ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮತಪೆಟ್ಟಿಗೆಯನ್ನೇ ಹಿಡಿದುಕೊಂಡು ಓದಿರುವ ಘಟನೆ ಬೆಳಕಿಗೆ ಬಂದಿದೆ.
ಶನಿವಾರ ಬೆಹಾರ್ ಜಿಲ್ಲೆಯಲ್ಲಿ ಪಂಚಾಯತ್ ಚುನಾವಣೆಗೆ ಮತದಾನ ನಡೆಯುತ್ತಿತ್ತು, ಮತದಾದರೂ ಸರತಿ ಸಾಲಿನಲ್ಲಿ ನಿಂತು ಮತದಾನ ನಡೆಸುತ್ತಿದ್ದರು ಅಷ್ಟೋತ್ತಿಗಾಗಲೇ ಯುವಕನೊಬ್ಬ ಮತಗಟ್ಟೆಯಲ್ಲಿದ್ದ ಮತ ಪೆಟ್ಟಿಗೆಯನ್ನು ಹಿಡಿದು ಓಡಿಹೋಗಿದ್ದಾನೆ. ಈತ ಓಡಿ ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಬೆಳಿಗ್ಗೆಯಿಂದಲೇ ಮತದಾನ ನಡೆಯುತ್ತಿದ್ದು ಇಲ್ಲಿ ನಕಲಿ ಮತದಾನ ನಡೆದಿದೆ ಎಂದು ಇಲ್ಲಿನ ಮತದಾರರು ಕುಪಿತಗೊಂಡು ಉಂಟಾದ ಘರ್ಷಣೆ ವೇಳೆ ಕೂಚ್ ಬೆಹಾರ್ ಜಿಲ್ಲೆಯ ದಿನ್ಹಟಾದ ಬರನಾಚಿನಾ ಎಂಬಲ್ಲಿನ ಮತಗಟ್ಟೆಯೊಂದರಲ್ಲಿ ಮತಯಂತ್ರಕ್ಕೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದ್ದು ಅದರಂತೆ ಕೂಚ್ ಬೆಹಾರ್‌ನ ಮಠಭಂಗದಲ್ಲಿ ವ್ಯಕ್ತಿಯೋರ್ವ ಮತಗಟ್ಟೆಯಲ್ಲಿರುವ ಮತಪೆಟ್ಟಿಗೆಯನ್ನೇ ಕಸಿದುಕೊಂಡು ಪರಾರಿಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇತ್ತ ಯುವಕ ಮತಪೆಟ್ಟಿಗೆಯನ್ನು ಹಿಡಿದು ಓದುತ್ತಿದ್ದರೆ ಅತ್ತ ಮತಗಟ್ಟೆಯಲ್ಲಿ ಭದ್ರತೆಗಾಗಿ ನಿಯೋಜಿಸಿದ್ದ ಪೊಲೀಸರು ಏನು ಮಾಡುತ್ತಿದ್ದರು ಎಂಬುದು ಜನಸಾಮಾನ್ಯರ ಪ್ರಶ್ನೆಯಾಗಿದೆ.