ಒಡಿಶಾ: ವಿವಾಹಿತ ವ್ಯಕ್ತಿಯೊಬ್ಬ ತೃತೀಯ ಲಿಂಗಿಯನ್ನು ಮದುವೆಯಾದ ಘಟನೆ ಒಡಿಶಾದ ನಾರ್ಲಾದಲ್ಲಿ ನಡೆದಿದೆ. 32 ವರ್ಷದ ವ್ಯಕ್ತಿಗೆ ಈಗಾಗಲೇ ಮದುವೆಯಾಗಿ 2 ವರ್ಷದ ಗಂಡು ಮಗುವಿದೆ. ಕಳೆದ ವರ್ಷ ರಾಯಘಡ ಅಂಬಾಡೋಲದಲ್ಲಿ ತೃತೀಯ ಲಿಂಗಿ ಮಹಿಳೆಯೊಬ್ಬಳು ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದದ್ದನ್ನು ನೋಡಿದ್ದ ವಿವಾಹಿತ ಪುರುಷ ಆಕೆಗೆ ಮಾರು ಹೋಗಿದ್ದರು. ಕೂಡಲೇ ಆತ ತೃತೀಯ ಲಿಂಗಿಯ ಮೊಬೈಲ್ ನಂಬರ್ ನ್ನು ಪಡೆದುಕೊಂಡು ಪ್ರತಿ ದಿನ ಮಾತಾನಾಡಲು ಶುರು ಮಾಡಿದ್ದರು.
ತಿಂಗಳ ಹಿಂದೆ ಗಂಡ, ಪ್ರತಿ ನಿತ್ಯ ಯಾರೊಂದಿಗೆ ಫೋನಿನಲ್ಲಿ ಮಾತಾನಾಡುತ್ತಿದ್ದೀರಾ ಎನ್ನುವುದನ್ನು ಹೆಂಡತಿ ಕೇಳಿದಾಗ, ತೃತೀಯ ಲಿಂಗಿಯೊಂದಿಗಿನ ಸಂಬಂಧವನ್ನು ಗಂಡ ಹೆಂಡತಿ ಬಳಿ ಹೇಳಿದ್ದಾರೆ.
ಗಂಡನ ಸಂಬಂಧವನ್ನು ಹೆಂಡತಿ ಒಪ್ಪಿಕೊಳ್ಳುತ್ತಾಳೆ. ಇದಾದ ಬಳಿಕ ಗಂಡ ಹಾಗೂ ತೃತೀಯ ಲಿಂಗಿಯ ವಿವಾಹವನ್ನು ಹೆಂಡತಿ ಮಾಡಿಸಲು ಸಿದ್ಧತೆ ನಡೆಸುತ್ತಾಳೆ. ಕೆಲವೇ ಕೆಲವು ಜನರ ಹಾಗೂ ತೃತೀಯ ಲಿಂಗಿಯ ಸಮುದಾಯವರ ಸಮ್ಮುಖದಲ್ಲಿ ನಾರ್ಲಾದ ದೇವಸ್ಥಾನವೊಂದರಲ್ಲಿ ಮದುವೆ ಮಾಡಿಸಿದ್ದಾರೆ.
ಮೊದಲ ಪತ್ನಿ ಇಬ್ಬರ ಮದುವೆ ಮಾಡಿಸಿದ್ದು ಮಾತ್ರವಲ್ಲದೇ, ಆಕೆಯನ್ನು ಕೂಡ ತಮ್ಮ ಮನೆಯಲ್ಲಿ ಇರುವಂತೆ ಒಪ್ಪಿಗೆ ಕೊಟ್ಟಿದ್ದಾರೆ.
ಹಿಂದೂ ಸಂಪ್ರದಾಯದ ಹಾಗೂ ಭಾರತೀಯ ಕಾನೂನಿನ ಪ್ರಕಾರ ಎರಡನೇ ವಿವಾಹ (ತೃತೀಯ ಲಿಂಗಿ ಅಥವಾ ಮಹಿಳೆಯೊಂದಿಗಿನ) ಸಮ್ಮತವಲ್ಲ ಎಂದು ಒರಿಸ್ಸಾ ಹೈಕೋರ್ಟ್‌ನ ಹಿರಿಯ ವಕೀಲ ಶ್ರೀನಿವಾಸ ಮೊಹಂತಿ ಇಂಡಿಯಾ ಟುಡೇಗೆ ಹೇಳಿದ್ದಾರೆ.