ಹೊಸದಿಲ್ಲಿ : ಅಬ್ಬಾ..ಏನ್ ಕಾಲ ಬಂತಪ್ಪ…ಎಂದು ನೀವು ಹೇಳ್ಬಹುದು. ಹೆಂಡತಿ ಸ್ನಾನ ಮಾಡುತ್ತಿರುವುದನ್ನು ಕದ್ದು ನೋಡುತ್ತಿದ್ದ ಎಂಬ ಕಾರಣಕ್ಕೆ ವರ್ಷದ ಬಾಲಕನನ್ನು ವ್ಯಕ್ತಿಯೊಬ್ಬ ಬರ್ಬರವಾಗಿ ಹತ್ಯೆಗೈದ ಘಟನೆ ಓಕ್ಲಾ ಫೇಸ್ 2 ಪ್ರದೇಶದಲ್ಲಿ ನಡೆದಿದೆ.
ರೋಹಿತ್ ಎಂಬ 19 ವರ್ಷದ ಯುವಕ ಬಾಲಕನನನ್ನು ಕೊಲೆಗೈದು ಇದೀಗ ಬಂಧನಕ್ಕೊಳಗಾಗಿದ್ದಾನೆ . ಹತ್ಯೆಗೀಡಾದ ಬಾಲಕ ಆರೋಪಿ ರೋಹಿತ್ ನ ಮನೆಯಿಂದ ಅನತಿ ದೂರದಲ್ಲಿ ವಾಸವಾಗಿದ್ದ .
ಸ್ಲಂ ನಿಂದ ಬಾಲಕನೊಬ್ಬ ನಾಪತ್ತೆ ಯಾಗಿರುವ ಪ್ರಕರಣದ ತನಿಖೆಗಿಳಿದಾಗ ಪೊಲೀಸರಿಗೆ ಬೆಚ್ಚಿ ಬೀಳಿಸುವ ಅಂಶ ಬೆಳಕಿಗೆ ಬಂದಿದೆ.
ಮನೆಯ ಅನತಿ ದೂರದಲ್ಲಿ ಹಾಸಿಗೆಯಲ್ಲಿ ಸುತ್ತಿ ಹಿಟ್ಟಿನ ಚೀಲದಲ್ಲಿ ತುಂಬಿದ್ದ ಬಾಲಕನ ಶವ ಪತ್ತೆಯಾಗಿತ್ತು. ಚೀಲದಲ್ಲಿ ರುಕ್ಮಿಣಿ ಎಂದು ಬರೆದಿತ್ತು. ಇದನ್ನು ಅಂಗಡಿಯಾತನ ಬಳಿ ವಿಚಾರಿಸಿದಾಗ ರೋಹಿತ್ ಹಿಟ್ಟು ಖರೀದಿ ಮಾಡಿರುವುದನ್ನು ತಿಳಿಸಿದ್ದಾನೆ . ಕೂಡಲೇ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ .
ವಿಚಾರಣೆ ವೇಳೆ ರೋಹಿತ್, ಬಾಲಕನನ್ನ ಹೆಂಡತಿ ಸ್ನಾನ ಮಾಡುವುದನ್ನು ಕದ್ದು ನೋಡುತ್ತಿದ್ದ, ಅಶ್ಲೀಲ ಮಾತುಗಳನ್ನು ಆಡುತ್ತಿದ್ದ ಹೀಗಾಗಿ ಕೊಲೆಗೈದೆ ಎಂದಿದ್ದಾನೆ . ಆದರೆ ತೀವ್ರ ವಿಚಾರಣೆ ನಡೆಸಿದಾಗ ನನ್ನ 20 ಸಾವಿರ ಸಾಲ ತೀರಿಸುವ ಸಲುವಾಗಿ ಬಾಲಕನ್ನು ಅಪಹರಿಸಿದ್ದೆ , 20 ಸಾವಿರ ಆತನ ತಂದೆಯ ಬಳಿಯಿಂದ ಕೇಳಬೇಕೆಂದಿದ್ದೆ ಎಂದು ತಿಳಿಸಿದ್ದಾನೆ .
ಬಾಲಕನ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯ ನಡೆಸಿದ ಬಗ್ಗೆ ಆರೋಪಿ ಹೇಳಿಕೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ .