ಶಿವಮೊಗ್ಗ: ವೀಕೆಂಡ್ ಕರ್ಫ್ಯೂ ಸಂದರ್ಭ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರ ಮುಂದೆ ಕೋವಿಡ್ ಸೋಂಕಿತನೊಬ್ಬ ಪ್ರತ್ಯಕ್ಷನಾಗಿ ಬೆಚ್ಚಿ ಬೀಳಿಸಿದ್ದಾನೆ. ಶಿವಮೊಗ್ಗದ ಅಮೀರ್ ಅಹಮದ್ ಸರ್ಕಲ್ ನಲ್ಲಿ ಈ ಘಟನೆ ಸಂಭವಿಸಿದೆ.
ಹೇಗಾಯ್ತು ಘಟನೆ?
ಅಮೀರ್ ಅಹಮದ್ ಸರ್ಕಲ್ ನಲ್ಲಿ ಬೆಳಗ್ಗೆಯಿಂದಲೂ ಟ್ರಾಫಿಕ್ ಪೊಲೀಸರು ವಾಹನಗಳನ್ನು ತಡೆದು ತಪಾಸಣೆ ನಡೆಸುತ್ತಿದ್ದರು. ಮಧ್ಯಾಹ್ನದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬನನ್ನು ಅಡ್ಡಗಟ್ಟಿ ಪ್ರಶ್ನಿಸಿದಾಗ, ನಾನು ಕೋವಿಡ್ ಪೇಷೆಂಟ್ ಅಂತಾ ಹೇಳಿ, ಸುತ್ತಲೂ ಇದ್ದವರನ್ನು ಬೆಚ್ಚಿ ಬೀಳಿಸಿದ.
ಇದನ್ನೂ ಓದಿ:ಮಹಿಳೆಯರು ಋತುಚಕ್ರದ ಐದು ದಿನಗಳ ಮೊದಲು ಮತ್ತು ನಂತರ ಕೋವಿಡ್ ಲಸಿಕೆ ಪಡೆಯಬಹುದೆ?
ದಾಖಲೆಗಳ ಪರಿಶೀಲನೆ ವೇಳೆ ಕೋವಿಡ್ ಪಾಸಿಟಿವ್ ದಾಖಲೆ ಪ್ರದರ್ಶಿಸಿದ. ಇದನ್ನು ಕಂಡು ದಂಗಾದ ಪೊಲೀಸರು, ಪಾಸಿಟಿವ್ ಇದ್ದವರು ರಸ್ತೆಯಲ್ಲೇಕೆ ಓಡಾಡ್ತಿದ್ದೀರ ಎಂದು ಪ್ರಶ್ನಿಸಿದರು. ಈಗ ಆಸ್ಪತ್ರೆಯಿಂದ ಬರುತ್ತಿದ್ದೇನೆ ಎಂದು ಸೋಂಕಿತ ಉತ್ತರಿಸಿದ. ಸುತ್ತಲೂ ಇದ್ದ ಪೊಲೀಸರು, ವಾಹನಗಳ ದಾಖಲೆ ತೋರಿಸಲು ನಿಂತಿದ್ದವರು, ಮಾಧ್ಯಮದವರದ್ದು ದಂಗಾಗುವ ಪರಿಸ್ಥಿತಿ.
ಕೂಡಲೇ ಆ ಸೋಂಕಿತನನ್ನು ಮನೆಗೆ ತೆರಳುವಂತೆ ಸೂಚಿಸಿದ ಪೊಲೀಸರು, ಕಂಟ್ರೋಲ್ ರೂಂಗೆ ಮಾಹಿತಿ ನೀಡಿದರು. ಉಳಿದ ಪೊಲೀಸರನ್ನು ಅಲರ್ಟ್ ಮಾಡಿದರು.
ಇದನ್ನೂ ಓದಿ: ಪಿಎಂ ಕೇರ್ ಫಂಡ್ ನಿಂದ ದೇಶದಲ್ಲಿ 551 ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪನೆ : ಮೋದಿ