಮಾದರಿ

11:38 AM Mar 05, 2017 | Team Udayavani |

ಬೆಂಗಳೂರು: ಜೆ.ಎನ್‌.ಟಾಟಾ ಅವರ ಜನ್ಮದಿನದ ಅಂಗವಾಗಿ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಶನಿವಾರ ಆಯೋಜಿಸಿದ್ದ “ಓಪನ್‌ ಡೇ’ ವಿಜ್ಞಾನ ಪ್ರದರ್ಶನಕ್ಕೆ ಮಕ್ಕಳು ಹಾಗೂ ವಿದ್ಯಾರ್ಥಿಗಳ ದಂಡೇ ಹರಿದು ಬಂದಿತ್ತು. ಪ್ರದರ್ಶನದಲ್ಲಿ ನಗರ ಎದುರಿಸುತ್ತಿರುವ ಸಮಸ್ಯೆಗಳು, ಹವಾಮಾನ ಬದಲಾವಣೆಯ ಪರಿಣಾಮಗಳ ಪ್ರಾತ್ಯಕ್ಷಿಕೆ ಹಾಗೂ ಮಾನವ ರಹಿತ ವಿಮಾನ ಮಾದರಿ ಸೇರಿದಂತೆ ಹತ್ತು ಹಲವು ಆವಿಷ್ಕಾರಗಳು ಮೇಳದಲ್ಲಿ ಗಮನ ಸೆಳೆದವು.  

Advertisement

ಮನುಷ್ಯನ ರಕ್ತದ ಪರೀಕ್ಷೆ ಮೂಲಕ ರೋಗ ಪತ್ತೆಯ ಅತಿ ಸೂಕ್ಷ್ಮ ಉಪಕರಣ (ನ್ಯಾನೋ ಯಂತ್ರ). ಗೂಢಚಾರಿಕೆ, ಕಣ್ಗಾವಲು, ಔಷಧಿ ಸರಬರಾಜು, ಛಾಯಾಗ್ರಹಣ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಬಳಸಲಾಗುತ್ತಿರುವ ಡ್ರೋಣ್‌ ಉಪಕರಣಗಳು, ಹಕ್ಕಿಗಳಂತೆ ಆಗಸದಲ್ಲಿ ಹಾರಾಡುವ ವಿವಿಧ ವಿಮಾನಗಳ ಮಾದರಿ, ಅದರಲ್ಲಿ ಬಳಸಲಾಗಿರುವ ತಂತ್ರಜ್ಞಾನ ಹೀಗೆ ವಿವಿಧ ರೀತಿಯ ತಂತ್ರಜ್ಞಾನದ ಪ್ರದರ್ಶನ ವಿದ್ಯಾರ್ಥಿಗಳಲ್ಲಿ ಕುತೂಹಲ ಮೂಡಿಸಿತ್ತು.

ಸಮುದ್ರದ ನೀರಿನಿಂದ ವಿದ್ಯುತ್‌ ಶಕ್ತಿ ತಯಾರು ಮಾಡುವ ತಂತ್ರಜ್ಞಾನ, ಪ್ಯಾರಾಚೂಟ್‌ ತಂತ್ರಜ್ಞಾನ, ಮಾನವನ ಮಿದುಳಿನ ಕಾರ್ಯಗಳ ಕುರಿತು ಪ್ರಾತ್ಯಕ್ಷಿಕೆ ಹೀಗೆ ವಿವಿಧ ಇಂಜಿನಿಯರಿಂಗ್‌ ಮತ್ತು ವೈದ್ಯಕೀಯ ವಿಜ್ಞಾನದ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ ಮತ್ತು ಉಪನ್ಯಾಸ ಕಾರ್ಯಕ್ರಮ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಮೆಚ್ಚುಗೆಗಳಿಸಿತು.

Advertisement

Udayavani is now on Telegram. Click here to join our channel and stay updated with the latest news.

Next