ಭೋಪಾಲ್: ತನ್ನ ಪತಿ ಹನಿಮೂನ್‌ಗೆ ಗೋವಾಕ್ಕೆ ಕರೆದುಕೊಂಡು ಹೋಗುವ ಭರವಸೆ ನೀಡಿ ಅಯೋಧ್ಯೆಗೆ ಕರೆದೊಯ್ದ ಬಳಿಕ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ.
ವಿಚ್ಛೇದನ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದು, ಸದ್ಯ ದಂಪತಿಗಳು ಕೌನ್ಸಿಲಿಂಗ್ ಸೆಷನ್‌ಗೆ ಒಳಗಾಗಿದ್ದಾರೆ ಎಂದು ಸಂಬಂಧ ಸಲಹೆಗಾರರಾದ (Relationship counsellor) ಶೈಲ್ ಅವಸ್ತಿ ಹೇಳಿದ್ದಾರೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ದಂಪತಿಗಳು ವಿವಾಹವಾಗಿದ್ದಾರೆ. ಗಂಡ ಐಟಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ತನ್ನ ಹೆಂಡತಿಯನ್ನು ತಮ್ಮ ಹನಿಮೂನ್‌ಗಾಗಿ ವಿದೇಶಿ ಸ್ಥಳಕ್ಕೆ ಕರೆದೊಯ್ಯು ಯೋಜನೆಯನ್ನು ಪೋಷಕರ ಬಳಿ ಹೇಳಿದ್ದಾರೆ. ಆದರೆ ಪೋಷಕರು ಇಬ್ಬರಿಗೆ ಹನಿಮೂನ್‌ಗೆ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಿ ಎಂದಿದ್ದಾರೆ.
ಇದನ್ನೂ ಓದಿ: Karnataka Politics: ಕಾಂಗ್ರೆಸ್ ಗೆ ಗುಡ್ ಬೈ ಹೇಳಿ ಮರಳಿ ಬಿಜೆಪಿಗೆ ಸೇರ್ಪಡೆಯಾದ ಶೆಟ್ಟರ್
ಇದರಿಂದ ದಂಪತಿಗಳ ನಡುವೆ ಮನಸ್ತಾಪ ಉಂಟಾಗಿದೆ. ಆದರೆ ಕೊನೆಯಲ್ಲಿ ಗೋವಾ ಕರೆದುಕೊಂಡು ಹೋಗುತ್ತೇನೆ ಎಂದು ಪತ್ನಿಯ ಬಳಿ ಗಂಡ ಹೇಳಿದ್ದಾರೆ. ಗೋವಾ ಹೋಗಲು ತಯಾರಾಗಿದ್ದ ಪತ್ನಿಗೆ ಪ್ರವಾಸದ ಒಂದು ದಿನದ ಮೊದಲು, ತಾಯಿಯ ಇಚ್ಛೆಯಂತೆ ನಾವು ಅಯೋಧ್ಯೆಗೆ ಹೋಗಲಿದ್ದೇವೆ ಎಂದು ಪತ್ನಿ ಬಳಿ ಹೇಳಿದ್ದಾರೆ.
ಅಯೋಧ್ಯೆಗೆ ಹೋಗಿ ಬಂದ ಬಳಿಕ, ದಂಪತಿಗಳ ನಡುವೆ ಮನಸ್ತಾಪ ಹೆಚ್ಚಾಗಿದೆ. ಈ ಕಾರಣದಿಂದ ತನ್ನ ಪತಿ ನನ್ನ ನಂಬಿಕೆಯನ್ನು ಮುರಿದಿದ್ದಾರೆ. ಮೊದಲಿನಿಂದಲೂ ತನ್ನ ಕುಟುಂಬಕ್ಕೆ ಮಾತ್ರ ಹೆಚ್ಚಿನ ಆದ್ಯತೆ ನೀಡುತ್ತಾರೆ ಎಂದು ಆರೋಪಿಸಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಸದ್ಯ ದಂಪತಿಗಳ ದಂಪತಿಗೆ ಕೌನ್ಸೆಲಿಂಗ್ ನಡೆಯುತ್ತಿದೆ ಎಂದು ಅವಸ್ತಿ ಹೇಳಿದ್ದಾರೆ.