ಮುಂಬಯಿ, ಆ. 13: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಭಾಯಂದರ್ ಸ್ಥಳೀಯ ಸಮಿತಿಯ ವತಿಯಿಂದ ಸಮಾಜದ ಆರ್ಥಿಕವಾಗಿ ಹಿಂದುಳಿದವರಿಗೆ ಶೈಕ್ಷಣಿಕವಾಗಿ ನೆರವು ವಿತರಣೆ, ಆಟಿಡೊಂಜಿ ಆಟಿಲ್, ಸಾಂಸ್ಕೃತಿ ಕಾರ್ಯಕ್ರಮವು ಆ. 10 ರಂದು ಭಾಯಂದರ್ ಪೂರ್ವದ ಗೊಡ್ಡೇವ್‌ನಾಕಾದಲ್ಲಿರುವ ತೇಜ್ ಭವನ್ ಸಭಾಗೃಹದಲ್ಲಿ ನೇರವೇರಿತು.
ಭಾಯಂದರ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ನರೇಶ್ ಕೆ. ಪೂಜಾರಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ನಾಲ್ಕು ಗೋಡೆಗಳ ಮಧ್ಯೆ ಸಿಗುವ ಶಿಕ್ಷಣ ಪದವಿಗೆ ಮಾತ್ರ ಸೀಮಿತವಾಗುರುತ್ತದೆ. ಪರಿಪೂರ್ಣ ಬದುಕಿನಲ್ಲಿ ಆಳವಾದ ಅಧ್ಯಾಯನ, ಹೊಂದಾಣಿಕೆ, ಜನರ ಮಧ್ಯೆ ಜೀವಿಸುವ ಕಲೆ ಗೊತ್ತಿರಬೇಕು. ನೈತಿಕ ಸಿದ್ದಾಂತದೊಂದಿಗೆ ಆಚರಿಸುವ ಆಚರಣೆಗಳಿಂದ ತುಳುನಾಡಿನ ಸಂಸ್ಕೃತಿ-ಸಂಸ್ಕಾರ, ಆಚಾರ-ವಿಚಾರಗಳು ಶಾಶ್ವತವಾಗಿ ನೆಲೆಗೊಳ್ಳುಲು ಸಾಧ್ಯವಿದೆ ಎಂದರು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ವಿದ್ಯಾ ಉಪಸಮಿತಿಯ ಸದಸ್ಯ ಧರ್ಮಪಾಲ ಅಂಚನ್ ಅವರು ಮಾತನಾಡಿ, 15 ಎಕರೆಯಲ್ಲಿರುವ ಉಡುಪಿ ಪಡುಬೆಳ್ಳೆಯ ಶ್ರೀ ನಾರಾಯಣ ಗುರು ಪ್ರೌಢ ಶಾಲೆ, ಮುಂಬಯಿಯ ಗುರುನಾರಾಯಾಣ ರಾತ್ರಿ ಪ್ರೌಢ ಶಾಲೆ, ನಗರ ಹಾಗೂ ಉಪನಗರದಲ್ಲಿ ಸ್ವಜಾತಿ ಸಮಾಜದ ಆರ್ಥಿಕವಾಗಿ ಹಿಂದುಳಿದವರ ದತ್ತು ಸ್ವೀಕಾರ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ಮುಂತಾದ ಜನಪರ ಯೋಜನೆಗಳನ್ನು ಅಸೋಸಿಯೇಶನ್ ಅನುಷ್ಠಾನಗೊಳಿಸಿದೆ. ಇಂತಹ ಸಮಾಜ ಮುಖೀ ಚಿಂತನೆಗೆ ಎಲ್ಲರು ಕೈಜೋಡಿಸಿ ಸಹಕರಿಸಬೇಕು ಎಂದು ನುಡಿದು ವಿಧ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಲೇಖಕಿ ಲತಾ ಸಂತೋಷ್ ಶೆಟ್ಟಿ, ಸಂಘಟಕ ಚೇತನ್ ಶೆಟ್ಟಿ ಆಟಿ ತಿಂಗಳ ಮಹತ್ವದ ಬಗ್ಗೆ ಮಾತನಾಡಿದರು. ಗೌರವ ಕಾರ್ಯದರ್ಶಿ ರಘುನಾಥ್ ಜಿ. ಹಳೆಯಂಗಡಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಸಮಾಜ ಸೇವಕರಾದ ಸುಮಿತ್ರಾ ಕರ್ಕೇರ, ರಮೇಶ್ ಶೆಟ್ಟಿ ಸಿದ್ದಕಟ್ಟೆ, ಶಿವಾನಂದ ಬಂಗೇರ, ಆರ್. ಕೆ. ಮೂಲ್ಕಿ, ಸೇವಾದಲದ ದಳಪತಿ ಗಣೇಶ್ ಕೆ. ಪೂಜಾರಿ, ವಿದ್ಯಾ ಉಪಸಮಿತಿಯ ಸದಸ್ಯ ಗಣೇಶ್ ಎಚ್. ಬಂಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಮಹಿಳಾ ಸದಸ್ಯೆಯರು ಆಟಿ ತಿಂಗಳಿನಲ್ಲಿ ಸೇವಿಸುವ ಆಹಾರ ಪದಾರ್ಥಗಳನ್ನು ಉಣಬಡಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ ದ ಅಂಗವಾಗಿ ಜನಪದ ಗೀತೆ, ಆಟಿ ಕಳಂಜೆ, ವೈವಿಧ್ಯಮಯ ನೃತ್ಯ ಪ್ರದರ್ಶನ ಗೊಂಡಿತು. ಸ್ಥಳೀಯ ಸಮಿತಿಯ ಗೌರವ ಕಾರ್ಯಾಧ್ಯಕ್ಷ ಪ್ರಮೋದ್ ಕೆ. ಕೋಟ್ಯಾನ್, ಉಪ ಕಾರ್ಯಾಧ್ಯಕ್ಷರಾದ ಉದಯ ಡಿ. ಪೂಜಾರಿ ಮತ್ತು ವಾಸುದೇವ ಪೂಜಾರಿ, ಜತೆ ಕಾರ್ಯದರ್ಶಿ ಮಾಲತಿ ಆರ್. ಬಂಗೇರ, ಕೋಶಾಧಿಕಾರಿ ಆಶೋಕ್ ಎಸ್. ಪೂಜಾರಿ, ಜತೆ ಕೋಶಾಧಿಕಾರಿ ಕೃಷ್ಣ ಬಂಗೇರ, ಸ್ಥಳೀಯ ನಗರ ಸೇವಕ ಗಣೇಶ್ ಶೆಟ್ಟಿ, ರಾಜಕೀಯ ನೇತಾರ ಶೇಖರ ಪೂಜಾರಿ, ಉದ್ಯಮಿ ಸುರೇಶ್ ಪೂಜಾರಿ, ಟಿ. ಎಂ. ಪೂಜಾರಿ ಮೊದಲಾದವರು ಸಹಕರಿಸಿದರು. ಪರಿಸರದ ಸಮೂದಯ ಸಂಘಟನೆಗಳ ಪ್ರತಿನಿಗಳು, ತುಳು ಕನ್ನಡಿಗರು ಪಾಲ್ಗೊಂಡರು.