Advertisement
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಿರುಷಷ್ಠಿ ಮಹೋತ್ಸವದ ಅಂಗವಾಗಿ ಬುಧವಾರ ದೇವಳದ ಧರ್ಮ ಸಮ್ಮೇಳನ ಮಂಟಪದಲ್ಲಿ ನಡೆದ ಧರ್ಮ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಧರ್ಮದ ಆಚರಣೆ, ಸಮಾಜದಲ್ಲಿ ಬದು ಕುವ ರೀತಿಯೂ ಧಾರ್ಮಿಕತೆ. ಇದನ್ನು ವ್ಯಕ್ತಿಗತವಾಗಿ ಅಳವಡಿಸಿಕೊಂಡಾಗ ಧರ್ಮ ಜಾಗೃತಗೊಳ್ಳುತ್ತದೆ ಎಂದರು.
Related Articles
ಇಂದು ಸಣ್ಣ ಮಕ್ಕಳು ವಿವಿಧ ಕಾರಣಗಳಿಂದ ತಪ್ಪು ಹಾದಿ ಹಿಡಿಯುತ್ತಿದ್ದಾರೆ. ಹೆತ್ತವರು ಎಳೆಯ ಪ್ರಾಯದಲ್ಲಿಯೇ ಅವರಿಗೆ ಧಾರ್ಮಿಕತೆಯ ಬಗ್ಗೆ ತಿಳಿವಳಿಕೆ ಮೂಡಿಸುವ ಜತೆಗೆ ನಿಜ ಬದುಕಿಗೆ ಧರ್ಮವನ್ನು ಅಳವಡಿಸುವಂತೆ ಹೇಳಬೇಕು. ಕೇವಲ ಅಂಕಗಳನ್ನಷ್ಟೇ ಗಳಿಸಲು ಕಲಿಸದೇ, ಕಷ್ಟಗಳನ್ನು ಎದುರಿ ಸುವ ರೀತಿಯನ್ನು ವಿವರಿಸಬೇಕು. ಪೂಜೆ ಪುನಸ್ಕಾರಗಳು ಮಾತ್ರ ಧಾರ್ಮಿಕತೆ ಅಲ್ಲ. ಜತೆಗೆ ಧರ್ಮದ ಆಚರಣೆ, ಸಮಾಜದಲ್ಲಿ ಬದುಕುವ ರೀತಿಯೂ ಧಾರ್ಮಿಕತೆ ಎಂದ ಅವರು, ನಾವು ನಮ್ಮ ವೃತ್ತಿಯನ್ನು ನಿಯತ್ತಿನಿಂದ ಪಾಲಿಸುತ್ತ ಹೋದಲ್ಲಿ ಧರ್ಮವನ್ನು ಪಾಲಿಸಿದಂತಾಗುತ್ತದೆ ಎಂದು ಹೇಳಿದರು.
Advertisement
ದೇಗುಲದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಪ್ರಥಮ ದರ್ಜೆ ಸಹಾಯಕ ಪಿ.ಎಸ್. ಸುಬ್ರಹ್ಮಣ್ಯ ಭಟ್ ಅವರನ್ನು ಅತಿಥಿಗಳು ಸಮ್ಮಾನಿಸಿದರು. ದೇಗುಲದ ಕಾರ್ಯನಿರ್ವಹಣಾಧಿಕಾರಿ ಎಂ.ಎಚ್. ರವೀಂದ್ರ ಸ್ವಾಗತಿಸಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೆರಾಲು ವಂದಿಸಿದರು. ವಿಶ್ವನಾಥ್ ನಡುತೋಟ ಹಾಗೂ ರತ್ನಕರ ಕಾರ್ಯಕ್ರಮ ನಿರೂಪಿಸಿದರು.