ಮುಂಬಯಿ: ವ್ಯಕ್ತಿಯೊಬ್ಬ ಪೊಲೀಸ್ ಠಾಣೆಯ ಚೇರ್ ನಲ್ಲಿ ಕೂತು ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಹಾರಾಷ್ಟ್ರದ ಮಾನ್ಪಡ ಪೊಲೀಸ್ ಠಾಣೆಯ ಪೊಲೀಸ್ ಚೇರ್ ನಲ್ಲಿ ಕೂತು, ಸುರೇಶ್ ಪಾಟೀಲ್ ಎನ್ನುವರು ಪೋಸ್ ಕೊಟ್ಟಿದ್ದಾರೆ. ವಿಡಿಯೋದ ಹಿನ್ನೆಲೆಯಲ್ಲಿ ಒಂದು ಹಿಂದಿ ಡೈಲಾಗ್ ಕೂಡ ಪ್ರಸಾರವಾಗಿದೆ. ರಾಣಿ ನಹೀಂ ಹೈ ತೊ ಕ್ಯಾ ಹುವಾ, ಯೇ ಬಾದಶಾ ಆಜ್ ಭಿ ಲಖೋ ದಿಲೋ ಪೇ ರಾಜ್ ಕರ್ತಾ ಹೈ (“Rani nahin hai to kya hua, ye Badshah aaj bhi lakhon dilon pe raaj karta hai”) ಮತ್ತೊಂದು ವಿಡಿಯೋದಲ್ಲಿ ಗನ್ ಹಿಡಿದು ಕೈ ಬೀಸಿದ್ದಾರೆ. ಈ ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಸಾರ್ವಜನಿಕ ಸೇವಕನಂತೆ ನಟಿಸುವುದು, ಮಾನನಷ್ಟ, ಜೀವಕ್ಕೆ ಅಪಾಯ ತಂದೊಡ್ಡುವುದು ಮತ್ತು ಶಸ್ತ್ರಾಸ್ತ್ರ ಕಾಯಿದೆಯ ಅಡಿಯಲ್ಲಿ ಸುರೇಶ್ ಅವರನ್ನು ಅದೇ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಸ್ಥಳೀಯ ಬಿಲ್ಡರ್ ಹಾಗೂ ಉದ್ಯಮಿ ಸುರೇಶ್ ಪಾಟೀಲ್ ಇತ್ತೀಚೆಗೆ ನರಬಲಿ ಹಾಗೂ ಮೂಡನಂಭಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರನಾಗಿ ಠಾಣೆಗೆ ಬಂದಿದ್ದರು. ಕೋರ್ಟಿನ ಆದೇಶದ ಪ್ರಕಾರ ನರಬಲಿ ಹಾಗೂ ಮೂಡನಂಭಿಕೆ ಪ್ರಕರಣದ ಆರೋಪಿಯು ಆತನಿಂದ ₹ 19.96 ಲಕ್ಷ ವಶಪಡಿಸಿಕೊಂಡಿದ್ದು, ನ್ಯಾಯಾಲಯದ ಆದೇಶದ ನಂತರ ಅದನ್ನು ವಸೂಲಿ ಮಾಡಲು ಠಾಣೆಗೆ ಬಂದಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ಸುರೇಶ್ ಪಾಟೀಲ್ ವಿರುದ್ಧ ನಾನಾ ಠಾಣೆಯಲ್ಲಿ 7 ಕ್ರಿಮಿನಲ್ ಕೇಸ್ ದಾಖಲಾಗಿವೆ. ಲೈಸೆನ್ಸ್ ಹೊಂದಿದ್ದ ಗನ್,ಚೂರಿ, ಮರ್ಸಿಡಿಸ್ ಕಾರನ್ನು ಜಪ್ತಿ ಮಾಡಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.