Advertisement

ಲವ್‌ ಅಫೇರ್‌ : ದಿಲ್ಲಿಯ ಜಹಾಂಗೀರ್‌ಪುರಿಯಲ್ಲಿ ವ್ಯಕ್ತಿಯ ಕೊಲೆ

04:15 PM Oct 01, 2018 | Team Udayavani |

ಹೊಸದಿಲ್ಲಿ : ಇಲ್ಲಿನ ಜಹಾಂಗೀರಪುರಿ ಪ್ರದೇಶದಲ್ಲಿ ಅಪರಿಚಿತ ದುಷ್ಕರ್ಮಿಗಳು ಲವ್‌ ಅಫೇರ್‌ ಪ್ರಕರಣವೊಂದರಲ್ಲಿ  31ರ ಹರೆಯದ ಅಂಕಿತ್‌ ಎಂಬ ವ್ಯಕ್ತಿಯನ್ನು ಗುಂಡೆಸೆದು ಕೊಂದಿರುವ ಘಟನೆ ಇಂದು ಸೋಮವಾರ ನಡೆದಿದೆ. 

Advertisement

ಜಹಾಂಗೀರ್‌ಪುರಿಯಲ್ಲಿ ಅಂಕಿತ್‌ ತನ್ನ ಕೋಚಿಂಗ್‌ ಸೆಂಟರ್‌ ನಡೆಸುತ್ತಿದ್ದರು. ಇಂದು ಸೋಮವಾರ ಅವರು ಕ್ಲಾಸ್‌ ತೆಗೆದುಕೊಳ್ಳಲು ಬಂದಾಗ ಅಪರಿಚಿತ ದುಷ್ಕರ್ಮಿಗಳು ತರಗತಿ ಕೋಣೆಗೆ ನುಗ್ಗಿ ಅಂಕಿತ್‌ ಮೇಲೆ ಗುಂಡೆಸೆದು ಅವರನ್ನು ಕೊಂದರು.

ಅಂಕಿತ್‌ ಗೆ ಓರ್ವ ಮಹಿಳೆಯೊಂದಿಗೆ ಪ್ರೇಮ ಸಂಬಂಧವಿದ್ದು ಆಕೆಯ ಸಹೋದರನೇ ಈ ಕೃತ್ಯ ನಡೆಸಿರಬಹುದೆಂದು ಅಂಕಿತ್‌ ಸಹೋದರಿ ಪೊಲೀಸರಲ್ಲಿ ಹೇಳಿದ್ದಾಳೆ. 

ಪೊಲೀಸರು ಸಿಸಿಟಿವಿ ಚಿತ್ರಿಕೆಗಳನ್ನು ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next