Advertisement

ವಿವಾಹಿತ ತರುಣನ ಜತೆ ಲವ್‌ : ವಿಷ ಸೇವಿಸಿ ಯುವ ಜೋಡಿ ಆತ್ಮಹತ್ಯೆ

03:36 PM Jun 27, 2018 | udayavani editorial |

ಬಂಡಾ, ಉತ್ತರ ಪ್ರದೇಶ : 23ರ ಹರೆಯದ ವಿವಾಹಿತ ತರುಣನೋರ್ವ 19ರ ಹರೆಯದ ತರುಣಿಯೊಂದಿಗೆ ಹೊಂದಿದ್ದ ಪ್ರೇಮ ಸಂಬಂಧಕ್ಕೆ ಎರಡೂ ಕಡೆಯವರ ವಿರೋಧ, ಆಕ್ಷೇಪ ಇದ್ದುದನ್ನು ಅನುಸರಿಸಿ ಈ ಯುವ ಪ್ರಣಯಿಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆರೆಯ ಮಹೋಬ ಜಿಲ್ಲೆಯ ಶುರಾರಿ ಗ್ರಾಮದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ವಿವಾಹಿತನಾಗಿರುವ ಯುವಕ ಮತ್ತು ಆತನನ್ನು ಪ್ರೀತಿಸಿರುವ  ಯುವತಿಯ ನಡುವೆ ಕಳೆದ ಮೂರು ವರ್ಷಗಳಿಂದ ದೈಹಿಕ ಸಂಪರ್ಕವಿತ್ತು ಎನ್ನಲಾಗಿದೆ. ಇವರ ಪ್ರಣಯ ಪ್ರಸಂಗಕ್ಕೆ  ಎರಡೂ ಕಡೆಯ ಮನೆಯವರ ವಿರೋಧವಿತ್ತು. ಆದಾಗ್ಯೂ ಯುವಕನನ್ನು ಭೇಟಿಯಾಗಲು ನಿನ್ನೆ ಯುವತಿಯು ಬಂದಿದ್ದು ಅವರಿಬ್ಬರೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರು ಎಂದು ಎಸ್‌ ಪಿ ಎನ್‌ ಕೋಳಂಚಿ ತಿಳಿಸಿದ್ದಾರೆ. 

ಯುವತಿಯ ಮನೆಯವರು ಈಚೆಗಷ್ಟೇ ಆಕೆಗೆ ಗಂಡು ಗೊತ್ತುಪಡಿಸಿಕೊಂಡು  ಮದುವೆಗೆ ವ್ಯವಸ್ಥೆ ಮಾಡಿದ್ದರು ಎಂದು ಪೊಲೀಸ್‌ ಠಾಣೆಯ ಪ್ರಭಾರಾಧಿಕಾರಿ ಶಂಕರ್‌ ಲಾಲ್‌ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next