ಕಾಸರಗೋಡು: ಕಾಶಿ ತೀರ್ಥ ಯಾತ್ರೆಗಾಗಿ ತೆರಳಿದ ಮನ್ನಿಪ್ಪಾಡಿ ವಿವೇಕಾನಂದ ನಗರದ ದೂಮಪ್ಪ ಗಟ್ಟಿ ಯಾನೆ ಕೊರಗಪ್ಪ (62) ಹೃದಯಾಘಾತದಿಂದ ಸಾವಿಗೀಡಾದರು.
Advertisement
ಇವರು ಸಹಿತ 30 ಮಂದಿ ತಂಡ ಹತ್ತು ದಿನಗಳ ಹಿಂದೆ ಕಾಶಿ ಶ್ರೀ ವಿಶ್ವನಾಥ ಕ್ಷೇತ್ರಕ್ಕೆ ತೀರ್ಥಯಾತ್ರೆ ತೆರಳಿತ್ತು. ಸೋಮವಾರ ಪವಿತ್ರ ಗಂಗಾ ಸ್ನಾನ ಮಾಡಿ, ಕ್ಷೇತ್ರ ದರ್ಶನಗೈದಿದ್ದರು. ಅಂದು ರಾತ್ರಿ 8.30 ಕ್ಕೆ ಮನೆಗೆ ಫೋನ್ ಕರೆ ಮಾಡಿ ಮನೆಯವರೊಂದಿಗೆ ಮಾತನಾಡಿದ್ದರು. ಕೆಲವೇ ಹೊತ್ತಿನ ಬಳಿಕ ದೂಮಪ್ಪ ಗಟ್ಟಿ ಅವರಿಗೆ ಹೃದಯಾಘಾತವಾಗಿದ್ದು, ತತ್‌ಕ್ಷಣ ಸಾವು ಸಂಭವಿಸಿತು.
ಮೃತ ದೇಹವನ್ನು ನ.10 ರಂದು ಬೆಳಗ್ಗೆ ಸ್ವಗೃಹಕ್ಕೆ ತಲುಪಿಸಲಾಯಿತು.