Advertisement

ಮೊಬೈಲ್‌, ನಗದು ಕದ್ದ ಶಂಕೆ: ರೈಲಿನಲ್ಲಿ ಅಪ್ಪ-ಮಗನ ಮೇಲೆ ಹಲ್ಲೆ

04:02 PM Oct 04, 2018 | Team Udayavani |

ಮಾಲ್ಡಾ, ಪಶ್ಚಿಮ ಬಂಗಾಲ : ಮೊಬೈಲ್‌ ಪೋನ್‌ಗಳು ಮತ್ತು ನಗದನ್ನು ಕದ್ದರೆಂಬ ಶಂಕೆಯಲ್ಲಿ ಮಾಲ್ಡಾಕ್ಕೆ ಹೋಗುತ್ತಿದ್ದ ರೈಲಿನಲ್ಲಿ ಸಹ ಪ್ರಯಾಣಿಕರು ಅಪ್ಪ ಮತ್ತು ಮಗನನ್ನು  ಗಂಭೀರವಾಗಿ ಥಳಿಸಿದರೆಂದು ಸರಕಾರಿ ರೈಲ್ವೆ ಪೊಲೀಸರು ಇಂದು ಗುರುವಾರ ಹೇಳಿದ್ದಾರೆ. 

Advertisement

ಥಳಿತಕ್ಕೆ ಗುರಿಯಾದ ಅಪ್ಪ ಮತ್ತು ಮಗ ಕೊಟ್ಟ ದೂರಿನ ಪ್ರಕಾರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ ಎಂದು ಜಿಆರ್‌ಪಿ ಇನ್ಸ್‌ಪೆಕ್ಟರ್‌ ಭಾಸ್ಕರ್‌ ಪ್ರಧಾನ್‌ ತಿಳಿಸಿದ್ದಾರೆ. 

ಮೊಬೈಲ್‌ ಫೋನುಗಳು ಮತ್ತು ನಗದನ್ನು ಕದ್ದೆವೆಂಬ ಶಂಕೆಯಲ್ಲಿ ಬೆಂಗಳೂರು – ತೀನ್‌ಸುಖೀಯಾ ಎಕ್ಸ್‌ಪ್ರೆಸ್‌ನಲ್ಲಿ ನಿನ್ನೆ ಬುಧವಾರ ಸಹ ಪ್ರಯಾಣಿಕರು ತಮ್ಮ ಮೇಲೆ ಹಲ್ಲೆ ನಡೆಸಿದರೆಂದು ಅಪ್ಪ ನೇಪಾಲ್‌ ಲೋಹಾರ್‌ಮತ್ತು ಆತನ ಮಗ ನೀಡಿರುವ ಜಂಟಿ ದೂರಿನಲ್ಲಿ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next