Advertisement

1,20,000 ರೂ. ಮ್ಯಾಕ್​ಬುಕ್ ಪ್ರೊ ಆರ್ಡರ್ ಮಾಡಿದಾತನಿಗೆ ಬಂದದ್ದು ನಾಯಿಗೆ ಹಾಕುವ ಪೆಡಿಗ್ರಿ.!

11:33 AM Dec 20, 2022 | Team Udayavani |

ವಾಷಿಂಗ್ಟನ್:‌ ಆನ್ಲೈನ್‌ ನಲ್ಲಿ ನಾವು ಏನನ್ನು ಬುಕ್‌ ಮಾಡುತ್ತೇವೆ ಅದೇ ವಸ್ತು ಡೆಲಿವರಿ ಆಗುತ್ತದೆ ಎಂದು ಪ್ರತಿ ಬಾರಿ ಅಂದುಕೊಳ್ಳಬಾರದು. ಈ ಮಾತು ಹೇಳಲು ಕಾರಣವೇನೆಂದರೆ ವ್ಯಕ್ತಿಯೊಬ್ಬ 1,20,000 ರೂ. ಪಾವತಿಸಿ ಆ್ಯಪಲ್ ಮ್ಯಾಕ್​ಬುಕ್ ಗಾಗಿ ಕಾದು ಕುಳಿತಿದ್ದರು. ಆದರೆ ಆತನಿಗೆ ಆದದ್ದು ಮಾತ್ರ…

Advertisement

ಇತ್ತೀಚೆಗೆ ಯುಕೆ ಡರ್ಬಿಶೈರ್ ಮೂಲದ ಅಲನ್ ವುಡ್ ತನ್ನ ಮಗಳಿಗೆ ಕನಸಿನ ಆ್ಯಪಲ್ ಮ್ಯಾಕ್​ಬುಕ್ ಖರೀದಿಸಲು ಬರೋಬ್ಬರಿ 1,20,000 ರೂ. ಒಟ್ಟು ಮಾಡಿ ಅಮೆಜಾನ್‌ ನಿಂದ ಆರ್ಡರ್‌ ಮಾಡಿದ್ದಾನೆ. ಅಮೆಜಾನ್‌ ನಿಂದ ಎರಡು ಬಾಕ್ಸ್‌ ಗಳು ಬಂದಿವೆ. ಇನ್ನೇನು ಆ್ಯಪಲ್ ಮ್ಯಾಕ್​ಬುಕ್ ತೆಗೆದು ನೋಡಬೇಕು ಆ ವೇಳೆಗಾಗಲೇ ಬಾಕ್ಸ್‌ ಒಳಗೆ ಇದ್ದದ್ದನ್ನು ನೋಡಿ ಶಾಕ್‌ ಆಗಿದ್ದಾರೆ.

ಇದನ್ನೂ ಓದಿ:8ನೇ ಕ್ಲಾಸ್‌ ಫೇಲ್, ಐಪಿಎಸ್‌ ಅಧಿಕಾರಿಯ ಪೋಸ್.. ಮಹಿಳೆಯರನ್ನು ವಂಚಿಸಿ ಹಣ ಲೂಟಿ

ಅಮೆಜಾನ್‌ನ ಪ್ಯಾಕೇಜ್‌ನಲ್ಲಿ ಮ್ಯಾಕ್​ಬುಕ್ ಪ್ರೊ ಬದಲಿಗೆ ಎರಡು ಬಾಕ್ಸ್‌ಗಳ ನಾಯಿಗೆ ಹಾಕುವ ಪೆಡಿಗ್ರಿ ಆಹಾರವಿರುತ್ತದೆ. ಇದರಲ್ಲಿ 24 ಪ್ಯಾಕೆಟ್‌ಗಳ “ಮಿಕ್ಸ್ಡ್ ಸೆಲೆಕ್ಷನ್ ಇನ್ ಜೆಲ್ಲಿ” ಫ್ಲೇವರ್‌ಗಳಿರುತ್ತವೆ. ಇದು ಅಲನ್‌ ಅವರಿಗೆ ಅಚ್ಚರಿ ತರುತ್ತದೆ.

“ಮೊದಲಿಗೆ ನಾನು ಗೊಂದಲವನ್ನು ಪರಿಹರಿಸಬಹುದೆಂದು ನಂಬಿದ್ದೆ, ಆದರೆ ಅಮೆಜಾನ್ ಗ್ರಾಹಕ ಸೇವೆಯೊಂದಿಗೆ ಮಾತನಾಡಿದ ನಂತರ, ಅವರು ನನಗೆ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.  ನಾಯಿಯ ಆಹಾರವನ್ನು ಗೋದಾಮಿಗೆ ಹಿಂತಿರುಗಿಸಿದೆ, ಆದರೆ ಅದು ಯಾವುದೇ ವ್ಯತ್ಯಾಸವನ್ನು ಮಾಡಲಿಲ್ಲ”ವುಡ್ ಹೇಳಿದರು.

Advertisement

15 ಗಂಟೆಗೂ ಹೆಚ್ಚು ಕಾಲ ಗ್ರಾಹಕ ಸಿಬ್ಬಂದಿಯೊಂದಿಗೆ ಅಲನ್‌ ಮಾತನಾಡಿದ್ದಾರೆ. ಪ್ರತಿ ಬಾರಿಯೂ ಅವರಿಗೆ ಅಲ್ಲಿಂದ ಯಾವುದೇ ಸರಿಯಾದ ಉತ್ತರ ಸಿಕ್ಕಿಲ್ಲ. ಇದುವೆರಗೂ ಈ ರೀತಿಯ ಸಮಸ್ಯೆ ಅಲನ್‌ ಅವರಿಗೆ ಆಗಿಲ್ಲ. ಕಂಪೆನಿ ಶೀಘ್ರದಲ್ಲಿ ಅಲನ್‌ ಸಮಸ್ಯೆಯನ್ನು ಬಗೆಹರಿಸುವುದಾಗಿ ಹೇಳಿದೆ. ಆದರೆ ಇದುವರೆಗೆ ಅದು ಆಗಿಲ್ಲ ಎಂದು ವರದಿ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next