Advertisement

ಮಾಂಸ ವ್ಯಾಪಾರಿಯನ್ನು ಕೊಂದ ಅಪ್ಪ, ಮಗನಿಗೆ ಜೀವಾವಧಿ ಶಿಕ್ಷೆ

04:06 PM Sep 16, 2017 | Team Udayavani |

ಥಾಣೆ : 2010ರಲ್ಲಿ ಮುಂಬಯಿಯಲ್ಲಿ ಮಾಂಸದಂಗಡಿಯ ಮಾಲಕನೋರ್ವನನ್ನು ಕೊಂದು ಆತನ ಸಹೋದರನ ಕೊಲೆಗೆ ಯತ್ನಿಸಿದ ಅಪರಾಧಕ್ಕಾಗಿ ಥಾಣೆ ನ್ಯಾಯಾಲಯ ಓರ್ವ ವ್ಯಕ್ತಿ ಹಾಗೂ ಆತನ ಮಗನಿಗೆ ಜೀವಾವಧಿ ವಿಕ್ಷೆ ವಿಧಿಸಿದೆ.

Advertisement

ಮಾಂಸದಗಡಿಯ ಮಾಲಕ ಮೊಹಮ್ಮದ್‌ ಅಬ್ದುಲ್‌ನನ್ನು ಕೊಂದ ಅಪರಾಧಕ್ಕಾಗಿ ಮೊಹಮ್ಮದ್‌ ಹನೀಫ್ ಕುರೇಶಿ ಅಲಿಯಾಸ್‌ ಬಾಬಾ (50) ಮತ್ತು ಆತನ ಪುತ್ರ ನದೀಮ್‌ (24) ಗೆ ಇಲ್ಲಿನ ಹೆಚ್ಚುವರಿ ಸೆಶನ್ಸ್‌ ನ್ಯಾಯಾಧೀಶರಾದ ಹೇಮಂತ್‌ ಎಂ ಪಟವರ್ಧನ್‌ ಅವರು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದರು. 

ಅಪರಾಧಿಗಳಿಗೆ ನ್ಯಾಯಾಲಯ ತಲಾ 15,00 ರೂ. ದಂಡವನ್ನೂ ಹೇರಿದೆ. 

Advertisement

Udayavani is now on Telegram. Click here to join our channel and stay updated with the latest news.

Next