ಮುಂಬೈ ; ಲಂಡನ್ ನಿಂದ ಮುಂಬೈಗೆ ಹಾರಾಟ ಮಾಡುತ್ತಿದ್ದ ಏರ್ ಇಂಡಿಯಾ ವಿಮಾನದ ಶೌಚಾಲಯದಲ್ಲಿ ಅಮೆರಿಕದ ಪ್ರಜೆಯೋರ್ವ ಧೂಮಪಾನ ಮಾಡಿ, ಇತರ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ ಘಟನೆ ನಡೆದಿದೆ.
ಇತ್ತೀಚಿನ ದಿನಗಳಲ್ಲಿ ವಿಮಾನಗಳ ಸುದ್ದಿಗಳೇ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು ಅದಕ್ಕೆ ಹೊಸತೆಂಬಂತೆ ಅಮೆರಿಕದ ಪ್ರಜೆ ವಿಮಾನದಲ್ಲಿ ಧೂಮಪಾನ ಮಾಡಿದ್ದು ಪ್ರಯಾಣಿಕರಿಗೆ ತೊಂದರೆಯುಂಟಾಗಿದೆ.
ಅಮೆರಿಕದ ಪ್ರಜೆಯ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆದಿದ್ದಾರೆ.
ಬಂಧಿತನನ್ನು ರಮಾಕಾಂತ್ (37ವರ್ಷ) ಎನ್ನಲಾಗಿದ್ದು ಆತನ ವಿರುದ್ಧ ಐಪಿಸಿ ಸೆಕ್ಷನ್ 336 ಮತ್ತು ಏರ್‌ಕ್ರಾಫ್ಟ್ ಆಕ್ಟ್ 1937, 22 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಮಾನದಲ್ಲಿ ಧೂಮಪಾನ ನಿಷೇಧವಿದೆ ಆದರೆ ಲಂಡನ್ ನಿಂದ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಅಮೆರಿಕದ ಪ್ರಜೆ ಪ್ರಯಾಣದ ವೇಳೆ ಶೌಚಾಲಯಕ್ಕೆ ತೆರಳಿದ್ದಾನೆ ಅದಾದ ಕೆಲವೇ ಹೊತ್ತಿನಲ್ಲಿ ವಿಮಾನದ ಅಲಾರಾಂ ಸದ್ದು ಮಾಡಲು ಆರಂಭಿಸಿದೆ ಇದನ್ನು ಗಮನಿಸಿದ ಸಿಬ್ಬಂಧಿ ಹಾಗೂ ಪ್ರಯಾಣಿಕರು ಶೌಚಾಲಯ ಬಳಿ ಹೋಗಿ ನೋಡಿದಾಗ ಪ್ರಯಾಣಿಕನ ಕೈಯಲ್ಲಿ ಸಿಗರೇಟು ಇರುವುದು ಕಂಡಿದ್ದಾರೆ ಕೂಡಲೇ ಸಿಬಂದಿ ಪ್ರಯಾಣಿಕನ ಕೈಯಿಂದ ಸಿಗರೇಟ್ ಕಿತ್ತುಕೊಂಡಿದ್ದಾರೆ ಇದರಿಂದ ಕೋಪಗೊಂಡ ವ್ಯಕ್ತಿ ಕಿರುಚಾಡಿದ್ದಾನೆ ಬಳಿಕ ಆತನನ್ನು ಸಮಾಧಾನ ಪಡಿಸಿ ಸೀಟ್ ನಲ್ಲಿ ಕುಳ್ಳಿಸಿದ್ದಾರೆ ಕೆಲ ಹೊತ್ತಿನ ಬಳಿಕ ಅದೇ ವ್ಯಕ್ತಿ ಮತ್ತೆ ಎದ್ದು ವಿಮಾನದ ಬಾಗಿಲು ತೆರೆಯಲು ಹೋಗಿದ್ದಾನೆ ಕೂಡಲೇ ಇದನ್ನು ಗಮನಿಸಿದ ಸಿಬ್ಬಂದಿ ಆ ವ್ಯಕ್ತಿಯನ್ನು ಮತ್ತೆ ಕರೆತಂದು ಸೀಟ್ ನಲ್ಲಿ ಕುಳ್ಳಿಸಿದ್ದಾರೆ. ಬಳಿಕ ವಿಮಾನ ಮುಂಬೈ ತಲುಪುತಿದ್ದಂತೆ ಮುಂಬೈ ಪೋಲಿಸಲು ವಶಕ್ಕೆ ಪಡೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಕಿಡ್ನಿ, ಲಿವರ್ ಮಾರಾಟಕ್ಕಿದೆ : ಮನೆಯ ಮುಂದೆ ಕಾಣಿಸಿಕೊಂಡ ಪೋಸ್ಟರ್