Advertisement

ವೈರಲ್‌ ವಿಡಿಯೋ: ಮೊಸಳೆಯ ವೇಷಭೂಷಣ ತೊಟ್ಟು ಮೊಸಳೆಯನ್ನೇ ಮಂಗ ಮಾಡಲು ಹೋಗಿ…

11:48 AM Dec 11, 2022 | Team Udayavani |

ನವದೆಹಲಿ: ಇಂಟರ್‌ ನೆಟ್‌ ನಲ್ಲಿ ದಿನಕ್ಕೆ ಹತ್ತಾರು ವಿಡಿಯೋಗಳು ವೈರಲ್‌ ಆಗುತ್ತವೆ. ಮೊಸಳೆಯನ್ನು ಕೆಣಕಲು ಹೋದ ಯುವಕನೊಬ್ಬನ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Advertisement

ಇತ್ತೀಚೆಗೆ ಆನೆಯನು ಕೋಲಿನಿಂದ ಹೊಡೆದು, ಆನೆ ಅಟ್ಟಾಡಿಸಿಕೊಂಡು ಬಂದಾಗ ಬಾಲಕರೊಬ್ಬರು ಹೆದರಿಕೊಂಡು ಓಡಿ ಹೋಗಿರುವ ವಿಡಿಯೋ ತುಣುಕೊಂದು ಟ್ವಟರ್‌ ನಲ್ಲಿ ಸಿಕ್ಕಾಪಟ್ಟೆ ವೀಕ್ಷಣೆಯಾಗಿತ್ತು. ಮತ್ತೊಂದು ಅಂಥದ್ದೇ ವಿಡಿಯೋ ಸದ್ದು ಮಾಡುತ್ತಿದೆ.

ನರೇಂದ್ರ ಸಿಂಗ್‌ ಎನ್ನುವ ಟ್ವಿಟರ್‌ ಬಳಕೆದಾರರೊಬ್ಬರು ನದಿಯ ದಂಡೆಯ ಬದಿಯಲ್ಲಿದ್ದ ಮೊಸಳೆಯೊಂದನ್ನು ಯುವಕ ಕೆಣಕಲು ಹೋಗಿರುವ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮೊಸಳೆಯೊಂದು ನದಿಯ ದಂಡೆಯಲ್ಲಿ ಕೂತಿದೆ. ಯುವಕನೊಬ್ಬನ ಮೊಸಳೆಯ ವೇಷಭೂಷಣವನ್ನು ತೊಟ್ಟು ಮೊಸಳೆಯ ಕಾಲನ್ನು ಎಳೆದು ಕೆಣಕುವಂತೆ ಮಾಡಿದ್ದಾನೆ.

10 ಸೆಕೆಂಡ್‌ ಗಳ ಈ ವಿಡಿಯೋ ಕ್ಲಿಪ್‌ ವೈರಲ್‌ ಆಗಿದೆ. ಮೊಸಳೆಯ ವೇಷಭೂಷಣ ತೊಟ್ಟು ಹುಚ್ಚಾಟ ಮರೆದ ಯುವಕನಿಗೆ, ಒಂದು ವೇಳೆ ನಿಜವಾದ ಮೊಸಳೆ ನಿನ್ನ ಕಡೆ ತಿರುಗಿದರೆ ಯಾರೂ ಕೂಡ ನಿನ್ನನು ಉಳಿಸಲು ಆಗಲ್ಲ ಎಂದು ಬಳಕೆದಾರರೊಬ್ಬರು ಟ್ವೀಟ್‌ ಮಾಡಿದ್ದಾರೆ. ಮತ್ತೊಬ್ಬರು ತನ್ನಷ್ಟಕ್ಕೇ ಇರುವ ಮೊಸಳೆಯನ್ನು ಯಾಕೆ ತೊಂದರೆ ಕೊಡುತ್ತಿದ್ದೀಯಾ ಎಂದು ಬರೆದುಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next