ನವದೆಹಲಿ : ಚಿಕ್ಕ ಚಿಕ್ಕ ಕಂದಮ್ಮಗಳಿಗೆ ಆಹಾರ ಕೊಡುವುದು ತುಂಬಾನೆ ಕಷ್ಟದ ಕೆಲಸ. ಏನೂ ಅರಿಯದ ಆ ಮಕ್ಕಳು ತಿನ್ನಿಸಿದರೆ ತಿನ್ನುವುದಿಲ್ಲ. ಅದ್ರಲ್ಲೂ ಕೆಲವು ತುಂಟ ಮಕ್ಕಳಂತೂ ಅವುಗಳ ಚೇಷ್ಟೆಯಿಂದಲೇ ಪೋಷಕರಿಗೆ ಕಷ್ಟವಾಗಿರುತ್ತವೆ. ಆದ್ರೆ ಏನು ಮಾಡುವುದು, ಮಕ್ಕಳಿಗೆ ಹೇಗಾದ್ರು ಮಾಡಿ ಊಟ ಮಾಡಿಸಬೇಕಲ್ಲ.. ಇದ್ರಿಂದ ಹೆತ್ತವರು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ.
ಮಕ್ಕಳಿಗೆ ವಿಭಿನ್ನ ರೀತಿಯಲ್ಲಿ ಹಾಲು ಕುಡಿಸುವ ವಿಡಿಯೋಗಳನ್ನು ಸಾಮಾನ್ಯವಾಗಿ ನೀವು ಸೋಷಿಯಲ್ ಮೀಡಿಯಾಗಳಲ್ಲಿ ನೋಡಿರುತ್ತೀರಿ. ಇದೀಗ ಅಂತಹದ್ದೇ ಮತ್ತೊಂದು ಫನ್ನಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ತಂದೆಯೊಬ್ಬ ತನ್ನ ಮಗುವಿಗೆ ವಿಶೇಷ ರೀತಿಯಲ್ಲಿ ಹಾಲು ಕುಡಿಸುವ ವಿಡಿಯೋ ಇದಾಗಿದೆ.
ಸಿಯಾಟಲ್‌ನ ರೂಢಿ ವಿಲ್ಲಿಂಗ್ಹ್ಯಾಮ್ ಎಂಬ ವ್ಯಕ್ತಿ ತನ್ನ ಪುಟ್ಟ ಮಗಳಿಗೆ ಹಾಲು ಕುಡಿಸಲು ಹೊಸ ಐಡಿಯಾ ಒಂದನ್ನು ಮಾಡಿದ್ದು, ಎಂಟು ತಿಂಗಳ ಪುತ್ರಿ ಲಿಲ್ಲಿಗೆ ಹಾಲು ಕುಡಿಸಲು ಇವರು ಬೇಬಿ ಬಿಯರ್ ಬಾಂಗ್ ಅನ್ನು ಸಿದ್ಧಪಡಿಸಿದ್ದರು. ಇದ್ರಿಂತ ಆತನ ಪುತ್ರಿ ಆರಾಮವಾಗಿ ಹಾಲನ್ನು ಕುಡಿಯುತ್ತಾಳಂತೆ. ಈ ಬಗ್ಗೆ ತಮ್ಮ ಇನ್ ಸ್ಟಾಗ್ರಾಮಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ರೂಢಿ ವಿಲ್ಲಿಂಗ್ಹ್ಯಾಮ್ ತನ್ನ ಮಗುವನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಕೊಂಡೊಯ್ದಾಗ ವೈದ್ಯರು ಮುಂದಿನ ಬಾರಿ ಬರುವಾಗ ನಿಮ್ಮ ಮಗು ಹೆಚ್ಚು ಕ್ಯಾಲೊರಿಯನ್ನು ಹೊಂದಿರಬೇಕು ಎಂದು ಸಲಹೆ ನೀಡಿದ್ದಾರೆ. ಇದರಿಂದ ಮಗುವಿಗೆ ಹಾಲು ಕುಡಿಸಲು ರೂಢಿ ವಿಲ್ಲಿಂಗ್ಹ್ಯಾಮ್ ಈ ಹೊಸ ಐಡಿಯಾ ಮಾಡಿದ್ದು, ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.