Advertisement

ದೆಹಲಿ ಹಿಂಸಾಚಾರದಲ್ಲಿ ಪೊಲೀಸರತ್ತ ಬಂದೂಕು ಗುರಿಯಿಟ್ಟಿದ್ದ ಯುವಕನ ಬಂಧನ

10:01 AM Mar 04, 2020 | Hari Prasad |

ನವದೆಹಲಿ: ಕಳೆದ ವಾರ ರಾಷ್ಟ್ರ ರಾಜಧಾನಿಯ ಈಶಾನ್ಯ ಭಾಗಗಳಲ್ಲಿ ಸಂಭವಿಸಿದ್ದ ಹಿಂಸಾಚಾರ ಸಂದರ್ಭದಲ್ಲಿ ಪೊಲೀಸರತ್ತ ಬಂದೂಕು ಗುರಿಯಿಟ್ಟಿದ್ದ ಯುವಕನ ಫೊಟೋ ಒಂದು ಎಲ್ಲೆಡೆ ವೈರಲ್ ಆಗಿತ್ತು ಮತ್ತು ಆತನ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿತ್ತು.

Advertisement

ಇದೀಗ ಈ ದುಷ್ಕರ್ಮಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈತನನ್ನು ಶಾರುಖ್ ಎಂದು ಗುರುತಿಸಲಾಗಿದ್ದು ಈತ ಈಶಾನ್ಯ ದೆಹಲಿಯ ಕರಾವಲ್ ನಗರದ ನಿವಾಸಿಯಾಗಿದ್ದಾನೆ. ಶಾರುಖ್ ನನ್ನು ಇಂದು ಕ್ರೈ ಬ್ರ್ಯಾಂಚ್ ಪೊಲೀಸರು ಉತ್ತರ ಪ್ರದೇಶದಲ್ಲಿ ಬಂಧಿಸಿದ್ದಾರೆ ಎಂದು ದೆಹಲಿ ಪೊಲೀಸ್ ವಕ್ತಾರರು ಮಾಹಿತಿ ನೀಡಿದ್ದಾರೆ.

ಫೆಬ್ರವರಿ 24ರ ಹಿಂಸಾಚಾರದ ಸಂದರ್ಭದಲ್ಲಿ ಕೆಂಪು ಟೀ ಶರ್ಟ್ ತೊಟ್ಟಿದ್ದ ಶಾರುಖ್ ಜಾಫ್ರಬಾದ್ ಪ್ರದೇಶದಲ್ಲಿ ಪೊಲೀಸರತ್ತ ಬಂದೂಕು ಗುರಿಯಿಟ್ಟಿದ್ದ. ಈ ಫೊಟೋ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಈತ ಸುದ್ದಿಯ ಕೇಂದ್ರವಾಗಿದ್ದ. ಮತ್ತು ಪ್ರತಿಭಟನಾ ಸ್ಥಳದಿಂದ ತಪ್ಪಿಸಿಕೊಳ್ಳುವ ಮುನ್ನ ಶಾರುಖ್ ಪೊಲೀಸ್ ಅಧಿಕಾರಿಗಳ ಮುಂದೆಯೇ ಹಲವು ಬಾರಿ ಗುಂಡು ಹಾರಿಸಿ ಬಳಿಕ ಪರಾರಿಯಾಗಿದ್ದ.

Advertisement

Udayavani is now on Telegram. Click here to join our channel and stay updated with the latest news.

Next