Advertisement

ಪ್ರೇಮಿಗಳ ದಿನದಂದೇ ಏಳು ರಾಜ್ಯಗಳಲ್ಲಿ 14 ವಿವಾಹವಾಗಿದ್ದ ಬಹುಪತ್ನಿ ಪ್ರೇಮಿಯ ಬಂಧನ

10:32 AM Feb 15, 2022 | Team Udayavani |

ಭುವನೇಶ್ವರ: ಏಳು ರಾಜ್ಯಗಳಲ್ಲಿ 14 ವಿವಾಹವಾಗಿದ್ದ 48 ವರ್ಷದ ಬಹುಪತ್ನಿ ಪ್ರೇಮಿಯನ್ನು ಸೋಮವಾರ ಒಡಿಶಾದ ಭುವನೇಶ್ವರದಲ್ಲಿ ಬಂಧಿಸಲಾಗಿದೆ.

Advertisement

ಒಡಿಶಾದ ಕೇಂದ್ರಪಾರ ಜಿಲ್ಲೆಯ ಪಟ್ಕುರಾ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರ ಈ ವ್ಯಕ್ತಿ ಮಹಿಳೆಯರಿಂದ ಹಣ ದೋಚಿ ಓಡಿಹೋಗುತ್ತಿದ್ದ ಎಂದು ಆರೋಪಿಸಲಾಗಿದೆ. ಆದರೆ ಬಂಧಿತ ವ್ಯಕ್ತಿ ಆರೋಪವನ್ನು ನಿರಾಕರಿಸಿದ್ದಾನೆ.

ಆರೋಪಿಯು 1982 ರಲ್ಲಿ ಮೊದಲ ಬಾರಿಗೆ ಮದುವೆಯಾಗಿದ್ದು, 2002 ರಲ್ಲಿ ಎರಡನೇ ವಿವಾಹವಾಗಿದ್ದ. ಈ ಎರಡು ಮದುವೆಗಳಿಂದ ಐದು ಮಕ್ಕಳನ್ನೂ ಪಡೆದಿದ್ದಾನೆ ಎಂದು ಭುವನೇಶ್ವರ ಪೊಲೀಸ್ ಉಪ ಆಯುಕ್ತ ಉಮಾಶಂಕರ್ ದಾಸ್ ಹೇಳಿದ್ದಾರೆ. 2002 ಮತ್ತು 2020 ರ ನಡುವೆ, ಅವರು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳ ಮೂಲಕ ಇತರ ಮಹಿಳೆಯರೊಂದಿಗೆ ಸ್ನೇಹ ಬೆಳೆಸಿ ವಿವಾಹವಾಗಿದ್ದಾನೆ ಎಂದು ದಾಸ್ ಹೇಳಿದ್ದಾರೆ.

ಸದ್ಯ ಈ ಬಹುಪತ್ನಿ ವಲ್ಲಭ ದೆಹಲಿಯಲ್ಲಿ ಶಾಲಾ ಶಿಕ್ಷಕಿಯಾಗಿರುವ ತನ್ನ ಕೊನೆಯ ಪತ್ನಿಯೊಂದಿಗೆ ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ನೆಲೆಸಿದ್ದಾನೆ. ಆಕೆಗೆ ಹೇಗೋ ಆತನ ಹಿಂದಿನ ಮದುವೆಗಳ ಬಗ್ಗೆ ತಿಳಿದು ಪೊಲೀಸರಿಗೆ ದೂರು ನೀಡಿದ್ದಾಳೆ.

ಇದನ್ನೂ ಓದಿ:ಸಿನಿಮೀಯ ರೀತಿ ಕಳ್ಳತನ: ಮನೆಯವರನ್ನು ಕಟ್ಟಿಹಾಕಿ ಚಿನ್ನಾಭರಣ ಕಳವು

Advertisement

ಅವನು ಮಧ್ಯವಯಸ್ಕ ಒಂಟಿ ಮಹಿಳೆಯರನ್ನು ಗುರಿಯಾಗಿಸುತ್ತಿದ್ದ, ಹೆಚ್ಚಾಗಿ ಮ್ಯಾಟ್ರಿಮೋನಲ್ ವೆಬ್‌ಸೈಟ್‌ಗಳಲ್ಲಿ ವಿಚ್ಛೇದಿತರಿಗೆ ಗಾಳ ಹಾಕಿ, ನಂತರ ಅವರನ್ನು ವಿವಾಹವಾಗಿ ಹಣ ಪಡೆದು ವಂಚಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next