Advertisement

ಕುಡಿದ ಮತ್ತಿನಲ್ಲಿ ಗಗನಸಖಿಯೊಂದಿಗೆ ಅಸಭ್ಯ ವರ್ತನೆ: ವ್ಯಕ್ತಿ ಪೊಲೀಸರ ವಶಕ್ಕೆ

05:04 PM May 15, 2023 | Team Udayavani |

ನವದೆಹಲಿ: ದುಬೈ-ಅಮೃತಸರಕ್ಕೆ ಹಾರಾಟ ನಡೆಸುತ್ತಿದ್ದ ವಿಮಾನದಲ್ಲಿ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಗಗನಸಖಿಯೊಬ್ಬಳಿಗೆ ಕಿರುಕುಳ ನೀಡಿದ ಘಟನೆಗೆ ಸಂಬಂಧಿಸಿ ವ್ಯಕ್ತಿಯನ್ನು ಪೊಲೀಸರು ಬಂದಿಸಿದ್ದಾರೆ.

Advertisement

ಪಂಜಾಬ್‌ನ ಜಲಂಧರ್‌ ಕೋಟ್ಲಿ ಗ್ರಾಮದವರಾದ ರಾಜಿಂದರ್ ಸಿಂಗ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಗಗನಸಖಿಯೊಂದಿಗೆ ಯಾವುದೋ ವಿಚಾರಕ್ಕೆ ಸಂಬಂಧಿಸಿ ವಾಗ್ವಾದಕ್ಕೆ ಇಳಿದಿದ್ದಾನೆ ಅಲ್ಲದೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಗಗನಸಖಿ ವಿಮಾನದ ಇತರ ಸಿಬಂದಿಗಳಲ್ಲಿ ಹೇಳಿಕೊಂಡಿದ್ದು ಘಟನೆಗೆ ಸಂಬಂಧಿಸಿ ಅಮೃತಸರದ ನಿಯಂತ್ರಣ ಕೊಠಡಿಗೆ ಮಾಹಿತಿ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಮಾನ ಶ್ರೀ ಗುರು ರಾಮದಾಸ್ ಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.

ತನಿಖೆ ವೇಳೆ ವ್ಯಕ್ತಿ ಮದ್ಯದ ಅಮಲಿನಲ್ಲಿದ್ದ ಎನ್ನಲಾಗಿದೆ, ಸಿಂಗ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 ಮತ್ತು ಸೆಕ್ಷನ್ 509 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Divorce ಏಕರೂಪದ ಕಾನೂನು ಮಾಡಿ: ಸುಪ್ರೀಂಗೆ ಶಮಿ ಮಾಜಿ ಪತ್ನಿ ಮನವಿ

Advertisement

Udayavani is now on Telegram. Click here to join our channel and stay updated with the latest news.

Next